ಅಪ್ಪಣ್ಣ ಕಟ್ಟೆಯ ಶೆಟ್ಟಿ ಆಟೋ ಪಾರ್ಕ್ ಮೇಲ್ಛಾವಣಿ ಅಭಿವೃದ್ಧಿ – ಶಾಸಕ ವೇದವ್ಯಾಸ ಕಾಮತ್ ಉದ್ಘಾಟನೆ

ನಗರದ ಅಪ್ಪಣ್ಣ ಕಟ್ಟೆಯ ಶೆಟ್ಟಿ ಆಟೋ ಪಾರ್ಕ್ ನ ಮೇಲ್ಛಾವಣಿಯನ್ನು ಶಾಸಕರ ನಿಧಿಯಲ್ಲಿ ಅಭಿವೃದ್ಧಿ ಪಡಿಸಲಾಗಿದ್ದು ಶಾಸಕ ವೇದವ್ಯಾಸ ಕಾಮತ್ ರವರು ಉದ್ಘಾಟಿಸಿದರು.

o

ನಂತರ ಮಾತನಾಡಿದ ಶಾಸಕರು, ಮಂಗಳೂರು ಮಹಾನಗರ ಪಾಲಿಕೆಯ 41ನೇ ಸೆಂಟ್ರಲ್ ವಾರ್ಡಿನ ವ್ಯಾಪ್ತಿಯ ಈ ಆಟೋ ಪಾರ್ಕ್ ಜಿಲ್ಲೆಯ ಅತೀ ಹಳೆಯ ನಿಲ್ದಾಣಗಳಲ್ಲಿ ಒಂದಾಗಿದ್ದು ಸಾರ್ವಜನಿಕರಿಗೆ ಅತ್ಯುತ್ತಮ ಸೇವೆ ಒದಗಿಸುತ್ತಾ ಬಂದಿದೆ. ದಿನನಿತ್ಯ ದುಡಿಯುವ ಆಟೋ ಚಾಲಕರದ್ದು ಶ್ರಮಿಕ ವರ್ಗವಾಗಿದ್ದು ಅವರುಗಳು ಪ್ರಯಾಣಿಕರ ಜೊತೆಗೆ ತಮ್ಮ ಆಟೋಗಳ ಬಗ್ಗೆಯೂ ವಿಶೇಷ ಕಾಳಜಿ ಹೊಂದಿರುತ್ತಾರೆ. ತಾವು ಬಿಸಿಲಲ್ಲಿದ್ದರೂ ತಮ್ಮ ಆಟೋಗಳು ನೆರಳಲ್ಲಿ ಇರಬೇಕು ಎಂದು ಬಯಸುವ ಅವರ ಪಾಲಿಗೆ ಈ ಮೇಲ್ಛಾವಣಿಯ ಅಭಿವೃದ್ಧಿಯು ಸಹಜವಾಗಿ ಸಂತಸ ಮೂಡಿಸಿರುತ್ತದೆ ಎಂದರು.

ಈ ಸಂದರ್ಭದಲ್ಲಿ ಮ.ನ.ಪಾ ಸದಸ್ಯೆ ಪೂರ್ಣಿಮಾ, ಬಿಜೆಪಿ ಪ್ರಮುಖರಾದ ರಮೇಶ್ ಹೆಗ್ಡೆ, ಪೂರ್ಣಿಮಾ ರಾವ್, ಭಾಸ್ಕರ ಚಂದ್ರ ಶೆಟ್ಟಿ, ಸೇರಿದಂತೆ ಅನೇಕರು ಉಪಸ್ಥಿತರಿದ್ದರು.

Related Posts

Leave a Reply

Your email address will not be published.