ಉಡುಪಿ ಆದರ್ಶ ಸಮೂಹ ಶಿಕ್ಷಣ ಸಂಸ್ಥೆ: ನರ್ಸಿಂಗ್ ಕಾಲೇಜಿನ ಶೈಕ್ಷಣಿಕ ವರ್ಷದ ವಿದ್ಯಾರ್ಥಿಗಳಿಗೆ ಸ್ವಾಗತ
ಉಡುಪಿಯ ಆದರ್ಶ ನರ್ಸಿಂಗ್ ಕಾಲೇಜಿನ ದೀಪ ಬೆಳಗಿಸುವ ಕಾರ್ಯಕ್ರಮ ಹಾಗೂ ಆದರ್ಶ ಇನ್ಸ್ಟಿಟ್ಯೂಟ್ ಆಫ್ ಪ್ಯಾರಮೆಡಿಕಲ್ ಸೈನ್ಸಸ್‌ನ ಹೊಸ ವಿದ್ಯಾರ್ಥಿಗಳ ದಿನಾಚರಣೆಯು ನವೆಂಬರ್ 25, 2022 ರ ಶುಕ್ರವಾರದಂದು ಆದರ್ಶ ಸಮೂಹ ಸಂಸ್ಥೆಯ ಸಭಾಂಗಣದಲ್ಲಿ ನಡೆಯಿತು. ಮಾಹೆಯ ಉಪ ಕುಲಪತಿಗಳಾದ ಡಾ. ಎಚ್. ಎಸ್. ಬಲ್ಲಾಳ್‌ರವರು ಕಾರ್ಯಕ್ರಮವನ್ನು ಉದ್ಘಾಟಿಸಿದರು. ಈ ಸಂದರ್ಭದಲ್ಲಿ ಮಾತನಾಡಿದ ಅವರು, ನರ್ಸಿಂಗ್ ವೃತ್ತಿಯು ಸಮಾಜದ ಹಾಗೂ ಜನರ ಸೇವೆ ಮಾಡುವಂತಹ ಶ್ರೇಷ್ಠ ವೃತ್ತಿಯಾಗಿದ್ದು, ಇವರು ಆಸ್ಪತ್ರೆಯಲ್ಲಿ ವೈದ್ಯರಿಗಿಂತ ಹೆಚ್ಚಿನ ಸಮಯ ರೋಗಿಯೊಂದಿಗೆ ಕಳೆಯುತ್ತಾರೆ. ಅಲ್ಲದೇ ಕೋವಿಡ್ ಸಮಯದಲ್ಲಿ ಇವರು ಜಗತ್ತಿಗೆ ನೀಡಿದ ಸೇವೆಯನ್ನು ಯಾರೂ ಮರೆಯುವಂತಿಲ್ಲ.
ಇನ್ನು ಈ ಕಾರ್ಯಕ್ರಮವನ್ನು ಫ್ಲೋರೆನ್ಸ್ ನೈಟಿಂಗೇಲ್‌ರವರ ಸ್ಮರಣಾರ್ತವಾಗಿ ಹಾಗು ಅವರು ಕೇವಲ ದೀಪದ ಬೆಳಕಿನಲ್ಲಿ ಯುದ್ಧದಲ್ಲಿ ಗಾಯಗೊಂಡ ಸೈನಿಕರಿಗೆ ಶುಶ್ರೂಷೆ ಮಾಡಿದ್ದು, ಇವರ ನೆನಪಿಗಾಗಿ ನರ್ಸಿಂಗ್ ಕಾಲೇಜಿಗೆ ಸೇರಿದ ಪ್ರಥಮ ವರ್ಷದ ವಿದ್ಯಾರ್ಥಿಗಳಿಗೆ ದೀಪ ಬೆಳಗಿಸಿ ಪ್ರತಿಜ್ಞಾ ವಿಧಿ ಬೋಧಿಸುತ್ತಾರೆ. ಇಂದು ಜಗತ್ತಿನಾದ್ಯಂತ ನರ್ಸಿಂಗ್ ಹಾಗೂ ಅರೆವೈದ್ಯಕೀಯ ಕೋರ್ಸ್ಗಳಿಗೆ ಉತ್ತಮ ಬೇಡಿಕೆಯಿದ್ದು, ಉದ್ಯೋಗ ಸಿಗಲು ಉತ್ತಮ ಅವಕಾಶವಿರುತ್ತದೆ ಎಂದು ತಿಳಿಸಿದರು. ಆದರ್ಶ ನರ್ಸಿಂಗ್ ಕಾಲೇಜಿನ ಅಧ್ಯಕ್ಷರಾದ ಡಾ. ಜಿ. ಎಸ್. ಚಂದ್ರಶೇಖರ್ ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿ ಮಾತನಾಡಿದ ಅವರು ಆಸುಪಾಸಿನ ಮಕ್ಕಳಿಗೆ ಉತ್ತಮ ಹಾಗೂ ಅಂತರಾಷ್ಟಿçÃಯ ಗುಣಮಟ್ಟದ ವಿದ್ಯಾಭ್ಯಾಸ ನೀಡುವ ಉದ್ದೇಶದಿಂದ ಹಾಗೂ ವಿದ್ಯಾರ್ಥಿಗಳಿಗೆ ಕಲಿಕೆಗೆ ಬೇಕಾದ ಆಧುನಿಕ ತಾಂತ್ರಿಕ ಉಪಕರಣಗಳೊಂದಿಗೆ ಹಾಗೂ ನುರಿತ ಶಿಕ್ಷಕ ವರ್ಗದೊಂದಿಗೆ ಆದರ್ಶ ಸಮೂಹ ಸಂಸ್ಥೆಗಳನ್ನು ಜನಸಾಮಾನ್ಯರಿಗೆ ಎಟಕುವಂತೆ ಸ್ಥಾಪಿಸಿದ್ದೇವೆ ಎಂದು ತಿಳಿಸಿದರು.
ಈ ಸಂಸ್ಥೆಯ ಉಪಾಧ್ಯಕ್ಷರಾದ ಶ್ರೀಮತಿ ವಿಮ¯ ಚಂದ್ರಶೇಖರ್, ಮೂಳೆತಜ್ಞರಾದ ಡಾ. ಮೋಹನ್‌ದಾಸ್ ಹಾಗೂ ಆದರ್ಶ ಇನ್ಸ್ಟಿಟ್ಯೂಟ್ ಆಫ್ ಪ್ಯಾರಮೆಡಿಕಲ್ ಸೈನ್ಸಸ್‌ನ ಪ್ರಾಂಶುಪಾಲರಾದ ಡಾ. ಸುಮೀತ್ ಕೌರ್ ದಿಲ್ ದೀಪ ಬೆಳಗಿಸಿ ಕಾರ್ಯಕ್ರಮದ ಪ್ರಾಮುಖ್ಯತೆಯನ್ನು ತಿಳಿಸಿದರು. ಆದರ್ಶ ನರ್ಸಿಂಗ್ ಕಾಲೇಜಿನ ಪ್ರಾಂಶುಪಾಲರಾದ ಶ್ರೀಮತಿ ಆಶಾದೇವಿ ಅವರು ವಿದ್ಯಾರ್ಥಿಗಳಿಗೆ ಪ್ರತಿಜ್ಞಾ ವಿಧಿಯನ್ನು ಬೋಧಿಸಿದರು. ಶ್ರೀಮತಿ ಅಶ್ವಿನಿಯವರು ಸ್ವಾಗತಿಸಿದರು, ಶ್ರೀಮತಿ ದಿವ್ಯ ಶೆಟ್ಟಿ ಕಾರ್ಯಕ್ರಮವನ್ನು ನೆರವೇರಿಸಿದರು ಹಾಗೂ ಶ್ರೀಮತಿ ವಿನಯ ಡಿ’ಸೋಜ ವಂದಿಸಿದರು. ಸಂಸ್ಥೆಯ ಆಡಳಿತಾಧಿಕಾರಿ ಡಾ. ಸತೀಶ್ ಮಲ್ಯ ಹಾಗೂ ಉಪ ಪ್ರಾಂಶುಪಾಲೆ ಶ್ರೀಮತಿ ಸುದೀನ ಉಪಸ್ಥಿತರಿದ್ದರು.