ಬೈಂದೂರಿನ ಶ್ರೀ ವಿಶಾಲಾಕ್ಷೀ ಅಮ್ಮನವರ ದೇವಸ್ಥಾನ ಬ್ರಹ್ಮಕಲಶೋತ್ಸವ

ಬೈಂದೂರಿನ ಕಿರಿ ಮಂಜೇಶ್ವರದ ಶ್ರೀ ಕ್ಷೇತ್ರ ಶ್ರೀ ಅಗಸ್ತೇಶ್ವರ, ಶ್ರೀ ಮಹಾಗಣಪತಿ, ಶ್ರೀ ವಿಶಾಲಾಕ್ಷಿ ಅಮ್ಮನವರ ದೇವಸ್ಥಾನದಲ್ಲಿ ಶ್ರೀ ಅಗಸ್ತೇಶ್ವರ ದೇವರ ಜೀರ್ಣಾಷ್ಟಬಂಧ, ಬ್ರಹ್ಮಕಲಶೋತ್ಸವ ಪುಷ್ಪರಥ ಸಮರ್ಪಣೆ ಹಾಗೂ ಶ್ರೀ ಮನ್ಮಹಾ ರಥೋತ್ಸವವು ಏ.28ರಿಂದ ಮೇ 7ರ ವರೆಗೆ ಸಂಭ್ರಮದಿಂದ ನಡೆಯಲಿದೆ.

ವಾದ್ಯಗೋಷ್ಠಿ ಚೆಂಡೆ ವಾದನ ಮೂಲಕ ಭವ್ಯ ಮೆರವಣಿಗೆ ಭಕ್ತರೊಬ್ಬರು ಕೊಡಮಾಡಿದ ನೂತನ ಪುಷ್ಪಾರಥ ಅದ್ದೂರಿಯಾಗಿ ದೇವಸ್ಥಾನಕ್ಕೆ ಬರಮಾಡಿಕೊಳ್ಳಲಾಯಿತು. ನಾಗೂರಿನ ಶ್ರೀ ಆಂಜನೇಯ ದೇವಸ್ಥಾನದಿಂದ ಮೆರವಣಿಗೆ ಪ್ರಾರಂಭಗೊಂಡು ಅರೆಹೊಳೆ ಕ್ರಾಸ್ ಮುಖಾಂತರ,ಆಕಳಬೈಲು ಮಾರ್ಗವಾಗಿ ದೇವಾಲಯಕ್ಕೆ ಆಗಮಿಸಿದೆ. ಪ್ರತಿಯೊಬ್ಬರೂ ಸಮವಸ್ತ್ರ ಧರಿಸಿ ಮೆರವಣಿಗೆಯಲ್ಲಿ ಭಾಗವಹಿಸಿ ಮೆರವಣಿಗೆ ಮೆರವನು ಇನ್ನಷ್ಟು ಹೆಚ್ಚಿಸಿದೆ.ಎಲ್ಲ ಧಾರ್ಮಿಕ ವಿಧಿ ವಿಧಾನಗಳು ದೇವಸ್ಥಾನದ ತಂತ್ರಿಗಳಾದ ಕೃಷ್ಣ ಸೋಮಯಾಜಿ ಇವರ ನೇತೃತ್ವದಲ್ಲಿ ನಡೆಯಲಿದೆ. ಈ ಸಂದರ್ಭದಲ್ಲಿ ದೇವಸ್ಥಾನದ ಆಡಳಿತ ಮಂಡಳಿ ಸದಸ್ಯರು, ಅರ್ಚಕರು, ದೇವಸ್ಥಾನ ಸಿಬ್ಬಂದಿ, ಹುಟ್ಟಿನವರು, ವಾದ್ಯದವರು, ನಂಬಿದ ಕುಟುಂಬಸ್ಥರು ಊರ ಹಾಗೂ ಪರ ಊರ ಗ್ರಾಮಸ್ಥರು ಉಪಸ್ಥಿತರಿದ್ದರು.

Related Posts

Leave a Reply

Your email address will not be published.