ಪಶ್ಚಿಮ ಏಷ್ಯಾ ಸಂಘರ್ಷದ ನಡುವೆ ತೈಲ ಸರಬರಾಜಿಗೆ ಅಡ್ಡಿಯಾಗಿದ್ದು, ವಾಣಿಜ್ಯ ಬಳಕೆಯ ಅಡುಗೆ ಅನಿಲ ಸಿಲಿಂಡರ್ ಬೆಲೆಯಲ್ಲಿ ಮತ್ತೆ ಏರಿಕೆ ಕಂಡಿದೆ. ದೇಶದಾದ್ಯಂತ ಸಿಲಿಂಡರ್ ಬೆಲೆಯಲ್ಲಿ ₹42ರಿಂದ ₹53 ಏರಿಕೆಯಾಗಿದೆ ಎಂದು ವರದಿ ತಿಳಿಸಿದೆ.
ಪರಿಷ್ಕೃತ ದರ ಇಂದಿನಿಂದಲೇ ಜಾರಿಗೆ ಬಂದಿದೆ. ಗೃಹ ಬಳಕೆಯ ಅಡುಗೆ ಅನಿಲ ದರದಲ್ಲಿ ಯಾವುದೇ ವ್ಯತ್ಯಾಸ ಕಂಡುಬಂದಿಲ್ಲ.ಈ ಮೂಲಕ ರಾಷ್ಟ್ರ ರಾಜಧಾನಿ ನವದೆಹಲಿಯಲ್ಲಿ 19 ಕೆ.ಜಿಯ ವಾಣಿಜ್ಯ ಬಳಕೆಯ ಸಿಲಿಂಡರ್ ಬೆಲೆಯಲ್ಲಿ ₹42 ಹೆಚ್ಚಳವಾಗಿದ್ದು, ₹3,113ಕ್ಕೆ ಏರಿಕೆ ಕಂಡಿದೆ.ಕೋಲ್ಕತ್ತದಲ್ಲಿ ₹53,49 ಏರಿಕೆ ಕಂಡಿದ್ದು, ವಾಣಿಜ್ಯ ಬಳಕೆಯ ಸಿಲಿಂಡರ್ ದರ ₹3,2250ಕ್ಕೆ ಏರಿದೆ.
