HomeFresh Newsಲಕ್ನೋದಲ್ಲಿ ಅಪ್ರಾಪ್ತ ಹುಡುಗಿಯನ್ನು ಮಾರುತ್ತಿದ್ದ ಮೂವರು ಕದೀಮರ ಬಂಧನ

ಲಕ್ನೋದಲ್ಲಿ ಅಪ್ರಾಪ್ತ ಹುಡುಗಿಯನ್ನು ಮಾರುತ್ತಿದ್ದ ಮೂವರು ಕದೀಮರ ಬಂಧನ

ಕಳ್ಳ ಮದುವೆಗಾಗಿ ಸಣ್ಣ ಪ್ರಾಯದ ಎಳೆಯ ಬಾಲಕಿಯನ್ನು ಮಾರಾಟ ಮಾಡುತ್ತಿದ್ದ ಮೂವರು ಕದೀಮರು ಲಕ್ನೋ ಪೋಲೀಸರಿಗೆ ಸಿಕ್ಕಿಬಿದ್ದಿದ್ದಾರೆ.
ಸಣ್ಣ ಬಾಲಕಿಯರನ್ನು ಸಹಾಯ ಮಾಡುವ ನೆಪದಲ್ಲಿ ಪರಿಚಯಿಸಿಕೊಂಡು, ಕಳ್ಳ ದಾರಿಯ ಮದುವೆಗೆ ಅಪ್ರಾಪ್ತರನ್ನು ಮಾರಾಟ ಮಾಡುತ್ತಿದ್ದ ಅಂತರ ರಾಜ್ಯ ಕದೀಮರ ತಂಡವನ್ನು ಲಕ್ನೋ ಪೋಲೀಸರು ಬಂಧಿಸಿದ್ದಾರೆ. ಒಂದು ಹುಡುಗಿಯನ್ನು ಮಾರುವಾಗಲೇ ಮೂವರ ಗ್ಯಾಂಗು ಸಿಕ್ಕಿಬಿದ್ದಿದೆ. ಇವರು ಹಿಂದೆಯೂ ಇಂತಾ ಅವ್ಯವಹಾರ ನಡೆಸಿದ್ದರು ಎಂದು ತಿಳಿದುಬಂದಿದೆ.


ಮುಖ್ಯವಾಗಿ ಉತ್ತರ ಪ್ರದೇಶದ ಬಡ ಕುಟುಂಬದ ಎಳೆಯ ಬಾಲಕಿಯರನ್ನು ಈ ಗುಂಪು ರಾಜಸ್ತಾನಕ್ಕೆ ಮಾರಾಟ ಮಾಡುತ್ತಿತ್ತು. ಹೆಣ್ಣಿನ ಫೋಟೋವನ್ನು ರಾಜಸ್ತಾನದ ಏಜೆಂಟನಿಗೆ ಮೊದಲು ಕಳುಹಿಸುತ್ತಿದ್ದರು. ಅವರು ಮದುವೆ ನಿಶ್ಚಯ ಮಾಡಿ ಹಣ ಕಳುಹಿಸಿದ ಮೇಲೆ ಹುಡುಗಿಯನ್ನು ರವಾನಿಸಲಾಗುತ್ತಿತ್ತು. ಗನಿಹರ್ ಗ್ರಾಮದ ೧೨ ಹಾಗೂ ೧೬ರ ಪ್ರಾಯದ ಇಬ್ಬರು ಹುಡುಗಿಯರನ್ನು ಇದೇ ಮೇ ೧೨ರನ್ನು ಈ ಗ್ಯಾಂಗು ರಾಜಸ್ತಾನಕ್ಕೆ ಮಾರಿತ್ತು.
ಹುಡುಗಿಯ ಅಜ್ಜ ಈ ಸಂಬಂಧ ಮೋಹನ್ ಗಂಜ್ ಪೋಲೀರಿಗೆ ದೂರು ನೀಡಿದ್ದರು. ಹೆಣ್ಣಿನ ತಾಯಿಯನ್ನು ಒಬ್ಬ ಮಹಿಳೆ ಭೇಟಿಯಾಗಿ ರಂಗು ಮಾತನಾಡಿ ವಂಚಿಸಿದ್ದಾಳೆ ಎಂಬ ದೂರಿನ ಮೇಲೆ, ನಾಲ್ಕು ಪೋಲೀಸು ತಂಡಗಳು ತನಿಖೆಗಿಳಿದವು. ಮೋಹನ್ ಗಂಜ್ ಪೋಲೀಸರು ಈ ಸಂಬಂಧ ಅನುರಾಗ್ ಯಾದವ್, ಮೊಹಮ್ಮದ್ ಅಕ್ತರ್ ಮತ್ತು ಪ್ರಿಯಾ ಪಟೇಲ್ ಅಲಿಯಾಸ್ ಶೀಲಾ ಎಂಬವರನ್ನು ಅಟ್ರೋಲಿ ಗಡಿಯಲ್ಲಿ ಬಂಧಿಸಿದ್ದಾರೆ. ಇವರು ರಾಜಸ್ತಾನದ ಕೋಟಕ್ಕೆ ಹುಡುಗಿಯರನ್ನು ಮಾರಿದ್ದರು.

RELATED ARTICLES

LEAVE A REPLY

Please enter your comment!
Please enter your name here

Most Popular

Recent Comments