ಶ್ರೀ ಜ್ಞಾನೇಶ್ವರಿ ಮಹಾಮಾಯಿ ದೈವಜ್ಞ ಮಹಿಳಾ ಮಂಡಳಿ : ಪ್ರಥಮ ವರ್ಷದ ವಾರ್ಷಿಕೋತ್ಸವದ ಸಂಭ್ರಮ

ಬೈಂದೂರು ತಾಲೂಕಿನ ಬಡಾಕೆರೆ ಶ್ರೀಲಕ್ಷ್ಮೀ ಜನಾರ್ದನ ಸಭಾಭವನದಲ್ಲಿ ನಡೆದ ಶ್ರೀ ಜ್ಞಾನೇಶ್ವರಿ ಮಹಾಮಾಯಿ ದೈವಜ್ಞ ಮಹಿಳಾ ಮಂಡಳಿ ನಾವುಂದ-ಬಡಾಕೆರೆ ಪ್ರಥಮ ವರ್ಷದ ವಾರ್ಷಿಕೋತ್ಸವ ಸಮಾರಂಭ ನಡೆಯಿತು.
ಅಖಿಲ ಕರ್ನಾಟಕ ದೈವಜ್ಞ ಬ್ರಾಹ್ಮಣ ಮಹಿಳಾ ಮಂಡಳಿ ಶಿವಮೊಗ್ಗ ಅಧ್ಯಕ್ಷೆ ವಿನಯಾ ರಾಯ್ಕರ್ ಉದ್ಘಾಟಿಸಿ ಮಾತನಾಡಿದರು. ಶೈಕ್ಷಣಿಕ ಕ್ಷೇತ್ರದಲ್ಲಿ ಅಭಿವೃದ್ಧಿ ಸಾಧಿಸಿದಾಗ ಮಾತ್ರ ಪ್ರತಿಯೊಂದು ಸಮಾಜದ ಜನಾಂಗವು ರಾಜಕೀಯವಾಗಿ,ಸಮಾಜಿಕವಾಗಿ ಅಭಿವೃದ್ಧಿ ಹೊಂದಲು ಸಾಧ್ಯವಿದೆ.ಪ್ರೀತಿ,ವಿಶ್ವಾಸ,ಸಹಬಾಳ್ವೆಯ ಬದುಕು ಸಂಘಟನೆಗಳ ಧ್ಯೇಯವಾಗಬೇಕು ಸಂಘಟಿತರಾಗಿ ಬಾಳುವುದರಿಂದ ಸಮಾಜದ ಏಳಿಗೆ ಸಾಧ್ಯವಿದೆ ಎಂದು ಹೇಳಿದರು.
ನಾವುಂದ-ಬಡಾಕೆರೆ ಅಧ್ಯಕ್ಷೆ ಸುಲೋಚನಾ ಚಂದ್ರ ಶೇಟ್ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಅವರುಕೌಶಲ್ಯ ತರಬೇತಿಯನ್ನು ಪಡೆದುಕೊಂಡು ಸರಕಾರ ನೀಡುವ ಸೌಲಭ್ಯಗಳನ್ನು ಉಪಯೋಗಿಸಿ ಕೊಂಡು ಸ್ವ ಉದ್ಯೋಗ ಮಾದರಿಯ ಕೆಲಸಗಳಲ್ಲಿ ಮಹಿಳೆಯರು ತೊಡಗಿಕೊಳ್ಳುವುದರಿಂದ ಆರ್ಥಿಕ ಸಭಲತೆಯನ್ನು ಸಾಧಿಸಬಹುದಾಗಿದೆ ಎಂದು ಹೇಳಿದರು.
ಕಂಬದಕೋಣೆ ಗ್ರಾ.ಪಂ ಪಿಡಿಒ ಪೂರ್ಣಿಮಾ ಶೇಟ್ ಉಪ್ಪುಂದ ಅವರು ಪಂಚಾಯತ್ ಸೌಲಭ್ಯಗಳ ಬಗ್ಗೆ ಮಾಹಿತಿಯನ್ನು ನೀಡಿದರು. ನಾವುಂದ ಬಡಾಕೆರೆ ಮಹಿಳಾ ಸಂಘದ ಅಧ್ಯಕ್ಷೆ ಸುಲೋಚನಾ ಚಂದ್ರ ಶೇಟ್ ವೈಯಕ್ತಿಕ ನೆಲೆಯಲ್ಲಿ ವಿದ್ಯಾರ್ಥಿ ವೇತನ ಮತ್ತು ಅರ್ಥಿಕ ನೆರವನ್ನು ವಿತರಿಸಿದರು.ಸಮಾಜದ ಹಿರಿಯ ದಂಪತಿಗಳನ್ನು ಮತ್ತು ಪ್ರತಿಭಾನ್ವಿತರನ್ನು ಸನ್ಮಾನಿಸಲಾಯಿತು,ವಿವಿಧ ಸ್ಪರ್ಧೆಗಳಲ್ಲಿ ವಿಜೇತರಾದವರಿಗೆ ಬಹುಮಾನ ವಿತರಿಸಲಾಯಿತು,ಮಹಿಳಾ ಸಂಘದ ವತಿಯಿಂದ ಸಾಂಸ್ಕ್ರತಿಕ ಕಾರ್ಯಕ್ರಮ ನಡೆಯಿತು.

ಮಹಿಳಾ ಸಂಘದ ಕಾರ್ಯದರ್ಶಿ ದೀಪಿಕಾ ಗುರುರಾಜ ಶೇಟ್ ಸ್ವಾಗತಿಸಿದರು.ಸಂಘದ ಸದಸ್ಯರು ಪ್ರಾರ್ಥಿಸಿದರು.ಸವಿತಾ ರತ್ನಾಕರ್ ಶೇಟ್ ನಿರೂಪಿಸಿದರು.ಗುರುರಾಜ ಶೇಟ್ ಸಹಕರಿಸಿದರು. ವರದಿ ವಚನವನ್ನು ಅಂಬಿಕಾ ಶೇಟ್ ನೆರವೇರಿಸಿದರು. ಉಪಾಧ್ಯಕ್ಷೆ ವಸಂತಿ ಶೇಟ್ ವಂದಿಸಿದರು.

ಈ ಸಂದರ್ಭದಲ್ಲಿ ಡಾ.ಸ್ವಾತಿ ಕುಂದಾಪುರ ,ಅಖಿಲ ಕರ್ನಾಟಕ ದೈವಜ್ಞ ಮಹಿಳಾ ಮಂಡಳಿ ಸಂಯೋಜಕಿ ಶಕುಂತಲಾ ರಾಮದಾಸ ಶೇಟ್ ಮುರ್ಡೇಶ್ವರ,ಭಟ್ಕಳ ಶ್ರೀಜ್ಞಾನೇಶ್ವರಿ ಮಹಿಳಾ ಮಂಡಳಿ ಅಧ್ಯಕ್ಷೆ ಪರಿಮಳ ರಾಜಶೇಖರ್ ಶೇಟ್,ಬೈಂದೂರು ದೈವಜ್ಞ ಮಹಿಳಾ ಮಂಡಳಿ ಅಧ್ಯಕ್ಷೆ ವಿದ್ಯಾ ಅಶೋಕ್ ಶೇಟ್,ಜಯಂತಿ ನಾಗರಾಜ ಶೇಟ್ ಶಿವಮೊಗ್ಗ,ವಾಣಿ ಪ್ರವೀಣ್ ಶೇಟ್ ಶಿವಮೊಗ್ಗ,ಜಯಶ್ರೀ ನಾಗರಾಜ ಶೇಟ್ ಕುಂದಾಪುರ ಹಾಗೂ ಮಹಿಳಾ ಮಂಡಳಿಗಳ ಪದಾಧಿಕಾರಿಗಳು,ಸದಸ್ಯರು ಉಪಸ್ಥಿತರಿದ್ದರು.
