- ಕನ್ನಡ ಚಿತ್ರರಂಗಕ್ಕೆ ಮತ್ತೊಂದು ದುಃಖದ ಸುದ್ದಿ. ‘ಮೆಜೆಸ್ಟಿಕ್’ ಚಿತ್ರದ ನಿರ್ಮಾಪಕ ಬಾ.ಮಾ. ಹರೀಶ್ ಅವರ ಪುತ್ರ ಉಲ್ಲಾಸ್ ಹೃ*ದಯಾಘಾತದಿಂದ ನಿಧನರಾಗಿದ್ದಾರೆ. ಶಿವಮೊಗ್ಗ ಜಿಲ್ಲೆಯ ಕೊಡಚಾದ್ರಿ ಬೆಟ್ಟಕ್ಕೆ ಟ್ರೆಕ್ಕಿಂಗ್ಗೆ ತೆರಳಿದ್ದ ವೇಳೆ ಅವರಿಗೆ ಹೃದಯಾಘಾತ ಸಂಭವಿಸಿದ್ದು, ಚಿಕಿತ್ಸೆ ಫಲಕಾರಿಯಾಗದೆ ಕೊನೆಯುಸಿರೆಳೆದಿದ್ದಾರೆ.
ಉಲ್ಲಾಸ್, ‘ಸ್ಕೂಲ್ ಆಫ್ ಸಿನಿಮಾ’ ಸಂಸ್ಥೆಯ ಮೂಲಕ ಮಕ್ಕಳಿಗೆ ನಟನೆಯ ತರಬೇತಿ ನೀಡುತ್ತಿದ್ದರು. ಹೊಸ ಪ್ರತಿಭೆಗಳನ್ನು ರೂಪಿಸುವಲ್ಲಿ ಅವರು ವಿಶೇಷ ಆಸಕ್ತಿ ಹೊಂದಿದ್ದು, ಅನೇಕ ಮಕ್ಕಳಿಗೆ ಸಿನಿಮಾ ಮತ್ತು ಅಭಿನಯ ಕ್ಷೇತ್ರದತ್ತ ಮಾರ್ಗದರ್ಶನ ನೀಡಿದ್ದರು.
ನಟನೆ ತರಬೇತಿಯ ಜೊತೆಗೆ ಸಿನಿಮಾ ನಿರ್ಮಾಣದಲ್ಲಿಯೂ ಉಲ್ಲಾಸ್ ತಮ್ಮದೇ ಛಾಪು ಮೂಡಿಸಿದ್ದರು. ಅವರು ನಿರ್ಮಿಸಿದ್ದ ಸಿನಿಮಾಗಳ ಮೂಲಕ ಚಿತ್ರರಂಗದಲ್ಲಿ ಗಮನ ಸೆಳೆದಿದ್ದರು. ಇತ್ತೀಚೆಗಷ್ಟೇ ತಮ್ಮ ನಿರ್ಮಾಣದ ಸಿನಿಮಾವೊಂದಕ್ಕೆ ರಾಜ್ಯ ಪ್ರಶಸ್ತಿ ಸ್ವೀಕರಿಸಿ ಸಂಭ್ರಮಿಸಿದ್ದ ಉಲ್ಲಾಸ್, ಭರವಸೆಯ ಯುವ ನಿರ್ಮಾಪಕರಾಗಿ ಗುರುತಿಸಿಕೊಂಡಿದ್ದರು.
ಕುಟುಂಬದಲ್ಲಿ ಸಂತಸದ ವಾತಾವರಣ ಮನೆ ಮಾಡಿದ್ದ ಸಂದರ್ಭದಲ್ಲೇ ಈ ದುರಂತ ಸಂಭವಿಸಿದೆ. ಉಲ್ಲಾಸ್ ಅವರ ವಿವಾಹ ಚಂದನ್ ಅವರೊಂದಿಗೆ ಇದೇ ವರ್ಷದ ಡಿಸೆಂಬರ್ 3ರಂದು ನಡೆಯುವಂತೆ ನಿಗದಿಯಾಗಿತ್ತು. ಮದುವೆ ಸಿದ್ಧತೆಗಳು ಭರದಿಂದ ಸಾಗುತ್ತಿದ್ದ ವೇಳೆಯೇ ಅವರ ಅಕಾಲಿಕ ನಿಧನ ಕುಟುಂಬದ ಕನಸುಗಳನ್ನು ನುಚ್ಚುನೂರಾಗಿಸಿದೆ.


