ರಾಜ್ಯದಲ್ಲಿ ಸೌಹಾರ್ದತೆಯ ವಾತಾವರಣ ಮತ್ತೆ ಸೃಷ್ಟಿಯಾಗಲಿದೆ : ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಪದ್ಮರಾಜ್ ಆರ್.

ಬಂಟ್ವಾಳ : ಕಾಂಗ್ರೆಸ್ ಪಕ್ಷ ಅಧಿಕಾರದಲ್ಲಿದ್ದಾಗ ಇದ್ದ ಸೌಹಾರ್ದತೆಯ ವಾತವರಣ ಮತ್ತೆ ರಾಜ್ಯದಲ್ಲಿ ಸೃಷ್ಟಿಯಾಗಲಿದೆ, ಯಾರೂ ಉತ್ತಮ ಆಡಳಿತ ನೀಡಿದ್ದಾರೆ, ಯಾರೂ ಪೆÇಳ್ಳು ಭರವಸೆಗಳನ್ನು ನೀಡಿ ಯಾಮಾರಿಸಿದ್ದಾರೆ ಎನ್ನುವ ತಿಳಿವಳಿಕೆ ಜನರಿಗೆ ಬಂದಿದೆ. ಆದ್ದರಿಂದ ಈ ಭಾರಿ ಕಾಂಗ್ರೆಸ್ ಅಧಿಕಾರಕ್ಕೆ ಬರುವುದರಲ್ಲಿ ಸಂಶಯ ಇಲ್ಲ ಎಂದು ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಪದ್ಮರಾಜ್ ಆರ್. ಹೇಳಿದರು.

ಬಂಟ್ವಾಳ ವಿಧಾನಸಭಾ ಕ್ಷೇತ್ರದ ಕಾಂಗ್ರೆಸ್ ಚುನಾವಣಾ ಕಚೇರಿಯಲ್ಲಿ ಕರೆದ ಸುದ್ದಿಗೋಷ್ಟಿಯಲ್ಲಿ ಅವರು ಮಾತನಾಡಿ ಜನರನ್ನು ಭಾವನಾತ್ಮಕವಾಗಿ ಕುಕೃತ್ಯಕ್ಕೆ ಪ್ರೇರೆಪಿಸುವಂತಹ, ಜನರು ಸಾಮರಾಸ್ಯದಲ್ಲಿ ಬದುಕುವುದಕ್ಕೆ ತೊಡಕಾಗುವಂತಹ ಭಯದ ವಾತವರಣ ಇದೆ. ಭಾರತ ವಿಶ್ವಗುರು ಆಗಬೇಕಾದರೆ ದೇಶದಲ್ಲಿರುವ ಎಲ್ಲಾ ಜನರು ಸಹೋದರತ್ವದಲ್ಲಿ ಬದುಕುವುದು ಅಗತ್ಯ, ಆದರೆ ದೇಶದ ಪ್ರಸ್ತುತ ಪರಿಸ್ಥಿತಿ ತುಂಬಾ ವ್ಯತಿರಿಕ್ತವಾಗಿದೆ ಎಂದರು.ಭ್ರಷ್ಟಾಚಾರ ರಹಿತ ಆಡಳಿತ ನೀಡಿ ಬಡವರಿಗಾಗಿ ಕಾಂಗ್ರೆಸ್ ಗ್ಯಾರಂಟಿ ಭರವಸೆ ನೀಡುತ್ತಿದೆ,
ಸಿದ್ಧರಾಮಯ್ಯ ಮುಖ್ಯಮಂತ್ರಿಯಾಗಿದ್ದಾಗ ಶೇ.95 ಭರವಸೆಗಳು ಈಡೇರಿದೆ, ಕಾಂಗ್ರೆಸ್ ಸರಕಾರ ಅಧಿಕಾರಕ್ಕೆ ಬಂದ ಕೂಡಲೇ ಪ್ರಥಮ ಕ್ಯಾಬಿನೆಟ್ ಮೀಟಿಂಗಲ್ಲಿಯೇ ಜನರಿಗೆ ನೀಡಿದ ಗ್ಯಾರಂಟಿಗಳಿಗೆ ಅನುಮೋದನೆ ಸಿಗಲಿದೆ ಎಂದರು. ಪ್ರಸ್ತುತ ಜನರ ಒಲವು ಕಾಂಗ್ರೆಸ್ ಪಕ್ಷದತ್ತ ಇದೆ. ರಮಾನಾಥ ರೈ ಸಚಿವರಾಗಿ ಅನುಭವ ಹೊಂದಿದ ಜನನಾಯಕ, ಹಲವಾರು ಅಭಿವೃದ್ಧಿ ಕಾರ್ಯಗಳನ್ನು ಈ ಕ್ಷೇತ್ರದಲ್ಲಿ ಮಾಡಿ ತೋರಿಸಿದ್ದಾರೆ, ಮುಂದೆಯೂ ಮಾಡಿ ತೋರಿಸುತ್ತಾರೆ, ಅವರು ಈ ಭಾರಿ ಪ್ರಚಂಡ ಬಹುಮತದಲ್ಲಿ ಗೆದ್ದು ಬರುವುದಾಗಿ ವಿಶ್ವಾಸ ವ್ಯಕ್ತಪಡಿಸಿದರು.

ಸುದ್ದಿಗೋಷ್ಟಿಯಲ್ಲಿ ಕೆಪಿಸಿಸ ಸದಸದ್ಯ ಪಿಯೂಸ್ ಎಲ್. ರೋಡ್ರಿಗಸ್, ಪಕ್ಷದ ಪ್ರಮುಖರಾದ ಸುದೀಪ್ ಕುಮಾರ್ ಶೆಟ್ಟಿ, ಕೆ.ಸಂಜೀವ ಪೂಜಾರಿ, ಜಯಂತಿ ವಿ. ಪೂಜಾರಿ, ಉಮೇಶ್ ಸಪಲ್ಯ, ಸುಭಾಶ್ಚಂದ್ರ ಶೆಟ್ಟಿ ಕೊಳ್ನಾಡು, ಮಾಯಲಪ್ಪ ಸಾಲ್ಯಾನ್, ವಾಸು ಪೂಜಾರಿ, ಉಮೇಶ್‍ಕುಲಾಲ್ ನಾವೂರು, ಜೋಸ್ಪೀನ್ ಡಿಸೋಜಾ, ರಿಯಾಝ್, ಹುಸೈನ್, ತಿಮ್ಮಪ್ಪ ಪೂಜಾರಿ ಉಪಸ್ಥಿತರಿದ್ದರು.

Related Posts

Leave a Reply

Your email address will not be published.