ಆಷಾಢ( ಆಟಿ ) ಅಮಾವಾಸ್ಯೆಯ ಹಾಲೆ ಮರದ ವೈಶಿಷ್ಟ್ಯತೆ

ಹಾಲೆ ಮರದ ಎಲೆಯು ಸಾಮಾನ್ಯವಾಗಿ ದಪ್ಪವಾಗಿದ್ದು ಒಂದು ಗೊಂಚಲಿನಲ್ಲಿ 7 ರಿಂದ 9 ಪತ್ರಗಳಿರುತ್ತವೆ. ಎಲೆಗಳ ಅಗಲ ಒಂದರಿಂದ ಎರಡು ಇಂಚು ಇದ್ದು, ಉದ್ದ 6 ರಿಂದ 12ಇಂಚು ಇರುತ್ತದೆ. ಕಡು ಹಸಿರು ವರ್ಣದಿಂದ ಕೂಡಿದ್ದು ಮುರಿದಾಗ ಹಾಲು ಹೊರಸೂಸುತ್ತದೆ.ಹಾಲೆ ಮರದ ತೊಗಟೆ ಬೂದು ವರ್ಣದಿಂದ ಕೂಡಿದ್ದು, ದೊರಗಾಗಿದ್ದು ಕಲ್ಲಿನಿಂದ ಜಜ್ಜಿ ಹಾಳೆಗಳಂತೆ ತೆಗೆಯಲು ಬರುವುದು. ಈ ಕಷಾಯವನ್ನು ಕುಡಿಯುವುದರಿಂದ ಶೀತ ವಾತಾವಾರಣವನ್ನು ತಡೆದುಕೊಳ್ಳುವ ಶಕ್ತಿ ಬರುತ್ತದೆ ಹುಳ ಬಾಧೆಯಿಂದ ಜೀರ್ಣಾಂಗವ್ಯೂಹವನ್ನು ಶುದ್ಧಗೊಳಿಸುತ್ತದೆ.

ಹಾಲೆ ಮರದಲ್ಲಿ ಜ್ವರ, ಕ್ಯಾನ್ಸರ್‌ನಂತಹ ಕಾಯಿಲೆಗಳನ್ನು ಗುಣಪಡಿಸುವ ಹಲವು ಬಗೆಯ ಔಷಧೀಯ ಗುಣವಿದೆ. ವೈದ್ಯಕೀಯದಲ್ಲಿ ಹೊಟ್ಟೆನೋವು, ಅತಿಸಾರ,ವಾತ, ಸುಂಧಿನೋವು, ಮಲೇರಿಯಾ, ಜ್ವರ, ಸ್ತ್ರೀರೋಗ, ಹುಣ್ಣುನಿವಾರಣೆಯಲ್ಲಿ ಬಳಕೆಯಾಗುವ ಔಷಧೀಯ ಗುಣಗಳು ಮರದ ಹಾಲು ಮತ್ತು ತೊಗಟೆಯಲ್ಲಿ ಕಂಡು ಬಂದಿವೆ.
