HomeFresh Newsಸಂತ ಅಲೋಶಿಯಸ್ ಗೊನ್ಝಾಗ ಶಾಲೆಯಲ್ಲಿ‘ಪ್ರಕೃತಿ’ ಗೋ ಗ್ರೀನ್ ಸಪ್ತಾಹದ  ಸಮಾರೋಪ ಸಮಾರಂಭ

ಸಂತ ಅಲೋಶಿಯಸ್ ಗೊನ್ಝಾಗ ಶಾಲೆಯಲ್ಲಿ‘ಪ್ರಕೃತಿ’ ಗೋ ಗ್ರೀನ್ ಸಪ್ತಾಹದ  ಸಮಾರೋಪ ಸಮಾರಂಭ

ಮಂಗಳೂರು: ನಾವು ಪ್ರಕೃತಿಗೆ ಮರಳಿ ಕೊಡುವ ತಲೆಮಾರಾಗಬೇಕು. ಭೂಮಿಗೆ ಸೂಪರ್ ಹೀರೋಗಳು ಬೇಕಾಗಿಲ್ಲ; ಜವಾಬ್ದಾರಿಯುತ ಹಸಿರು ಯೋಧರು ಬೇಕಾಗಿದ್ದಾರೆ” ಎಂದು ಪರಿಸರವಾದಿ ಶ್ರೀ ಜೀತ್ ಮಿಲನ್ ರೋಚೆ ಅವರು ಸಂತ ಅಲೋಶಿಯಸ್ ಗೊನ್ಝಾಗ ಶಾಲೆಯಲ್ಲಿ 2026ರ ಜುಲೈ 6ರಂದು ನಡೆದ ‘ಪ್ರಕೃತಿ’ ಗೋ ಗ್ರೀನ್ ಸಪ್ತಾಹದ  ಸಮಾರೋಪ ಸಮಾರಂಭದ ಮುಖ್ಯ ಅತಿಥಿಯಾಗಿ ಭಾಗವಹಿಸಿ ಮಾತನಾಡಿದರು. 

ಮರಗಳನ್ನು ನೆಡುವುದು, ನೀರನ್ನು ಸಂರಕ್ಷಿಸುವುದು, ಪ್ಲಾಸ್ಟಿಕ್ ಬಳಕೆಯನ್ನು ಕಡಿಮೆ ಮಾಡುವುದು, ತ್ಯಾಜ್ಯ ವಿಂಗಡಣೆ ಮಾಡುವುದು ಮತ್ತು ಕುಟುಂಬದ ಸದಸ್ಯರನ್ನು ಭೂಮಿತಾಯಿಯ ಬಗ್ಗೆ ಕಾಳಜಿ ವಹಿಸುವಂತೆ ಪ್ರೇರೇಪಿಸುವಂತಹ ಸರಳವಾದರೂ ಅರ್ಥಪೂರ್ಣ ಕ್ರಮಗಳ ಮೂಲಕ ಪ್ರಕೃತಿಯನ್ನು ರಕ್ಷಿಸಲು ವಿದ್ಯಾರ್ಥಿಗಳಿಗೆ ಕರೆ ನೀಡಿದರು.

ಅಧ್ಯಕ್ಷತೆ ವಹಿಸಿ ಮಾತನಾಡಿದ ಸಂಸ್ಥೆಯ ಪ್ರಾಂಶುಪಾಲರಾದ ವಂ. ಫಾ.ರೋಹನ್ ಡಿ’ಅಲ್ಮೇಡಾ ಎಸ್.ಜೆ. ಅವರು, ಈ ಸಮಾರೋಪವು ಆಂದೋಲನದ ಅಂತ್ಯವಲ್ಲ, ಬದಲಿಗೆ ಪರಿಸರದ ಉಸ್ತುವಾರಿಗೆ ಜೀವನಪರ್ಯಂತ ಬದ್ಧತೆಯ ಆರಂಭವಾಗಿದೆ ಎಂದರು. ಪೃಥ್ವಿ ನಮ್ಮ ಅನನ್ಯ ಆವಾಸ ತಾಣ. ನಾವೆಲ್ಲ ಅದರ ಕಾಳಜಿ ವಹಿಸಬೇಕು” ಎಂಬ ಜೆಸ್ಯುಟ್ ಮೌಲ್ಯವನ್ನು ಒತ್ತಿ ಹೇಳಿದರು. ಮತ್ತು ಪ್ರತಿ ವಿದ್ಯಾರ್ಥಿಯು ಸಿಬಿಎಸ್ಇ ಯ “ಏಕ್ ಪೇಡ್ ಮಾ ಕೆ ನಾಮ್” ಉಪಕ್ರಮದಲ್ಲಿ ಭಾಗವಹಿಸುವ ಮೂಲಕ ಹಸಿರು ಯೋಧರಾಗುವಂತೆ ಕರೆ ನೀಡಿದರು.“ರಕ್ಷಿಸಿ, ಸಂರಕ್ಷಿಸಿ ಮತ್ತು ಅಭಿವೃದ್ಧಿ ಹೊಂದಿ” ಎಂಬ ಧ್ಯೇಯವಾಕ್ಯದೊಂದಿಗೆ 2026ರ ಜೂನ್ 29 ರಿಂದ ಜುಲೈ 4 ರವರೆಗೆ ನಡೆದ ಈ ವಾರಪೂರ್ತಿ ಪರಿಸರ ಉಪಕ್ರಮದಲ್ಲಿ ಪರಿಸರ ಜಾಗೃತಿ ಮತ್ತು ಸುಸ್ಥಿರ ಜೀವನವನ್ನು ಉತ್ತೇಜಿಸಲು ವಿನ್ಯಾಸಗೊಳಿಸಿದ ವಿವಿಧ ಶೈಕ್ಷಣಿಕ ಚಟುವಟಿಕೆಗಳಲ್ಲಿ ವಿದ್ಯಾರ್ಥಿಗಳು ತೊಡಗಿಸಿಕೊಂಡರು. ಶ್ರೀ ಚೇತನ್ ಶೆಟ್ಟಿ ಅವರಿಂದ ಹಣ್ಣಿನ ಕೃಷಿ, ಶ್ರೀಮತಿ ಪೂರ್ಣಿಮಾ ಶೆಟ್ಟಿ ಅವರಿಂದ ತೋಟಗಾರಿಕೆ ಮತ್ತು ಕೃಷಿ, ಶ್ರೀ ಗ್ಲಾವಿನ್ ರೋಡ್ರಿಗಸ್ ಅವರಿಂದ ಲಂಬ ತೋಟಗಾರಿಕೆ ಮತ್ತು ಸುಸ್ಥಿರ ಅಭ್ಯಾಸಗಳು, ಹಾಗೂ ಶ್ರೀ ನವೀನ್ ಆಡ್ಕರ್ ಅವರಿಂದ ಸೃಜನಾತ್ಮಕ ಎಲೆ ಕಲೆಯ ಕುರಿತ ತಜ್ಞರ ಉಪನ್ಯಾಸಗಳು ವಿದ್ಯಾರ್ಥಿಗಳನ್ನು ತಮ್ಮ ದೈನಂದಿನ ಜೀವನದಲ್ಲಿ ಪರಿಸರಕ್ಕೆ ಜವಾಬ್ದಾರಿಯುತ ಅಭ್ಯಾಸಗಳನ್ನು ಅಳವಡಿಸಿಕೊಳ್ಳಲು ಪ್ರೇರೇಪಿಸಿದವು.

ಉಪಪ್ರಾಂಶುಪಾಲೆ ಶ್ರೀಮತಿ ಅಪರ್ಣಾ ಸುರೇಶ್, ಶೈಕ್ಷಣಿಕ ಸಂಯೋಜಕಿಯರಾದ ಶ್ರೀಮತಿ ದೀಪ್ತಿ ಕರ್ಕಡ ಮತ್ತು ಶ್ರೀಮತಿ ದೀಪಾ ಕರ್ಕಡ, ವಿಜ್ಞಾನ ಸಂಯೋಜಕಿ ಶ್ರೀಮತಿ ಶಿಲ್ಪಾ ಬಲ್ಲಾಳ್, ಶಿಕ್ಷಕ ಪ್ರತಿನಿಧಿ ಶ್ರೀಮತಿ ಸುಷ್ಮಿತಾ ಕೆ.ಎಸ್. ವಿದ್ಯಾರ್ಥಿ ನಾಯಕರಾದ ಆದಿದೇವ್ ಮತ್ತು ಕು. ರಿಯಾ ಜೆಸ್ಸಿಕಾ ರೆಗೊ ಅವರ ನೇತೃತ್ವದಲ್ಲಿ ನಡೆಯಿತು.

8ಬಿ ತರಗತಿಯ ಮಾ. ಆಶಿಶ್ ಎನ್. ಜೋಶಿ ಅವರು ಸ್ವಾಗತಿಸಿದರು. ಪ್ರಾಯೋಗಿಕ ಪರಿಸರ ಕಾರ್ಯಕ್ರಮದಲ್ಲಿ ವಿವಿಧ ಸ್ಪರ್ಧೆಗಳ ವಿಜೇತರಿಗೆ ಸೃಜನಶೀಲತೆ, ನಾವೀನ್ಯತೆ ಮತ್ತು ಪರಿಸರ ಸಂರಕ್ಷಣೆಗೆ ಅವರ ಬದ್ಧತೆಗಾಗಿ ಬಹುಮಾನ ವಿತರಣಾ ಸಮಾರಂಭವೂ ನಡೆಯಿತು. 9ಬಿ ತರಗತಿಯ ಕು. ರೆಬೆಕ್ಕಾ ನೆಸ್ಸಾ ಡಿ’ಸೋಜಾ ಅವರು ವಂದನಾರ್ಪಣೆ ಮಾಡಿದರು ಮತ್ತು 9ಸಿ ತರಗತಿಯ ಕು. ಝಾರಾ ಖಾಝಿ ಅವರು  ನಿರೂಪಿಸಿದರು. ಇದು ಸಂತ ಅಲೋಶಿಯಸ್ ಗೊನ್ಝಾಗ ಶಾಲೆಯು ಪರಿಸರ ಪ್ರಜ್ಞೆ ಮತ್ತು ಸಾಮಾಜಿಕ ಜವಾಬ್ದಾರಿಯುತ ನಾಗರಿಕರನ್ನು ರೂಪಿಸುವ ಬದ್ಧತೆಯನ್ನು ಮತ್ತೊಮ್ಮೆ ದೃಢಪಡಿಸಿತು.

RELATED ARTICLES

LEAVE A REPLY

Please enter your comment!
Please enter your name here

Most Popular

Recent Comments