ವೈಕುಂಟ ಏಕಾದಶಿಯ ಪ್ರಯುಕ್ತ ಮಾಜಿ ಕೇಂದ್ರ ಸಚಿವ ಬಿ ಜನಾರ್ದನ ಪೂಜಾರಿಯವರು ಇಂದು ಮಂಗಳೂರಿನ ಡೊಂಗರಕೇರಿಯ ಶ್ರೀ ವೆಂಕಟ್ರಮಣ ದೇವಾಲಯಕ್ಕೆ ಭೇಟಿ ನೀಡಿ ಪೂಜೆ ಸಲ್ಲಿಸಿದರು.

ಕ್ಷೇತ್ರದ ಅರ್ಚಕರು ಹಾಗೂ ಆಡಳಿತ ಮಂಡಳಿಯ ಸದಸ್ಯರು ಪೂಜೆಯ ಬಳಿಕ ಜನಾರ್ದನ ಪೂಜಾರಿಯವರನ್ನು ಸನ್ಮಾನಿಸಿದರು ಈ ವೇಳೆ ಕುದ್ರೋಳಿ ಕ್ಷೇತ್ರದ ಕೋಶಾಧಿಕಾರಿ ಪದ್ಮರಾಜ್ ಆರ್ ಅವರು ಜನಾರ್ದನ ಪೂಜಾರಿಯವರ ಜೊತೆಗಿದ್ದರು

