ಮೂಡುಬಿದರೆಯ ಕೋಟಿ-ಚೆನ್ನಯ್ಯ ಕಂಬಳ ಕರೆಯಲ್ಲಿ ನಡೆದ ಕುದಿ ಕಂಬಳ

ಮೂಡುಬಿದಿರೆಯ ಒಂಟಿಕಟ್ಟೆಯ ಅಬ್ಬಕ್ಕ ಸಂಸ್ಕೃತಿ ಗ್ರಾಮದ ಕಡಲಕೆರೆ ಬಳಿ ಇರುವ ಕೋಟಿ-ಚೆನ್ನಯ ಕಂಬಳ ಕರೆಯಲ್ಲಿ ಭಾನುವಾರ ನಡೆದ ಕುದಿ ಕಂಬಳವನ್ನು ಶಾಸಕ, ಮಾಜಿ ಸಚಿವ ಅರವಿಂದ ಲಿಂಬಾವಳಿ ವೀಕ್ಷಿಸಿ ಮೆಚ್ಚುಗೆ ವ್ಯಕ್ತಪಡಿಸಿದರು. ಲಿಂಬಾವಳಿ ಅವರು ಒಂಟಿಕಟ್ಟೆಯ ಸಭಾಭವನದಲ್ಲಿ ನಡೆದ ಖಾಸಗಿ ಕಾರ್ಯಕ್ರಮದಲ್ಲಿ ಭಾಗವಹಿಸಿ ಅಲ್ಲಿಯೇ ಪಕ್ಕದಲ್ಲಿ ನಡೆಯುತ್ತಿದ್ದ ಕುದಿ ಕಂಬಳದ ಕಡೆಗೆ ಕಣ್ಣು ಹಾಯಿಸಿ ಸ್ವಲ್ಪ ಹೊತ್ತು ಅಲ್ಲಿಯೇ ಕಾಲ ಕಳೆದು ಕಂಬಳದ ಬಗ್ಗೆ ಕೇಳಿ ತಿಳಿದುಕೊಂಡರು

. 35 ಜತೆ ಕೋಣಗಳು ಈ ಕುದಿ ಕಂಬಳದಲ್ಲಿ ಭಾಗವಹಿಸಿದ್ದವು. ಪುರಸಭಾಧ್ಯಕ್ಷ ಪ್ರಸಾದ್ ಕುಮಾರ್, ಕೋಣಗಳ ಯಜಮಾನರುಗಳಾದ ಹೊಸಬೆಟ್ಟು ಏರಿಮಾರು ಬರ್ಕೆ ಚಂದ್ರಹಾಸ ಸನಿಲ್, ಮೋರ್ಲ ಗಿರೀಶ್ ಆಳ್ವ ಪೆರಿಯಾಗುತ್ತು, ಕಕ್ಕೆಪದವು ಪೆಂರ್ಗಾಲ್ ಬಾಬು ವೆಂಕಪ್ಪ ಗೌಡ ಮತ್ತಿತರರು ಈ ಸಂದರ್ಭದಲ್ಲಿದ್ದರು.