ಪುತ್ತೂರು : ಕಬಕಬೈಲಿನಲ್ಲಿ ನದಿಯಂತಾದ ಕೆಸರುಮಯ ರಸ್ತೆ

ಪುತ್ತೂರು : ಮಳೆಗಾಲ ಬಂತಂದ್ರೆ ಸಾಕು ರಸ್ತೆಗಳೆಲ್ಲ ಹದಗೆಡೋದನ್ನ ನೋಡ್ಬೋದು ಆದ್ರೆ ಈ ಊರಲ್ಲಿ ಮಳೆ ಬಂದ್ರೂ ಅದೇ ಕಥೆ ಮಳೆ ಬರದಿದ್ರೂ ಅದೇ ವ್ಯಥೆ… ಹೌದು..ಕಬಕ ಗ್ರಾಮದ ಕಬಕಬೈಲು ಎಂಬಲ್ಲಿ 10ವರ್ಷದಿಂದ ಇದೇ ಸಮಸ್ಯೆ…ಮಣ್ಣಿನ ರಸ್ತೆಯಿದ್ದು ಮಳೆಯಿದ್ದಾಗಂತು ಹೇಳೋದೆ ಬೇಡ ಇಡೀ ರಸ್ತೆ ಕೆಸರುಮಯ.. ವಾಹನ ಸವಾರರಂತೂ ಎದ್ದೂ ಬಿದ್ದು ಹೋಗೋ ಪರಿಸ್ಥಿತಿ. ಅದೆಷ್ಟೋ ಬಾರಿ ವಾಹನಗಳು ಕೆಸರಿಗೆ ಜಾರಿದ ಉದಾಹರಣೆಗಳು ಕೂಡಾ ಇದೆ.

ಇನ್ನು ನಿತ್ಯ ಪಾದಚಾರಿಗಳ ಪರಿ ಕೇಳೋದೇ ಬೇಡ.. ಶಾಲಾ ಮಕ್ಕಳಿಂದ ಹಿಡಿದು ದೊಡ್ಡವರವರೆಗು ಈ ಕೆಸರು ರಸ್ತೆಯಲ್ಲಿ ಸಂಚರಿಸಿದ್ರೆ ಕಾಲು ಜಾರಿ ಬಿದ್ದು ಏಟು ಮಾಡಿಕೊಂಡಿದ್ದೆ ಹೆಚ್ಚು.. ಈ ಬಗ್ಗೆ ಪಂಚಾಯತ್ ಆಗಲಿ ಸಂಬಂದ ಪಟ್ಟ ಅಧಿಕಾರಿಗಳಾಗಿ ನಿರ್ಲಕ್ಷ್ಯ ವಹಿಸಿರೋದು ನಿಜಕ್ಕೂ ವಿಷಾಧನೀಯ..ಇನ್ನಾದ್ರು ಈ ಬಗ್ಗೆ ಗಮನ ಹರಿಸ್ತಾರಾ ಅನ್ನೊದನ್ನ ಕಾದು ನೋಡಬೇಕಿದೆ.
