ಅಮೃತ ಪ್ರಕಾಶ ಪತ್ರಿಕೆಯ 9ನೇ ವಾರ್ಷಿಕೋತ್ಸವ : ವಿಶೇಷ ಸಂಚಿಕೆ ಬಿಡುಗಡೆ

ಡಾ.ಮಾಲತಿ ಶೆಟ್ಟಿ ಮಾಣೂರು ಸಾರಥ್ಯದ ಅಮೃತ ಪ್ರಕಾಶ ಪತ್ರಿಕೆಯ 9ನೇ ವಾರ್ಷಿಕೋತ್ಸವ ಅಮೃತ ಪ್ರಕಾಶ ವಿಶೇಷ ಸಂಚಿಕೆ ಬಿಡುಗಡೆ ಕಾರ್ಯಕ್ರಮ ಮಂಗಳೂರಿನ ಪತ್ರಿಕಾ ಭವನದಲ್ಲಿ ನಡೆಯಿತು.
ಅಮೃತ ಪ್ರಕಾಶ ವಿಶೇಷ ಸಂಚಿಕೆಯನ್ನ ದಕ್ಷಿಣ ಕನ್ನಡ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು ಅಧ್ಯಕ್ಷರಾದ ಡಾ. ಎಂ.ಪಿ.ಶ್ರೀನಾಥ ಅವರು ಬಿಡುಗಡೆಗೊಳಿಸಿದ್ರು. ಈ ವೇಳೆ ಮಾತನಾಡಿದ ಅವರು, ನಿರಂತರವಾಗಿ 8 ವರ್ಷಗಳ ಕಾಲ ಪತ್ರಿಕೆಯನ್ನ ನಡೆಸುವುದು ತುಂಬಾ ಕಷ್ಟ. ಇವ್ರು ಗುಣಮಟ್ಟದ ಸುದ್ಧಿಗಳನ್ನು ನೀಡುತ್ತಿದ್ದಾರೆ. ರಾಜಕೀಯ ಸುದ್ಧಿ ಹೊರತು ಪಡಿಸಿ, ತೆರೆಮರೆಯಲ್ಲಿರುವ ಸಾಧಕರನ್ನ ಗುರುತಿಸುವ ಕೆಲಸವನ್ನು ಅಮೃತ ಪ್ರಕಾಶ ಪತ್ರಿಕೆ ಮಾಡುತ್ತಿದೆ ಎಂದು ಅವರು ಮೆಚ್ಚುಗೆ ವ್ಯಕ್ತಪಡಿಸಿದರು. ಈ ವೇಳೆ ಯೂನಿಯನ್ ಬ್ಯಾಂಕ್ ಆಫ್ ಇಂಡಿಯಾದ ಉಪ ಮಹ ಪ್ರಬಂದಕರಾದ ಮಹೇಶ್ ಜೆ, ಮಧುಸೂಧನ ಕುಶೆ ಕಾಲೇಜಿನ ಪ್ರಾಂಶುಪಾಲರಾದ ಡಾ.ಬಿಂದುಸಾರ ಶೆಟ್ಟಿ, ಅಮೃತ ಪ್ರಕಾಶ ಪತ್ರಿಕೆ ವ್ಯವಸ್ಥಾಪಕ ಸಂಪಾದಕಿ ಡಾ.ಮಾಲತಿ ಶೆಟ್ಟಿ ಮಾಣೂರು, ಶಿಕ್ಷಕಿ,ಕವಯಿತ್ರಿ ಸುರೇಖಾ ಯಾಳವಾರ ಉಪಸ್ಥಿತರಿದ್ದರು.
