ಸುಭಾಷಿತನಗರ ರೆಸಿಡೆಂಟ್ಸ್ ವೆಲ್‍ಫೇರ್ ಅಸೋಸಿಯೇಶನ್‍ನ ವಾರ್ಷಿಕೋತ್ಸವ
ಸುರತ್ಕಲ್: ಸುಭಾಷಿತನಗರ ರೆಸಿಡೆಂಟ್ಸ್ ವೆಲ್ ಫೇರ್ ಅಸೋಸಿಯೇಶನ್(ರಿ.) ಸುರತ್ಕಲ್ ಇದರ ಪ್ರಥಮ ವಾರ್ಷಿಕೋತ್ಸವ ಸಮಾರಂಭ ಸುರತ್ಕಲ್ ಬಂಟರ ಭವನದಲ್ಲಿ ಜರುಗಿತು.
ಮಂಗಳೂರು ಉತ್ತರ ವಿಧಾನ ಸಭಾ ಕ್ಷೇತ್ರದ ಶಾಸಕ ಡಾ. ವೈ. ಭರತ್ ಶೆಟ್ಟಿ ಕಾರ್ಯಕ್ರಮವನ್ನು ದೀಪ ಬೆಳಗಿಸುವ ಮೂಲಕ ಉದ್ಘಾಟಿಸಿದರು. ಬಳಿಕ ಮಾತಾಡಿದ ಅವರು, “ಸಂಘೇ ಶಕ್ತಿ ಕಲೌಯುಗೇ ಅನ್ನೋ ಮಾತಿನಂತೆ ಕಲಿಯುಗದಲ್ಲಿ ಸಂಘಟನೆಯ ಶಕ್ತಿಯಿದ್ದರೆ ಮಾತ್ರ ಸಮಾಜದ ಅಭಿವೃದ್ಧಿ ಸಾಧ್ಯ. ಇದನ್ನು ಅಕ್ಷರಶಃ ಪಾಲಿಸಿಕೊಂಡು ಬರುತ್ತಿರುವ ಸುಭಾಷಿತ ನಗರ ವೆಲ್ ಫೇರ್ ಅಸೋಸಿಯೇಷನ್ ಹತ್ತು ಹಲವಾರು ಸಮಾಜಮುಖಿ ಕಾರ್ಯಗಳಲ್ಲಿ ತೊಡಗಿಕೊಂಡಿದೆ ಎಂದರು.
ಸಮಾರಂಭದಲ್ಲಿ ಎಸ್ ಎಸ್ ಎಲ್ ಸಿ ಮತ್ತು ಪಿಯುಸಿಯಲ್ಲಿ ಅತ್ಯಧಿಕ ಅಂಕ ಗಳಿಸಿದ ವಿದ್ಯಾಥಿಗಳನ್ನು ಗೌರವಿಸಲಾಯಿತು. ಅದೇ ರೀತಿ ತೆಲಿಕೆದ ಬೊಳ್ಳಿ ದೇವದಾಸ್ ಕಾಪಿಕಾಡ್, ಪತ್ರಕರ್ತ ಬಾಳ ಜಗನ್ನಾಥ ಶೆಟ್ಟಿ, ಪ್ರಭುಕೃಷ್ಣನ್, ಅದ್ವಿಕ ಶೆಟ್ಟಿ ಅವರನ್ನು ಸನ್ಮಾನಿಸಲಾಯಿತು.
ಮುಖ್ಯ ಅತಿಥಿ ಕರಾವಳಿ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ರತ್ನಾಕರ ಹೆಗ್ಡೆ ಮಟ್ಟಾರ್,ಸುಭಾಷಿತನಗರ ರೆಸಿಡೆಂಟ್ಸ್ ವೆಲ್ ಫೇರ್ ಅಸೋಸಿಯೇಶನ್ ಅಧ್ಯಕ್ಷ ರಮೇಶ್ ಶೆಟ್ಟಿ ಸಭಾ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಪ್ರಾಸ್ತಾವಿಕ ಮಾತುಗಳನ್ನಾಡಿದರು. ಮುಖ್ಯ ಅತಿಥಿಗಳಾಗಿ ಮುಂಬಯಿ ವಿ.ಕೆ. ಸಮೂಹ ಸಂಸ್ಥೆಯ ಚೆಯರ್ಮ್ಯಾನ್ ಕರುಣಾಕರ ಎಂ. ಶೆಟ್ಟಿ ಮದ್ಯಗುತ್ತು, ಹಿರಿಯ ರಂಗಕರ್ಮಿ ಡಾ. ದೇವದಾಸ್ ಕಾಪಿಕಾಡ್, ನಾಗರಿಕ ಸಮಿತಿಯ ಅಧ್ಯಕ್ಷ ಸುಭಾಶ್ಚಂದ್ರ ಶೆಟ್ಟಿ ಹೊಸಬೆಟ್ಟು, ನಾಗರಿಕ ಸಲಹಾ ಸಮಿತಿ ಡಾ. ರಾಜ್ ಮೋಹನ್ ರಾವ್, ಸುರತ್ಕಲ್ ಬಂಟರ ಸಂಘದ ಅಧ್ಯಕ್ಷ ಸುಧಾಕರ ಎಸ್. ಪೂಂಜ, ವಿಜಯ ಮೆಡಿಕಲ್ ಮಾಲಕ ದಯಾನಂದ ಶೆಟ್ಟಿ, ಕಾರ್ಪೋರೇಟರ್ ಗಳಾದ ನಯನಾ ಕೋಟ್ಯಾನ್, ಶ್ವೇತಾ ಪೂಜಾರಿ, ವರುಣ್ ಚೌಟ, ಮೊದಲಾದವರು, ಎಸೋಸಿಯೇಶನ್ ನ ಗೌರವ ಸಲಹೆಗಾರ ಸತ್ಯಜಿತ್ ಸುರತ್ಕಲ್, ಪ್ರಶಾಂತ್ ಎಂ, ಉಪಾಧ್ಯಕ್ಷ ತಾರಾನಾಥ ಸಾಲ್ಯಾನ್, ಕೋಶಾಧಿಕಾರಿ ನರಸಿಂಹ ಸುವರ್ಣ, ಕಾರ್ಯದರ್ಶಿ ಕಿಷನ್ ರಾವ್, ಜೊತೆ ಕಾರ್ಯದರ್ಶಿ ಚಂದ್ರಶೇಖರ ಶೆಟ್ಟಿ ಉಪಸ್ಥಿತರಿದ್ದರು.