ಬೆಂಗಳೂರಿನ ಆಕ್ಸ್ಫರ್ಡ್ ಕಾನೂನು ಕಾಲೇಜಿಸಲಾಗಿದ್ದ ರಾಷ್ಟ್ರಮಟ್ಟದ ಅಣುಕು ನ್ಯಾಯಾಲಯ ಸ್ಪರ್ಧೆಯಲ್ಲಿ ಮಂಗಳೂರಿನ ಶ್ರೀ ಧರ್ಮಸ್ಥಳ ಮಂಜುನಥೇಶ್ವರ ಕಾನೂನು ಕಾಲೇಜಿಗೆ ಸಮಗ್ರ ತಂಡ ಪ್ರಶಸ್ತಿ ಲಭಿಸಿದೆ.ಸೆ.1 ರಿಂದ 3ರ ವರೆಗೆ ನಡೆದಿದ್ದ ಈ ಸ್ಪ ರ್ಧೆಯಲ್ಲಿ ಎಸ್ ಡಿ ಎಂ ಕಾನೂನು ಕಾಲೇಜಿನ ವಿದ್ಯಾಥಿಗಳಾದ ಸಚಿನ್ ಹೆಗ್ಡೆ, ವಿನೀತ್ ಹಾಗೂ ಮಯೂರ್ ಅವರು ಭಾಗವಹಿಸಿ ವಿವಿಧ ವಿಭಾಗಳಲ್ಲಿ ವಿಜೇತರಾಗಿ ಸಮಗ್ರ ಪ್ರಶಸ್ತಿಯನ್ನು ತಮ್ಮದಾಗಿಸಿಕೊಂಡರು.

ಎಂ. ಅತ್ಯತ್ತಮ ನ್ಯಾಯವಾದಿ ಪ್ರಶಸ್ತಿಯನ್ನು ತಮ್ಮದಾಗಿಸಿಕೊಂಡರು. ರಾಷ್ಟ್ರಮಟ್ಟದಲ್ಲಿ ನಡೆದ ಈ ಸ್ವರ್ಧೆಯಲ್ಲಿ ದೇಶದ ವಿವಿಧ ಒಟ್ಟು 15 ಕಾಲೇಜುಗಳ ವಿದ್ಯಾರ್ಥಿಗಳು ಭಾಗವಹಿದ್ದರು.
ವಿಜೇತರನ್ನು ಕಾಲೇಜಿನ ಆಡಳಿತ ಮಂಡಳಿ, ಪ್ರಾಂಶುಪಾಲ ಡಾ|| ತಾರಾನಾಥ, ಸಂಯೋಜಕ ಡಾ|| ಚಂದ್ರಲೇಖ ಅವರು ಅಭಿನಂಧಿಸಿದ್ದಾರೆ.
