ಬಂಡೀಪುರದ ಬಫರ್ ವಲಯದಲ್ಲಿ ಹುಲಿಗಳ ಉಪಟಳ: ಹುಲಿ ಪತ್ತೆಗೆ ಕ್ಯಾಮೆರಾ ಅಳವಡಿಕೆ

ಗುಂಡ್ಲುಪೇಟೆ ತಾಲೋಕಿನ ಬಂಡೀಪುರ ಹುಲಿ ಸಂರಕ್ಷಿತ ಪ್ರದೇಶದ ಬಫರ್ ವಲಯದ ತೆರಕಣಾಂಬಿ ಸೆಕ್ಷನ್ 4ರ ಕಾಡಂಚಿನ ಗ್ರಾಮಗಳ ಸರಹದ್ದಿನ ದೇಪಾಪುರದ ಸುತ್ತಮುತ್ತಲಿನ ಗ್ರಾಮಗಳಲ್ಲಿ ಹುಲಿ ಉಪಟಳ ನೀಡುತ್ತಿದ್ದು ಜಾನುವಾರುಗಳ ಮೇಲೆ ದಾಳಿ ಮಾಡುತಿದೆ ಎಂದು ಗ್ರಾಮಸ್ಥರು ಮತ್ತು ಜನಪ್ರತಿನಿಧಿಗಳ ದೂರು ನೀಡಿದ ಹಿನ್ನೆಲೆಯಲ್ಲಿ ಬಂಡೀಪುರ ಹುಲಿ ಯೋಜನೆಯ ಅರಣ್ಯ ಸಂರಕ್ಷಣಧಿಕಾರಿ ಮತ್ತು ನಿರ್ದೇಶಕರಾದ ಪಿ.ರಮೇಶ್ ಕುಮಾರ್ ಮತ್ತು ಸಿಬ್ಬಂದಿಗಳು ಸ್ಥಳಕ್ಕೆ ಭೇಟಿ ನೀಡಿದರು.

ಮುಖ್ಯ ಅರಣ್ಯಸಂರಕ್ಷಾಣಧಿಕಾರಿ ಪಿ.ರಮೇಶ್ ಕುಮಾರ್ ,ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ ರವೀಂದ್ರ ಅವರ ಮಾರ್ಗದರ್ಶನದಲ್ಲಿ ಗುಂಡ್ಲುಪೇಟೆ ಬಫರ್ ಜೋನ್ ವಲಯ ಅರಣ್ಯಧಿಕಾರಿ ಹೆಚ್.ಎಂ.ಮಂಜುನಾಥ್ ಉಪವಲಯ ಅರಣ್ಯದಿಕಾರಿ ಸಿ.ಎನ್ ಮುದ್ದುರಾಜ್ ನೇತ್ರತ್ವದಲ್ಲಿ ಇಲಾಖೆಯ ಸಿಬ್ಬಂದಿಗಳು ಸ್ಥಳಕ್ಕೆ ತೆರಳಿ ಕಾಡಂಚಿನ ಗ್ರಾಮಗಳ ಸರಹದ್ದಿನಲ್ಲಿ ಹುಲಿ ಸಂಚಾರವಿದೆ ಎನ್ನುವ ಪ್ರದೇಶಗಳಲ್ಲಿ ಎರಡು ಬೋನುಗಳನ್ನು ಇರಿಸಿ ಕ್ಯಾಮರಾಗಳನ್ನು ಅಳವಡಿಸಿಲಾಗಿದ್ದು ಗುಂಡ್ಲುಪೇಟೆ ಬಫರ್ ಜೋನ್ ವಲಯದ ಸಿಬ್ಬಂದಿಗಳು ವಿಶೇಷ ಹುಲಿ ಸಂರಕ್ಷಣಾ ದಳದ ಸಿಬ್ಬಂದಿಗಳು ಹುಲಿ ಪತ್ತೆಗೆ ಕಾರ್ಯಚರಣೆ ಕೈಗೊಂಡಿದ್ದಾರೆ.

Related Posts

Leave a Reply

Your email address will not be published.