2016ರ ನೋಟು ರದ್ಧತಿ ಮಾನ್ಯವಾಗಿದೆ: ಸುಪ್ರೀಂ ಕೋರ್ಟ್ ಮಹತ್ವದ ಆದೇಶ

2016ರಲ್ಲಿ ನರೇಂದ್ರ ಮೋದಿ ಸರ್ಕಾರವು ಕೈಗೊಂಡ ನೋಟು ರದ್ಧತಿ ಕ್ರಮವು ಮಾನ್ಯವಾದುದು ಎಂದು ಸುಪ್ರೀಂ ಕೋರ್ಟ್ ಅಭಿಪ್ರಾಯಪಟ್ಟಿದೆ. ಇಂದು ಪ್ರಕಟಗೊಂಡ ಭಿನ್ನಮತದ ತೀರ್ಪಿನಲ್ಲಿ ಕೇಂದ್ರ ಸರ್ಕಾರವು ಅದನ್ನು ಆರಂಭಿಸಿದ ಮಾತ್ರಕ್ಕೆ ನಿರ್ಧಾರವನ್ನು ತಪ್ಪೆನ್ನಲು ಸಾಧ್ಯವಿಲ್ಲ ಎಂದು ಸುಪ್ರೀಂ ಹೇಳಿದೆ. ನೋಟು ಅಮಾನ್ಯೀಕರಣವನ್ನು ತಳ್ಳಿಹಾಕಲು ಸಾಧ್ಯವಿಲ್ಲ, ನೋಟುಗಳ ವಿನಿಮಯಕ್ಕೆ ನೀಡಿದ 52 ದಿನಗಳ ಅವಧಿಯು ಅಸಮಂಜಸವಲ್ಲ ಎನ್ನಲಾಗದು ಎಂದು ಸುಪ್ರೀಂ ಹೇಳಿದೆ.

ಭಾರತೀಯ ರಿಸರ್ವ್ ಬ್ಯಾಂಕ್ (ಆರ್‌ಬಿಐ) ನೊಂದಿಗೆ ಸಮಾಲೋಚಿಸಿದ ನಂತರವೆ ಕೇಂದ್ರವು ಕ್ರಮ ಕೈಗೊಂಡಿದೆ ಮತ್ತು ಆರು ತಿಂಗಳ ಕಾಲ ಇಬ್ಬರ ನಡುವೆ ಸಮಾಲೋಚನೆ ನಡೆದಿದೆ ಎಂದು ಐವರು ಸದಸ್ಯರ ಪೀಠದ ನಾಲ್ವರು ನ್ಯಾಯಾಧೀಶರು ಹೇಳಿದ್ದಾರೆ. ಆದರೆ ನ್ಯಾಯಮೂರ್ತಿ ಬಿ.ವಿ.ನಾಗರತ್ನರವರು ಭಿನ್ನಮತದ ತೀರ್ಪು ನೀಡಿ, ‘ನೋಟು ರದ್ದತಿಯನ್ನು ಸಂಸತ್ತಿನ ಕಾಯಿದೆಯ ಮೂಲಕ ಕಾರ್ಯಗತಗೊಳಿಸಬಹುದಿತ್ತೆ ಹೊರತು ಸರ್ಕಾರದಿಂದ ಅಲ್ಲ, ಹಾಗಾಗಿ ಇದು ಕಾನೂನುಬಾಹಿರ’ ಎಂದು ಹೇಳಿದ್ದಾರೆ.

₹ 1,000 ಮತ್ತು ₹ 500 ನೋಟುಗಳನ್ನು ನಿಷೇಧಿಸುವ ನವೆಂಬರ್ 2016 ರ ಕೇಂದ್ರದ ನಿರ್ಧಾರವನ್ನು ಸುಪ್ರೀಂ ಕೋರ್ಟ್‌ನಲ್ಲಿ ಪ್ರಶ್ನಿಸಿದ್ದವು. ಸರ್ಕಾರದ ಈ ಕ್ರಮವು ಕಾನೂನುಬಾಹಿರವಾಗಿದೆ, ನೂರಾರು ಜನರ ಸಾವಿಗೆ ಕಾರಣವಾಗಿದೆ ಮತ್ತು ದೇಶದ ಆರ್ಥಿಕ ಕುಸಿತಕ್ಕೆ ಕಾರಣವಾಗಿದೆ ಎಂದು ವಾದಿಸಿದ್ದರು. ಪ್ರಧಾನಿ ಮೋದಿ ಅಂದು ದೇಶದ ಜನತೆಯನ್ನು ಉದ್ದೇಶಿಸಿ ಮಾತನಾಡುತ್ತಾ, “ಕಪ್ಪು ಹಣ, ಭ್ರಷ್ಟಾಚಾರ, ಖೋಟಾ ನೋಟು ತಡೆಗೆ ಹಾಗೂ ನಗದು ರಹಿತ ಆರ್ಥಿಕತೆಗೆ” ಈ ನಿರ್ಧಾರವನ್ನು ತೆಗೆದುಕೊಳ್ಳಲಾಗಿದೆ ಎಂದು ಹೇಳಿದ್ದರು. ಆದರೆ, ಇವುಗಳಿಗೆ ವಿರುದ್ದವಾಗಿ ದೇಶದ ಬ್ಯಾಂಕುಗಳಲ್ಲಿ, ತಮ್ಮ ನೋಟುಗಳನ್ನು ಬದಲಾಯಿಸಿಕೊಳ್ಳಲು ಜನರು ಉದ್ದನೆಯ ಸರತಿ ಸಾಲಿನಲ್ಲಿ ನಿಲ್ಲಬೇಕಾಯಿತು. ಈ ಸಮಯದಲ್ಲಿ ಹಲವರು ಮೃತಪಟ್ಟರು. ತಮ್ಮ ಅಗತ್ಯಗಳಿಗೆ ಬೇಕಾದಷ್ಟು ಹಣವಿಲ್ಲದೆ ಜನರು ಪರದಾಡಬೇಕಾಯಿತು. ಈ ಕ್ರಮಕ್ಕೆ ದೇಶದಾದ್ಯಂತ ಆಕ್ರೋಶ ವ್ಯಕ್ತವಾಗಿತ್ತು.

Related Posts

Leave a Reply

Your email address will not be published.