HomeFresh Newsಪುರಸಭೆಯಿಂದ ರಸ್ತೆ ಗುಂಡಿಗಳಿಗೆ ತಾತ್ಕಾಲಿಕ ಮುಕ್ತಿ

ಪುರಸಭೆಯಿಂದ ರಸ್ತೆ ಗುಂಡಿಗಳಿಗೆ ತಾತ್ಕಾಲಿಕ ಮುಕ್ತಿ

ಮೂಡುಬಿದಿರೆ ಪೇಟೆಯ ರಸ್ತೆಗಳಲ್ಲಿ ಕಾಣಿಸಿಕೊಂಡಿದ್ದ ಗುಂಡಿಗಳನ್ನು ಪುರಸಭೆಯು ಮುಚ್ಚುವ ಮೂಲಕ ತಾತ್ಕಾಲಿಕ ಮುಕ್ತಿ ನೀಡಿದೆ.

ಪುರಸಭೆಯ ವ್ಯಾಪ್ತಿಯ ರಸ್ತೆಗಳಲ್ಲಿ ಅಲ್ಲಲ್ಲಿ ಗುಂಡಿಗಳಾಗಿದ್ದು ಇವು ವಾಹನ ಸವಾರರಿಗೆ ಮೃತ್ಯುಗುಂಡಿಗಳಾಗಿ ಪರಿಣಮಿಸುತ್ತಿದ್ದು ಈ ಬಗ್ಗೆ ಮಾಧ್ಯಮವು ಬುಧವಾರದಂದು “ವಾಹನ ಸವಾರರೇ ಎಚ್ಚರ…!
ರಸ್ತೆಗಳಲ್ಲಿ ಮರಣ ಮೃದಂಗ ಬಾರಿಸಲು ಕಾಯುತ್ತಿವೆ ಮೃತ್ಯು ಗುಂಡಿಗಳು” ಎಂಬ ಶೀಷಿ೯ಕೆಯಡಿ ಸುದ್ದಿ ಪ್ರಕಟಿಸಿತ್ತು.

ಈ ಬಗ್ಗೆ ಪುರಸಭೆಯು ಬುಧ ವಾರ ರಾತ್ರಿ ವೇಳೆ ಮಳೆ ಬಿಡುವು ನೀಡಿದಾಗ ತ್ವರಿತವಾಗಿ ಅರಣ್ಯ ಇಲಾಖೆಯ ಬಳಿಯಿಂದ ಅಮರಶ್ರೀ ಟಾಕೀಸಿಗೆ ಹಾದು ಹೋಗುವ ರಸ್ತೆ ಹಾಗೂ ಹಳೆ ಪೊಲೀಸ್ ಬಳಿಯಲ್ಲಿದ್ದ ಬೃಹತ್ ಗುಂಡಿಗಳನ್ನು ಮುಚ್ಚಿಸುವ ಕಾಯ೯ವನ್ನು ಕೈ ಗೊಂಡಿತು.

ಇನ್ನು ಪಿಡಬ್ಲ್ಯೂಡಿ ಇಲಾಖೆಗೆ ಸಂಬಂಧಿಸಿದ ಮತ್ತು ಪುರಸಭೆಗೆ ಸಂಬಂಧಿಸಿದ ಕೆಲವು ಕಡೆಗಳ ರಸ್ತೆಗಳಲ್ಲಿ ಅಪಾಯಕಾರಿ ಗುಂಡಿಗಳಿದ್ದು ಮಳೆ ಸ್ವಲ್ಪ ಬೀಡುವು ನೀಡಿದರೆ ಅದನ್ನೂ ಮುಚ್ಚುವ ಕಾಯ೯ವನ್ನು ಕೈಗೊಳ್ಳಲಾಗುವುದೆಂದು ಪುರಸಭಾ ಮುಖ್ಯಾಧಿಕಾರಿ ಇಂದು ಎಂ. ಅವರು ತಿಳಿಸಿದರು.

Sudha Interior new 1
RELATED ARTICLES

LEAVE A REPLY

Please enter your comment!
Please enter your name here

Most Popular

Recent Comments