ಅಂತರಾಷ್ಟಿಯ ಸೌಂದರ್ಯ ಸ್ಪರ್ಧೆಯಲ್ಲಿ ಶ್ವೇತಾ ಮೌರ್ಯ

ಬೆಂಗಳೂರಿನ ಖ್ಯಾತ ಮೊಡೆಲ್ ಹಾಗೂ ಮಹಿಳಾ ಉದ್ಯಮಿ ಶ್ವೇತಾ ಮೌರ್ಯ ಅವರು ಸಿಂಗಾಪುರದಲ್ಲಿ ನಡೆಯುತ್ತಿರುವ ಮಿಸೆಸ್ ವರ್ಲ್ಡ್ ವೈಡ್ 2022 ಸೌಂದರ್ಯ ಸ್ಪರ್ಧೆಯಲ್ಲಿ ಭಾರತವನ್ನು ಪ್ರತಿನಿಧಿಸುತ್ತಿದ್ದಾರೆ. 35 ದೇಶಗಳ ಸ್ಪರ್ಧಿಗಳು ಈ ಸ್ಪರ್ಧೆಯಲ್ಲಿ ಭಾಗಹಿಸುತ್ತಿದ್ದಾರೆ. ಬುಧವಾರದಂದು ಮೊದಲ ಸುತ್ತಿನ ಸ್ಪರ್ಧೆ ಆರಂಭಗೊಳ್ಳಲಿದ್ದು, ಅಕ್ಟೋಬರ್ 30 ರಂದು ಅಂತಿಮ ಸುತ್ತಿನ ಸ್ಪರ್ಧೆ ನಡೆಯಲಿದೆ.


ಭಾರತದ ಪ್ರಮುಖ ನಗರಗಳಲ್ಲಿ ನಡೆಯುವ ಸಾಮಾಜಿಕ ಕಾಳಜಿಯ ಮ್ಯಾರಾಥಾನ್ ಸ್ಪರ್ಧಾ ಕೂಟದಲ್ಲಿ ನಿರಂತರವಾಗಿ ಭಾಗವಹಿಸುತ್ತಿರುವ ಶ್ವೇತಾ ಮೌರ್ಯ ಅವರು “ದಿ ಫಿಟ್ನೆಸ್ ಐಕಾನ್” ಪ್ರಶಸ್ತಿ ವಿಜೇತರಾಗಿದ್ದಾರೆ. 2018ರಲ್ಲಿ ಪ್ರತಿಷ್ಠಿತ ಮಿಸೆಸ್ ನೀಲಗಿರಿಸ್ , 2019ರಲ್ಲಿ ವರ್ಲ್ಡ್ ವೈಡ್ ಅಂಬಾಸಿಡರ್ ಪ್ರಶಸ್ತಿ ಪುರಸ್ಕೃತರಾಗಿದ್ದಾರೆ. ಶ್ವೇತಾ ಅವರು ಬೆಂಗಳೂರಿನ ಹಸಿರು ರಾಯಭಾರಿ ಆಗಿಯು ಸೇವೆ ಸಲ್ಲಿಸುತ್ತಿದ್ದಾರೆ.

ವಿವಿಧ ಸಾಮಾಜಿಕ ಕಳಕಳಿಯ 400 ಕ್ಕೂ ಹೆಚ್ಚು ಮ್ಯಾರಾಥಾನ್‌ಗಳಲ್ಲಿ ಭಾಗವಹಿಸಿರುವ ಶ್ವೇತಾ ಅವರ ಪರಿಸರ ಕಾಳಜಿಯನ್ನು ಗುರುತಿಸಿ 2020 ರಲ್ಲಿ ಗ್ರೀನ್ ಕ್ವೀನ್ ಪುರಸ್ಕಾರ ನೀಡಿ ಗೌರವಿಸಲಾಗಿದೆ. ಶ್ವೇತಾ ಅವರ ಸಮಾಜಮುಖಿ ಸೇವೆಯನ್ನು ಗುರುತಿಸಿ ಎಲೈಟ್ ಕ್ಲಬ್ ಇಂಟರ್ ನ್ಯಾಶನಲ್ ಸಂಸ್ಥೆಯು ರಾಷ್ಟಿçÃಯ ಸಮಾಜ ಸೇವಾ ರತ್ನ ಪ್ರಶಸ್ತಿ ನೀಡಿ ಗೌರವಿಸಿದೆ. ಶ್ವೇತಾ ಅವರ ಸಾಧನೆಯ ಬದುಕಿನ ಚಿತ್ರಣವನ್ನು ಅನಾವರಣಗೊಳಿಸುವ “ಶ್ವೇತಾ ಮೌರ್ಯ ಕ್ರೌನಿಂಗ್ ಫಿಟ್ನೆಸ್- ದಿ ಗರ್ಲ್ ನೆಕ್ಸ್÷್ಟ ಡೋರ್” ಎಂಬ ಆತ್ಮ ಕಥನ ಪ್ರಕಟವಾಗಿದೆ.
ಎರಡು ಮಕ್ಕಳ ತಾಯಿ ಆಗಿರುವ ಶ್ವೇತಾ ಅವರು ಸಂಸಾರ , ಉದ್ಯಮದ ನಡುವೆ ಮೊಡೆಲಿಂಗ್ ಹಾಗೂ ಸಮಾಜಮುಖಿ ಕೆಲಸದಲ್ಲಿ ನಿರಂತರವಾಗಿ ತೊಡಗಿಸಿಕೊಂಡಿದ್ದು, ಇದೀಗ ಪ್ರತಿಷ್ಠಿತ ಅಂತರಾಷ್ಟಿçÃಯ ಸೌಂಧರ್ಯ ಸ್ಪರ್ಧೆಯಲ್ಲಿ ಭಾರತವನ್ನು ಪ್ರತಿನಿಧಿಸುವ ಅವಕಾಶ ಪಡೆದಿದ್ದಾರೆ. ಮಹಿಳಾ ಸಬಲೀಕರಣದ ಧ್ಯೇಯ ಹಾಗೂ ಪರಿಸರ ಕಾಳಜಿಯ ಸೇವಾಕಾರ್ಯದಲ್ಲಿ ಆದ್ಯತೆಯಿಂದ ತೊಡಗಿಕೊಳ್ಳುವುದಾಗಿ ಶ್ವೇತಾ ಅವರು ತಿಳಿಸಿದ್ದಾರೆ.
