ಮೂಡುಬಿದರೆಯಲ್ಲಿ ಬೋರುಗುಡ್ಡೆಯಲ್ಲಿ ಸಂಜೀವಿನಿ ಮಾಸಿಕ ಸಂತೆ

ಮೂಡುಬಿದಿರೆ: ತಾವು ಮನೆಯಲ್ಲಿ ಬೆಳೆಸಿದ ತರಕಾರಿಗಳಾದ ಬಸಳೆ, ಹೀರೆಕಾಯಿ, ಸೌತೆಕಾಯಿ, ಅಮಟೆಕಾಯಿ, ಬಾಳೆಕಾಯಿ, ಸ್ವ ಉದ್ಯೋಗಕ್ಕಾಗಿ ತಯಾರಿಸಿದ ಉಪ್ಪಿನಕಾಯಿ, ಹಿಡಿಸೂಡಿಯ ಕಟ್ಟುಗಳು, ಬೀಳುಗಳಿಂದ ತಯಾರಿಸಿದ ಬುಟ್ಟಿಗಳು, ತೆಂಗಿನ ಗೆರಟೆಯನ್ನು ಬಳಸಿ ಮಾಡಿದ ಸೌಟುಗಳು, ವೇಸ್ಟ್ ಬಟ್ಟೆಗಳನ್ನು ಬಳಸಿ ಮಾಡಿದ ಬಣ್ಣ ಬಣ್ಣದ ಕಾಲು ಒರೆಸುವ ಬಟ್ಟೆಗಳು, ತಿಂಡಿ-ತಿನಿಸುಗಳು, ಮಾರಾಟಗಳೊಂದಿಗೆ ಮಹಿಳೆಯರು ಭರ್ಜರಿ ವ್ಯಾಪಾರ-ವಹಿವಾಟನ್ನು ಮಾಡುವ ಮೂಲಕ ಸ್ವಾವಲಂಬಿಗಳಾಗಿ ಹೇಗೆ ಬದುಕಬಹುದು ಎಂಬುದನ್ನು ಬೋರುಗುಡ್ಡೆಯಲ್ಲಿ ಸಂಜೀವಿನಿ ಮಾಸಿಕ ಸಂತೆಯಲ್ಲಿ ಮಹಿಳೆಯರು ತೋರಿಸಿಕೊಟ್ಟಿದ್ದಾರೆ.

moodabidre

ಕೌಶಲ್ಯಾಭಿವೃದ್ಧಿ ಉದ್ಯಮಶೀಲತೆ ಮತ್ತು ಜೀವನೋಪಾಯ ಇಲಾಖೆ, ಸಂಜೀವಿನಿ ಕರ್ನಾಟಕ ರಾಜ್ಯ ಗ್ರಾಮೀಣ ಜೀವನೋಪಾಯ ಸಂವರ್ಧನಾ ಸಂಸ್ಥೆ, ದ.ಕ ಜಿಲ್ಲಾ ಪಂಚಾಯತ್, ಮೂಡುಬಿದಿರೆ ತಾಲೂಕು ಪಂಚಾಯತ್, ನೆಲ್ಲಿಕಾರು ಗ್ರಾಮ ಪಂಚಾಯತ್ ಮತ್ತು ಭ್ರಾಮರಿ ಮಹಿಳಾ ಸಂಜೀವಿನಿ ಗ್ರಾಮ ಒಕ್ಕೂಟ ನೆಲ್ಲಿಕಾರು ಇವರ ವತಿಯಂದ ನೆಲ್ಲಿಕಾರು ಗ್ರಾ.ಪಂ.ವ್ಯಾಪ್ತಿಯ ಬೋರುಗುಡ್ಡೆ ಶ್ರೀ ಸತ್ಯನಾರಾಯಣ ದೇವಸ್ಥಾನದ ವಠಾರದಲ್ಲಿ ಸಂಜೀವಿನಿ ಮಾಸಿಕ ಸಂತೆ ನಡೆದಿದ್ದು ಮಹಿಳೆಯರು ಬಹಳ ಹುಮ್ಮಸಿನಿಂದ ವ್ಯಾಪಾರ ನಡೆಸಿದರು.

ಶಾಸಕ ಉಮಾನಾಥ್ ಕೋಟ್ಯಾನ್ ಸಂಜೀವಿನಿ ಮಾಸಿಕ ಸಂತೆಯನ್ನು ಉದ್ಘಾಟಿಸಿ ಮಾತನಾಡಿ ಗ್ರಾಮೀಣ ಭಾಗದ ಮಹಿಳೆಯರು ಸ್ವಾವಲಂಬಿಗಳಾಗಬೇಕು. ಮಹಿಳೆ ಸ್ವಂತ ವ್ಯಾಪಾರ-ವಹಿವಾಟುಗಳನ್ನು ಮಾಡಲು ಶಕ್ತಿಯನ್ನು ತುಂಬುವಂತಹ ಕೇಂದ್ರ ಸರಕಾರದ ಈ ಯೋಜನೆಯು ಮಹಿಳೆಯರಿಗೆ ಸ್ವಾವಲಂಬಿಗಳಾಗಿ ಬದುಕಲು ದಾರಿ ಮಾಡಿಕೊಟ್ಟಿದೆ ಎಂದು ತಿಳಿಸಿದರು.

umanatha kotyan

ನೆಲ್ಲಿಕಾರು ಗ್ರಾಮ ಪಂಚಾಯತ್ ಅಧ್ಯಕ್ಷೆ ಸುಶೀಲಾ ಅಧ್ಯಕ್ಷತೆಯನ್ನು ವಹಿಸಿದ್ದರು. ಗ್ರಾ.ಪಂ. ಉಪಾಧ್ಯಕ್ಷ ಶಶಿಧರ್ ಎಂ, ಮಂಗಳೂರು ಎನ್.ಆರ್.ಎಲ್.ಎಮ್‍ನ ಜಿಲ್ಲಾ ಕಾರ್ಯಕ್ರಮ ವ್ಯವಸ್ಥಾಪಕ ಹರಿಪ್ರಸಾದ್, ಪಂಚಾಯತ್ ಅಭಿವೃದ್ಧಿ ಅಧಿಕಾರಿ ಪ್ರಶಾಂತ್ ಶೆಟ್ಟಿ, ತಾಲೂಕು ಐ.ಇ.ಸಿ ಸಂಯೋಜಕಿ ಅನ್ವಯ ಉಪಸ್ಥಿತರಿದ್ದರು.

Related Posts

Leave a Reply

Your email address will not be published.