ಬೆಂಕಿ ತಗುಲಿ ಮನೆ ಸಂಪೂರ್ಣ ಭಸ್ಮ – ಕಂಗಲಾಗಿರುವ ಕುಟುಂಬಕ್ಕೆ ಬೇಕಾಗಿದೆ ಸಹಾಯಹಸ್ತ.

ಆಲೂರು ಸಕಲೇಶಪುರ ವಿಧಾನ ಸಭಾ ವ್ಯಾಪ್ತಿಗೆ ಬರುವ ಹಾಸನ ಜಿಲ್ಲೆ ಕಟ್ಟಾಯ ವ್ಯಾಪ್ತಿಯ ಮುಕುಂದೂರು ಮಲ್ಲೇನಹಳ್ಳಿ ಗ್ರಾಮದಲ್ಲಿ ಹೇಮಾವತಿ ಎಂಬುವವರ ಮನೆ ಆಕಸ್ಮಿಕವಾಗಿ ಬೆಂಕಿ ತಗುಲಿ ಹೊತ್ತಿ ಉರಿದಿದ್ದು ಸಂಪೂರ್ಣ ಕರಕಲಾಗಿರುವ ಘಟನೆ ನಡೆದಿದೆ.

ಮನೆಗೆ ಬೆಂಕಿ ತಗುಲಿ ಉರಿಯುತ್ತಿದ್ದಂತೆ ಗ್ರಾಮ ಜನರು ತಕ್ಷಣ ನೀರು ಹಾಕಿ ಬೆಂಕಿಯ ಕೆನ್ನಾಲಿಗೆ ತಿಳಿಗೊಳಿಸಲು ಹರಸಹಾಸಪಟ್ಟರು. ಘಟನೆಯಿಂದ ಯಾವುದೇ ಪ್ರಾಣಪಾಯ ಸಂಭವಿಸಿಲ್ಲ. ನಿತ್ಯ ಕೋಲಿ ನಂಬಿ ಜೀವನ ಸಾಗಿಸುತ್ತಿದ್ದ ಬಡ ಕುಟುಂಬ ಇಂದು ಅಕ್ಷರಶಃ ಬೀದಿಯಲ್ಲಿ ನಿಂತಿದೆ.

ಮನೆಯಲ್ಲಿದ್ದ ದವಸ ಧಾನ್ಯ, ಬಟ್ಟೆ ಬರೇ, ಒಡವೆ, ಹಣ ಎಲ್ಲವೂ ಕೊಡ ಬೆಂಕಿಗಾಹುತಿಯಾಗಿದೆ. ಸಂಬಂಧಪಟ್ಟ ಅಧಿಕಾರಿಗಳು ಘಟನಾ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿ ಸೂಕ್ತ ಪರಿಹಾರ ನೀಡುವ ಭರವಸೆ ನೀಡಿದ್ದಾರೆ.

ಮನೆ ಬೆಂಕಿಗಾಹುತಿಯಾಗಿ ಸಂಪೂರ್ಣ ಕಂಗಲಾಗಿರುವ ಕುಟುಂಬಕ್ಕೆ ಬೇಕಾಗಿದೆ ಸಹಾಯಹಸ್ತ.

ಹೆಸರು – ಹೇಮಾವತಿ
ಕೆನರಾ ಬ್ಯಾಂಕ್
A/C No – 4346101002237
Mob no -7795367619 ಗೆ ಸಹಾಯವನ್ನು ಮಾಡಬಹುದು.

Related Posts

Leave a Reply

Your email address will not be published.