ಕೋಝಿಕ್ಕೋಡ್ ಬೇಬಿ ಮೆಮೋರಿಯಲ್ ಹಾಸ್ಪಿಟಲ್‌ನಲ್ಲಿ ಅಡ್ವಾನ್ಸ್‌ಡ್ ರೋಬೋಟಿಕ್ ಲೇಸರ್ ಯುರೋಲಜಿ ಸೆಂಟರ್ ಕಾರ್ಯಾರಂಭ

ಕೋಝಿಕ್ಕೋಡ್: ಇಲ್ಲಿನ ಪ್ರಸಿದ್ಧ ಬೇಬಿ ಮೆಮೋರರಿಯಲ್ ಹಾಸ್ಪಿಟಲ್ ನಲ್ಲಿ ನೂತನವಾಗಿ ರೋಬೋಟಿಕ್ಸ್ ಏಂಡ್ ಲೇಸರ್ ಯುರೋಲಜಿ ಸೆಂಟರ್ ಕಾರ್ಯಾರಂಭಗೊಂಡಿತು. ರೋಬೋಟಿಕ್ಸ್ ಸರ್ಜರಿಯಿಂದ ಹಲವು ಉತ್ತಮ ಪ್ರಯೋಜನಗಳಿವೆಯೆಂದು ಬೇಬಿ ಮೆಮೋರಿಯಲ್ ಹಾಸ್ಪಿಟಲ್ಸ್ ಗ್ರೂಪ್ ಚೇರ್ಮೆನ್ ಡಾ.ಕೆ.ಜಿ. ಅಲೆಕ್ಸಾಂಡರ್ ಹೇಳಿದರು.
ಇದೇ ಸಂದರ್ಭ ಅಡ್ವಾನ್ಸ್‌ಡ್ ರೋಬೋಟಿಕ್ಸ್ ಏಂಡ್ ಲೇಸರ್ ಯುರೋಲಜಿ ಸೆಂಟರ್ ಅವರು ಉದ್ಘಾಟಿಸಿದರು.
ಬೇಬಿ ಮೆಮೋರಿಯಲ್ ಹಾಸ್ಪಿಟಲ್ ಗ್ರೂಪ್ ಬೆಳವಣಿಗೆಯ ಹಾದಿಯಲ್ಲಿದ್ದು, ರೋಗಿಗಳಿಗೆ ಉತ್ಕೃಷ್ಟವಾದ ಅತ್ಯಾಧುನಿಕ ಮತ್ತು
ಫಲಪ್ರದವಾದ ಚಿಕಿತ್ಸೆ ಒದಗಿಸುತ್ತದೆ ಎಂದವರು ತಿಳಿಸಿದರು.
ಮೂತ್ರನಾಳ, ಪುರುಷನ ಪ್ರತ್ಯುತ್ಪಾದನ ವ್ಯವಸ್ಥೆಯನ್ನು ಪರಿಶೀಲಿಸಿ ಚಿಕಿತ್ಸೆ ಒದಗಿಸುವ ವೈದ್ಯಶಾಸ್ತ್ರ ಶಾಖೆಯಾದ ಯುರೋಲಜಿ ಇತ್ತೀಚಿನ ವರ್ಷಗಳಲ್ಲಿ ಕ್ರಾಂತಿಕಾರಕ ಬೆಳವಣಿಗೆಯ ಸುಧಾರಣೆ ಕಂಡಿದೆ. ಈ ಪೈಕಿ ರೋಬೋಟಿಕ್ ಸಹಾಯದೊಂದಿಗೆ ಮಾಡಲಾಗುವ ಶಸ್ತ್ರಕ್ರಿಯೆ ಪಂದ್ಯ ಬದಲಿಸುವಂತೆ(ಗೇಂ ಚೇಂಜರ್) ವಿಭಿನ್ನತೆಯಿಂದ ವೈಶಿಷ್ಟ್ಯವಾಗಿದೆ. ವಿಶೇಷವಾಗಿ ಡಾವಿಂಜಿ ಸರ್ಜಿಕಲ್ ಸಿಸ್ಟಂ ಆಗಮನವಾದ ಬಳಿಕ ಇದು ಇನ್ನಷ್ಟುವಮ ಸುಧಾರಿತವಾಗಿದೆ ಎಂದು ಸಿಇಒ ಡಾ. ಅನಂತ ಮೋಹನ ಪೈ ಹೇಳಿದರು‌.

ರೊಬೋಟಿಕ್ಸ್ ಸರ್ಜರಿ ಎಂದರೇನು?
ಸುಧಾರಿತ ಮತ್ತು ಸುಗಮ, ನಿಯಂತ್ರಿತ ವಿಧಾನಗಳೊಂದಿಗೆ ಸಂಕೀರ್ಣವಾದ ಶಸ್ತ್ರ ಕ್ರಿಯೆ ನಡೆಸಲು ತಜ್ಞ ವೈದ್ಯರು ರೋಬೋಟ್ ಗಳ ಸಹಾಯದಿಂದ ಮಾಡುವ ಶಸ್ತ್ರ ಚಿಕಿತ್ಸೆಯೇ ರೋಬೋಟಿಕ್ ಸರ್ಜರಿ. ಇದರಲ್ಲಿ ವೈದ್ಯರು ಒಂದು ಕನ್ಸೋಲ್‌ನಲ್ಲಿ ಕುಳಿತು ರೋಬೋಟ್‌ಗಳನ್ನು ನಿಯಂತ್ರಿಸುತ್ತಾ ,ಅವುಗಳ ಮೂಲಕ ಶಸ್ತ್ರಚಿಕಿತ್ಸೆ ಮಾಡುತ್ತಾರೆ. ಇದರಿಂದಾಗಿ ಸರ್ಜರಿಯಲ್ಲಿ ನಿಖರತೆ ಮತ್ತು ನಿಯಂತ್ರಣ ಹೆಚ್ಚುತ್ತದೆ. ಯುರೋಲಜಿಯ ಡಾವಿಂಜಿ ರೋಬೋಟಿಕ್ಸ್
ರೋಬೋಟಿಕ್ ನೆರವಿನ ಶಸ್ತ್ರಕ್ರಿಯೆಗಳನ್ನು ಅವಲಂಬಿಸಿದ ಮೊದಲ ಚಿಕಿತ್ಸಾ ವಿಧಾನವೇ ಯುರೋಲಜಿ. ಇದೀಗ ಯು. ಎಸ್. ನ ರಾಡಿಕಲ್ ಪ್ರೋಸ್ಟೋಕ್ಟಮಿಗಳ ಪೈಕಿ 85ಶೇ. ಮಂದಿ ಕೂಡಾ ರೋಬೋಟಿಕ್ ವಿಧಾನದ ಚಿಕಿತ್ಸಾ ಪದ್ಧತಿಯನ್ನವಲಂಬಿಸುತ್ತದೆ.

ರೋಬೋಟಿಕ್ ಕೈಗಳು ರೋಗಿ ಶರೀರವನ್ನು ಪ್ರವೇಶಿಸುವಾಗ 1ಸೆ.ಮೀ. ಗಾಯಗಳುಳ್ಳ ಒಂದಕ್ಕಿಂತ ಹೆಚ್ಚಿನ ಗಾಯಗಳು ಶಸ್ತ್ರಚಿಕಿತ್ಸೆಯ ಬಳಿಕ ವೇಗದಲ್ಲಿ ಗುಣಮುಖವಾಗುತ್ತದೆ. ಈ ಚಿಕಿತ್ಸೆಗೆ ಕೇವಲ ಕಿಬ್ಬೊಟ್ಟೆಯನ್ನಷ್ಟೇ ಗಾಯ ಮಾಡಬೇಕಾಗುತ್ತದೆ. ಚಿಕಿತ್ಸೆಗೊಳಗಾದ ರೋಗಿಯನ್ನು ಕೇವಲ 12ವತಾಸಿನಲ್ಲಿಲಸಹಜ ಸ್ಥಿತಿಗೆ ಮರಳಿ ತಂದು, ಕೇವಲ 4 ದಿನದಲ್ಲೇ ದಿಸ್ಚಾರ್ಜ್ ಮಾಡಲಾಯಿತು.
ಇಷ್ಟು ದೊಡ್ಡ ಗಾತ್ರದ ಟ್ಯೂಮರ್ ತೆಗೆಯಬೇಕಾದರೆ ಓಪನ್ ಶಸ್ತ್ರಕ್ರಿಯೆ ಮೂಲಕ ಎದೆ, ಹೊಟ್ಟೆ ತೆರೆಯಬೇಕಾಗುತ್ತದೆ. ಅದಲ್ಲದಿದ್ದರೆ ಬೃಹತ್ ಗಾತ್ರದ ಲಾಪ್ರೊಟಮಿ ಗಾಯ ಅಗತ್ಯ. ಇದಕ್ಕೆ ದೀರ್ಘಾವಧಿ ಐಸಿಯು ಪರಿಚರಣೆ ಬೇಕಾಗುತ್ತದೆ. ಅಲ್ಲದೇ ಹೆಚ್ಚು ದಿನ ಆಸ್ಪತ್ರೆಯಲ್ಲುಳಿಯಬೇಕಾಗುತ್ತದೆ. ಬಿ. ಎಂ. ಎಚ್/ಎಚ್.ಏಂಡ್ ಕೆ ಯುರೋಲಜಜಿ ವಿಭಾಗದ ರೋಬೋಟಿಕ್ ಸರ್ಜರಿಯ ತಜ್ಞತೆಯ ಪರಿಣತಿ ಮತ್ತು ಅತ್ಯಾಧುನಿಕ ಗುಣಮಟ್ಟದ ಆರೋಗ್ಯ ಸಂರಕ್ಷಣೆ ನೀಡುವ ಕಾಳಜಿಯ ಸಮರ್ಪಣೆಯಿಂದಲೇ ಇದು ಸಾಧ್ಯವಾಯಿತೆಂದು ಸಿಇ ಒ ಡಾ. ಅನಂತ ಮೋಹನ ಪೈ ಹೇಳಿದರು.
ಡಾ. ಹರಿಗೋವಿಂದ್ ಪಿ, ಡಾ. ಆರ್. ಕೃಷ್ಣಮೋಹನ್ ರೋಬೋಟಿಕ್ ಸರ್ಜರಿಯ ಕುರಿತಾದ ಸಂದೇಹ,ಗೊಂದಲದ ಪ್ರಶ್ನೆಗಳಿಗೆ ಉತ್ತರಿಸಿದರು. ಡಾ. ಪಂಕಜ್ ಬಿರುದ್ ವಂದಿಸಿದರು.

50ಕ್ಕೂ ಹೆಚ್ಚು ಸ್ಪೆಷಾಲಿಸ್ಟ್ಗಳು ಮತ್ತು ಕ್ಲಿನಿಕಲ್ ಶ್ರೇಷ್ಠತೆಯ ಪರಂಪರೆಯು ಭರವಸೆಯ ಚಿಕಿತ್ಸೆಯನ್ನು ವಾಗ್ದಾನ ನೀಡುವ BMH ಅದರ ಪ್ರಧಾನ ಆಶಯವಾದ More than care ಆಶಯದೊಂದಿಗೆ ಮುನ್ನಡೆಯುತ್ತಿದೆ. ಅತ್ಯಾಧುನಿಕ ಚಿಕಿತ್ಸೆಗಳು , ರೊಬೋಟಿಕ್ ಶಸ್ತ್ರಕ್ರಿಯೆಗಳಿಂದ ಮೊದಲ್ಗೊಂಡು ಸಾಮಾಜಿಕ ಆರೋಗ್ಯ ರಂಗದ ಕುರಿತಾಗಿ ಬದ್ಧತೆಯಿಂದ ಕಾರ್ಯವೆಸಗುತ್ತದೆ.
ಕೋಝಿಕೋಡ್ ಬೇಬಿ ಮೆಮೊರಿಯಲ್ ಹಾಸ್ಪಿಟಲ್
ಬೇಬಿ ಮೆಮೋರಿಯಲ್ ಹಾಸ್ಪಿಟಲ್ (BMH)1987ರಲ್ಲಿ ಕೋಝಿಕೋಡ್ ನಲ್ಲಿ ಕಾರ್ಯಾರಂಭವಾಯಿತು . 500ಕ್ಕೂ ಅಧಿಕ ಹಾಸಿಗೆಗಳುಳ್ಳ ಕೇರಳದ ಮುಂಚೂಣಿಯ ಮಲ್ಟಿಸ್ಪೆಷಾಲಿಟಿ ಹಾಸ್ಪಿಟಲ್ ಇದಾಗಿದೆ. ದಕ್ಷತೆಯಿಂದ ಅದು ಯಶಸ್ಸಿನ್ನ ಮೆಟ್ಟಿಲೇರುತ್ತದೆ. More than careಎಂಬುದು ಇಲ್ಲಿ ಪ್ರತಿಯೊಬ್ಬರ ಎದೆಯನ್ನು ಮುಟ್ಟುತ್ತದೆ. 40ಕ್ಕೂ ಅಧಿಕ ಮೆಡಿಕಲ್ ಸರ್ಜಿಕಲ್ ಸ್ಪೆಶಾಲಿಟಿಗಳು ಇಲ್ಲಿ ಸದಾ ಕಾರ್ಯನಿರತವಾಗಿದೆ. ಸುಸಜ್ಜಿತ ಮೂಲಭೂತ ಸೌಕರ್ಯಗಳೊಂದಿಗೆ ಉನ್ನತ ಶ್ರೇಣಿಯ ಅನುಭವಿ ಕನ್ಸಲ್ಟೆಂಟುಗಳು ಇಲ್ಲಿ ಸಮಗ್ರ ಸೇವೆ ನೀಡುತ್ತಿದ್ದಾರೆ ಚಿಕಿತ್ಸಾ ರಂಗದ ಶ್ರೇಯಸ್ಸಿನಿಂದ ಗಮನ ಸೆಳೆದ ಸಂಸ್ಥೆ NABH- ಅಂಗೀಕಾರ ಪಡೆದಿದೆ.

Related Posts

Leave a Reply

Your email address will not be published.