ಸ್ವಾತಂತ್ರೊoತ್ಸವ ಆಚರಣೆ: ಕಡಬ ತಹಸೀಲ್ದಾರ್ ಕಛೇರಿಯಲ್ಲಿ ಪೂರ್ವಭಾವಿ ಸಭೆ
ಕಡಬ ತಾಲೂಕು ರಾಷ್ಟಿಯ ಹಬ್ಬಗಳ ಆಚರಣ ಸಮಿತಿಯ ನೇತೃತ್ವದಲ್ಲಿ ೭೫ ನೇ ಸ್ವಾತಂತ್ರೊö್ಯತ್ಸವವನ್ನು ವಿವಿಧ ಸಂಘ ಸಂಸ್ಥೆಗಳ ಸಹಯೋಗದಲ್ಲಿ ಅದ್ಧೂರಿಯಾಗಿ ಆಚರಿಸುವ ನಿಟ್ಟಿನಲ್ಲಿ ಕಡಬದ ತಹಸೀಲ್ದಾರ್ ಕಛೇರಿಯಲ್ಲಿ ಪೂರ್ವಭಾವಿ ಸಭೆ ಸೋಮವಾರ ನಡೆಯಿತು.
ರಾಷ್ಟಿಯ ಹಬ್ಬಗಳ ಆಚರಣಾ ಸಮಿತಿಯ ಅಧ್ಯಕ್ಷ ತಹಸೀಲ್ದಾರ್ ಅನಂತಶoಕರ್ ಸಭೆಯ ಅಧ್ಯಕ್ಷತೆವಹಿಸಿದ್ದರು. ಮುಖ್ಯವಾಗಿ ಸ್ವಾತಂತ್ರೊö್ಯತ್ಸವದ ಹಿಂದಿನ ಮೂರು ದಿನಗಳ ಕಾಲ ಪ್ರತಿಯೊಬ್ಬರ ಮನೆಯಲ್ಲಿ ಹಾಗೂ ಅಂಗಡಿಮುoಗಟ್ಟುಗಳಲ್ಲಿ ರಾಷ್ಟçಧ್ವಜ ಹಾರಾಟ ಕಡ್ಡಾಯವಾಗಿದೆ ಎಂದು ತಹಸೀಲ್ದಾರ್ ಸೂಚಿಸಿದರು. ಪ್ರೋಟೋಕಾಲ್ ಪ್ರಕಾರ ಕ್ಷೇತ್ರ ಶಾಸಕರಾದ ಸಚಿವ ಎಸ್.ಅಂಗಾರ ಸಭೆಯ ಅಧ್ಯಕ್ಷತೆವಹಿಸಲಿದ್ದಾರೆ. ಈಗ ತಾ,ಪಂ, ಪಟ್ಟಣ ಪಂಚಾಯಿತಿ, ಹಾಗೂ ಜಿಲ್ಲಾ ಪಂಚಾಯಿತಿ ಆಡಳಿತ ಮಂಡಳಿ ಅಸ್ಥಿತ್ವ ಇಲ್ಲದ ಕಾರಣ ಕಡಬ ತಾಲೂಕು ಪಂಚಾಯಿತಿ ಆಡಳಿತಾಧಿಕಾರಿ ಸೀತಾ ಅವರ ನೇತೃತ್ವದಲ್ಲಿ ಕಾರ್ಯಕ್ರಮ ನಡೆಯಲಿದೆ. ಬೆಳಿಗ್ಗೆ ೯.೦೦ ಗಂಟೆಗೆ ಪೋಲೀಸರ ಗೌರವ ವಂದನೆಯೊoದಿಗೆ ಧ್ವಜಾರೋಹಣ ನಡೆದು ಬಳಿಕ ಮೆರವಣಿಗೆಯೊಂದಿಗೆ ಸಾಗಿ ಕಡಬ ಅಂಬೇಡ್ಕರ್ ಭವನದಲ್ಲಿ ನಡೆಯುವ ಸಮಾರಂಭದಲ್ಲಿ ತಾಲೂಕಿನ ಎಸ್‌ಎಸ್‌ಎಲ್‌ಸಿ ಹಾಗೂ ಪಿಯುಸಿ ವಿದ್ಯಾರ್ಥಿಗಳನ್ನು ಹಾಗೂ ರಾಜ್ಯ ಮಟ್ಟದ ಕಬಡ್ಡಿ ಆಟಗಾರ ಅಫ್ರಿದಿ ಅವರುಗಳನ್ನು ಸನ್ಮಾನಿಸಿ ಗೌರವಿಸಲಾಗುವುದು ಎನ್ನುವ ನಿರ್ಧಾರಗಳನ್ನು ಸಭೆಯಲ್ಲಿ ತೆಗೆದುಕೊಳ್ಳಲಾಯಿತು.
ಸಭೆಯಲ್ಲಿ ಕಡಬ ಪಟ್ಟಣ ಪಂಚಾಯಿತಿ ಮುಖ್ಯಾಧಿಕಾರಿ ಪಕೀರ ಮೂಲ್ಯ, ಕಡಬ ತಾಲೂಕು ಪಂಚಾಯಿತಿ ಮುಖ್ಯಕಾರ್ಯನಿರ್ವಹಣಾಧಿಕಾರಿ ನವೀನ್ ಭಂಢಾರಿ, ಸಹಾಯಕ ನಿರ್ದೆಶಕ ಚೆನ್ನಪ್ಪ ಗೌಡ ಕಜೆಮೂಲೆ, ಕಡಬ ಸಮುದಾಯ ಆರೋಗ್ಯ ಕೇಂದ್ರದ ವೈದ್ಯಾಧಿಕಾರಿ ಡಾ|ಸುಚಿತ್ರಾ ರಾವ್, ಕಡಬ ತಾಲೂಕು ಪಶುವೈದ್ಯಾಧಿಕಾರಿ ಡಾ|ಅಜಿತ್ , ಕಡಬ ತಾಲೂಕು ಕನ್ನಡ ಸಾಹಿತ್ಯಪರಿಷತ್ ಅಧ್ಯಕ್ಷ ಸೇಸಪ್ಪ ರೈ ರಾಮಕುಂಜ, ನಿಕಟಪೂರ್ವಾಧ್ಯಕ್ಷ ಜನಾರ್ಧನ ಗೌಡ ಪಣೆಮಜಲು, ಕಡಬ ಕಂದಾಯ ನಿರೀಕ್ಷಕ ಅವಿನ್ ರಂಗತ್‌ಮಲೆ, ಕಡಬ ಅಟೋಚಾಲಕ ಮಾಲಕರ ಸಂಘದ ಅಧ್ಯಕ್ಷ ಚೆನ್ನಪ್ಪ ಗೌಡ , ಕೃಷಿ ಇಲಾಖೆಯ ಸೀಮಾ, ಮೆಸ್ಕಾಂ ಜೆಇ ಸತ್ಯನಾರಾಯಣ, ಕಡಬ ಠಾಣಾ ಎ.ಎಸ್‌ಐ ಶಿವರಾಮ್, ಕಡಬ ಲಯನ್ಸ್ ಅಧ್ಯಕ್ಷ ಜೋಸ್ ಕೆ .ಜೆ, ಮಧುರ ಟೂರಿಸ್ಟ್ ಚಾಲಕ ಮಾಲಕರ ಸಂಘದ ಪ್ರಮುಖ ವಿಶ್ವನಾಥ ಗೌಡ ಮತ್ತಿತರರು ಸಲಹೆ ಸೂಚನೆ ನೀಡಿದರು. ಕಡಬ ಉಪತಹಸೀಲ್ದಾರ್ ಮನೋಹರ ಕೆ.ಟಿ ಸ್ವಾಗತಿಸಿದರು. ಉಪತಹಸೀಲ್ದಾರ್ ಗೋಪಾಲ ಕೆ ವಂದಿಸಿದರು.