ವಕೀಲರ ಸಂಘ (ರಿ ) ಬಂಟ್ವಾಳ : ವಿಶ್ವ ಭೂ ದಿನಾಚರಣೆ

ವಕೀಲರ ಸಂಘ (ರಿ ) ಬಂಟ್ವಾಳ ಮತ್ತು ತಾಲೂಕು ಕಾನೂನು ಸೇವೆಗಳ ಸಮಿತಿ ಬಂಟ್ವಾಳ ಇದರ ಜಂಟಿ ಆಶ್ರಯದಲ್ಲಿ ದಿನಾಂಕ 28/4/2023 ರಂದು ಮದ್ಯಾಹ್ನ 12.00 ಗಂಟೆಗೆ ವಕೀಲರ ಸಂಘ (ರಿ ) ಬಂಟ್ವಾಳದಲ್ಲಿ ವಿಶ್ವ ಭೂ ದಿನಾಚರಣೆಯನ್ನು ಆಚರಿಸಲಾಯಿತು.ಕಾರ್ಯಕ್ರಮವನ್ನು ಪ್ರಧಾನ ಸಿವಿಲ್ ನ್ಯಾಯಾಧೀಷರು ಹಾಗೂ ತಾಲೂಕು ಕಾನೂನು ಸೇವೆಗಳ ಸಮಿತಿ ಬಂಟ್ವಾಳದ ಕಾರ್ಯದರ್ಶಿ ಶ್ರೀ ಚಂದ್ರಶೇಖರ ತಳವಾರ ಇವರು ಸಸಿಗೆ ನೀರು ಹಾಕುವುದರ ಮುಕಾಂತರ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ಕಾರ್ಯಕ್ರಮದಲ್ಲಿ ಸಂಪನ್ಮೂಲ ವ್ಯಕ್ತಿಯಾಗಿ ಶ್ರೀ ಶಿವಪ್ರಕಾಶ್ ಜೈನ್ರವರು ಪ್ರಕೃತಿಯ ರಕ್ಷಣೆಗೆ ನಾವು ಯಾವ ಮುಂಜಾಗ್ರತೆ ಮಾಡಬೇಕು ಮತ್ತು ಪಕೃತಿಯ ರಕ್ಷಣೆಗೆ ನಮ್ಮ ಕರ್ತವ್ಯವೇನು ಎಂಬ ಬಗ್ಗೆ ವಿವರವಾದ ಮಾಹಿತಿ ನೀಡಿದರು.ಕಾರ್ಯಕ್ರಮದಲ್ಲಿ ಸರಕಾರಿ ಅಭಿಯೋಜಕರು ಹರಿಣಿ ಅವರು ಉಪಸ್ಥಿತರಿದ್ದರು ವಕೀಲರ ಸಂಘದ ಅಧ್ಯಕ್ಷರಾದ ಶ್ರೀ ರಿಚರ್ಡ್ ಕೋಸ್ತ ಎಂ ಅವರು ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದರು. ವಕೀಲರ ಸಂಘದ ಹಿರಿಯ ಕಿರಿಯ ವಕೀಲ ಮಿತ್ರರು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು

Related Posts

Leave a Reply

Your email address will not be published.