HomeFresh Newsಬೈಂದೂರ್ :ಬಾರ್ ವೊಂದರ ಮುಂಭಾಗದಲ್ಲಿ ತಂಡದಿಂದ ಹಲ್ಲೆ

ಬೈಂದೂರ್ :ಬಾರ್ ವೊಂದರ ಮುಂಭಾಗದಲ್ಲಿ ತಂಡದಿಂದ ಹಲ್ಲೆ

ಕುಂದಾಪುರ; ಬೈಂದೂರಿನ ಬಾರ್‍ವೂಂದರ ಮುಂಭಾಗದಲ್ಲಿ ಕಂಠಪೂರ್ತಿ ಕುಡಿದು ಪುಡಿ ರೌಡಿಗಳ ತಂಡ ಅಟ್ಟಹಾಸ ಮೆರೆದಿರುವ ಘಟನೆ ಬೈಂದೂರಿನಲ್ಲಿ ನಡೆದಿದೆ.

ವಾಹನ ಅಡ್ಡ ಬಂದ ಕಾರಣ ಆರಂಭವಾದ ವಾಗ್ವಾದ, ಪರಸ್ಪರ ಹಲ್ಲೆ ನಡೆಸಿದ್ದಾರೆ. ಟಾಟಾ ಏಸ್ ವಾಹನದಲ್ಲಿದ್ದ ರಮೇಶ್ ದೇವಾಡಿಗ ಹಾಗೂ ರವಿ ಪೂಜಾರಿ ಮೇಲೆ ಪುಡಿ ರೌಡಿಗಳಿಂದ ಹಲ್ಲೆ ನಡೆದಿದೆ ಪಾರ್ಕಿಂಗ್ ನಿಲ್ಲಿಸಿದ ವಾಹನದ ಗಾಜನ್ನು ಹೆಲ್ಮೆಟ್ ಮತ್ತು ಸೋಡಾ ಬಾಟಲಿಗಳಿಂದ ಜಖಂಗೊಳಿಸಿದ್ದಾರೆ.

ಪ್ರಕರಣದ ದೃಶ್ಯಾವಳಿ ಬಾರ್ ಮುಂಭಾಗದ ಅಳವಡಿಸಿದ್ದ ಸಿಸಿಟಿವಿ ಕ್ಯಾಮೆರಾದಲ್ಲಿ ದಾಖಲಾಗಿದ್ದು ಸಾಮಾಜಿಕ ಜಾಲತಾಣಗಳಲ್ಲಿ ವೈರಲಾಗಿದೆ. ಘಟನಾ ಸ್ಥಳಕ್ಕೆ ಬೈಂದೂರು ಪೊಲೀಸರು ಆಗಮಿಸುತ್ತಿದ್ದಂತೆ ಪುಡಿ ರೌಡಿಗಳು ಅಲ್ಲಿಂದ ಪರಾರಿಯಾಗಿದ್ದಾರೆ ಪ್ರಕರಣ ಬೈಂದೂರು ಠಾಣೆಯಲ್ಲಿ ದಾಖಲಾಗಿದೆ.

RELATED ARTICLES

LEAVE A REPLY

Please enter your comment!
Please enter your name here

Most Popular

Recent Comments