ಆನೆಗುಂದಿ ಶ್ರೀ ಸರಸ್ವತೀ ಪೀಠ ಪಡುಕುತ್ಯಾರು ಮತ್ತು ವಿದ್ಯಾಭಾರತಿ ಕರ್ನಾಟಕ ಉಡುಪಿ ಜಿಲ್ಲೆ ಅಂಗಳ – 2026 ವಿದ್ಯಾರ್ಥಿಯಾದ ಕೆ. ಬೋಧಾಯನ ಶರ್ಮ ಇವರು ಎಸ್ ಎಸ್ ಎಲ್ ಸಿ ಪಬ್ಲಿಕ್ ಪರೀಕ್ಷೆಯಲ್ಲಿ 575/625 ಅಂಕ ಗಳಿಸಿ ಶಾಲೆಗೆ ಪ್ರಥಮ ಸ್ಥಾನಿಯಾಗಿರುತ್ತಾರೆ. ಇವರನ್ನು ವಿದ್ಯಾಭಾರತಿ ಕರ್ನಾಟಕ ಉಡುಪಿ ಜಿಲ್ಲೆ ಇದರ ವತಿಯಿಂದ ಶ್ರೀಮದ್ ಆನೆಗುಂದಿ ಸರಸ್ವತೀ ಪೀಠ ಮಹಾಸಂಸ್ಥಾನಮ್ ಕಟಪಾಡಿ ಪಡುಕುತ್ಯಾರು ಇಲ್ಲಿ ಸನ್ಮಾನಿಸಲಾಯಿತು. ಶ್ರೀಮಠದ ದಿವಾನರಾದ ಶ್ರೀಯುತ ಲೋಲಾಕ್ಷ ಶರ್ಮ, ವಿದ್ಯಾಭಾರತಿ ಕರ್ನಾಟಕ ಉಡುಪಿ ಜಿಲ್ಲೆ ಇದರ ಅಧ್ಯಕ್ಷರಾದ ಶ್ರೀಯುತ ಪಾಂಡುರಂಗ ಪೈ, ಹಾಗೂ ಕಾರ್ಯದರ್ಶಿಗಳಾದ ಶ್ರೀಯುತ ಮಹೇಶ್ ಹೈಕಾಡಿ, ಆನೆಗುಂದಿ ಶ್ರೀ ಸರಸ್ವತೀ ಪೀಠ ಸೂರ್ಯ ಚೈತನ್ಯ ಗ್ಲೋಬಲ್ ಅಕಾಡೆಮಿ ಶಾಲಾ ಆಡಳಿತ ಮಂಡಳಿಯ ಕಾರ್ಯದರ್ಶಿಗಳಾದ ಶ್ರೀಯುತ ಗುರುರಾಜ್ ಕೆ. ಜೆ, ಶಾಲಾ ಪ್ರಾಂಶುಪಾಲರಾದ ಶ್ರೀಮತಿ ಅನಿತಾ, ಉಪಪ್ರಾಂಶುಪಾಲರದ ಶ್ರೀಮತಿ ಸೌಮ್ಯ, ವಿದ್ಯಾರ್ಥಿಯಾದ ಶ್ರೀ ಕೆ. ಬೋಧಾಯನ ಶರ್ಮ, ಅವರ ತಂದೆ ಶ್ರೀ ಭಾಸ್ಕರ ಶರ್ಮ, ತಾಯಿ ಶ್ರೀಮತಿ ಶಕುಂತಳಾ ಉಪಸ್ಥಿತರಿದ್ದರು
ಎಸೆಸೆಲ್ಸಿ ಸಾಧಕನಿಗೆ ಆನೆಗುಂದಿ ಸಂಸ್ಥಾನಮ್‌ನಿಂದ ಸನ್ಮಾನ
RELATED ARTICLES
