ಕಾಲು ಸಂಕದಿಂದ ಬಿದ್ದು ಸನ್ನಿದಿ ನೀರುಪಾಲು

ಬೈಂದೂರು: ಶಾಲೆ ಬಿಟ್ಟು ಮನೆಗೆ ಬರುತ್ತಿದ್ದ ವೇಳೆ ಕಾಲುಸಂಕ ದಾಟುವಾಗ ಆಯತಪ್ಪಿ 2ನೇ ತರಗತಿಯ ವಿದ್ಯಾರ್ಥಿನಿ ನೀರುಪಾಲಾದ ಘಟನೆ ಕಾಲ್ತೋಡು ಗ್ರಾಮದಲ್ಲಿ ನಡೆದಿದೆ. ಬೊಳಂಬಳ್ಳಿಯ ಮಕ್ಕಿಮನೆ ಮನೆ ಪ್ರದೀಪ್ ಪೂಜಾರಿ ಹಾಗೂ ಸುಮಿತ್ರಾ ಅವರ ಪುತ್ರಿ 7ವರ್ಷ ನೀರು ಪಾಲಾಗಿದ್ದು ಹುಡುಕಾಟ ತೀವ್ರಗೊಂಡಿದೆ.ಸ.ಹಿ.ಪ್ರಾ ಶಾಲೆ ಚಪ್ಪರಿಕೆಯಲ್ಲಿ 2ನೇ ತರಗತಿಯಲ್ಲಿ ಓದುತ್ತಿರುವ ಸನ್ನಿಧಿ ಸೋಮವಾರ ಸಂಜೆ ಶಾಲೆಬಿಟ್ಟು ಮನೆಗೆ ಬರುವಾಗ ಬೀಜಮಕ್ಕಿ ಎಂಬಲ್ಲಿ ಕಾಲು ಸಂಕವಿದ್ದು ಈ ಕಾಲು ಸಂಕ ದಾಟುವಾಗ ಮಗು ಆಯಾತಪ್ಪಿ ಹಳ್ಳಕ್ಕೆ ಬಿದ್ದಿದೆ. ಕೂಡಲೇ ವಿಷಯ ತಿಳಿದು ಸಾರ್ವಜನಿಕರು ಹುಡುಕಾಟ ಆರಂಭಿಸಿದ್ದಾರೆ

. ಈ ಹಳ್ಳ ಬೊಳಂಬಳ್ಳಿ ನದಿಗೆ ಸೇರಿದ್ದು ನೀರಿನ ರಭಸಕ್ಕೆ ಜೋರಾಗಿದ್ದು ನೀರಿನ ಸೆಳೆತಕ್ಕೆ ಕೊಚ್ಚಿಕೊಂಡು ಹೋಗುತ್ತಿರುವ ಸಾಧ್ಯತೆ ಶೋಧ ಕಾರ್ಯ ಭರದಿಂದ ಸಾಗಿದೆ ಸ್ಥಳಕ್ಕೆ ಬೈಂದೂರು ಶಾಸಕರಾದ ಬಿಎಂ ಸುಕುಮಾರ್ ಶೆಟ್ಟಿ ಜಿಲ್ಲಾ ಪಂಚಾಯತ್ ಮಾಜಿ ಅಧ್ಯಕ್ಷರಾದ ರಾಜು ಪೂಜಾರಿ, ತಾಶೀಲ್ದಾರ್ ಕಿರಣ್ ಗೋರಯ್ಯ ಬೈಂದೂರು ಪಿಎಸ್‍ಐ ಪವನ್ ನಾಯಕ್ ಗ್ರಾಮ ಪಂಚಾಯತ್ ಮಾಜಿ ಅಧ್ಯಕ್ಷ ಅಪ್ಪಣ್ಣ ಶೆಟ್ಟಿ ಮೊದಲಾದವರು ಭೇಟಿ ನೀಡಿದ್ದಾರೆ

Related Posts

Leave a Reply

Your email address will not be published.