ಬಂಟ್ವಾಳ : ಪೆಟ್ರೋಲ್, ಡೀಸೆಲ್ ಬೆಲೆ ಏರಿಕೆ ಖಂಡಿಸಿ ಬಿಜೆಪಿ ಮಂಡಲ ವತಿಯಿಂದ ಪ್ರತಿಭಟನೆ
ಬಂಟ್ವಾಳ: ಕರ್ನಾಟಕದಲ್ಲಿ ಪೆಟ್ರೋಲ್ ಡಿಸೇಲ್ ಬೆಲೆ ಏರಿಕೆ ಮಾಡಿದ ಕಾಂಗ್ರೆಸ್ ಸರಕಾರದ ವಿರುದ್ಧ ಪ್ರತಿಭಟನೆ ಹಾಗೂ ರಾಷ್ಡ್ರೀಯ ಹೆದ್ದಾರಿ ತಡೆ ಬಿಜೆಪಿ ಬಂಟ್ವಾಳ ಮಂಡಲದ ವತಿಯಿಂದ ಬಿ.ಸಿ.ರೋಡಿನಲ್ಲಿ ನಡೆಯಿತು.
ಶಾಸಕ ರಾಜೇಶ್ ನಾಯ್ಕ್ ಪ್ರತಿಭಟಮಕಾರರನ್ನು ಉದ್ದೇಶಿಸಿ ಮಾತನಾಡಿ ದೇಶದ ಆರ್ಥಿಕ ವ್ಯವಸ್ಥೆಯಲ್ಲಿ ಹಿಂದಿನ ಸರಕಾರದ ಅವಧಿಯಲ್ಲಿ ಕರ್ನಾಟಕ ಮೊದಲ ಸ್ಥಾನದಲ್ಲಿತ್ತು. ಈಗ ನಾಲ್ಕನೇ ಸ್ಥಾನಕ್ಕೆ ಹಿಂದೆ ಸರಿದಿದೆ. ಕಾಂಗ್ರೆಸ್ ಸರಕಾರ ಗ್ಯಾರಂಟಿ ನೆಪದಲ್ಲಿ ಹಣವನ್ನು ಡೈವರ್ಟ್ ಮಾಡುತ್ತಿದ್ದು ಡೈವಾರ್ಟ್ ಆದ ಹಣ ಎಲ್ಲಿ ಹೋಗುತ್ತಿದೆ ಎನ್ನುವುದೇ ಗೊತ್ತಾಗುತ್ತಿಲ್ಲ. ಅಭಿವೃದ್ದಿಗೆ ಯಾವುದೇ ಅನುದಾನ ಸಿಗುತ್ತಿಲ್ಲ ಎಂದು ಆರೋಪಿಸಿದರು.
ಕಿಯೋನಿಕ್ಸ್ ಮಾಜಿ ಅಧ್ಯಕ್ಷ ಹರಿಕೃಷ್ಣ ಬಂಟ್ವಾಳ ಮಾತನಾಡಿ ಬಿಟ್ಟಿ ಭಾಗ್ಯ ಕಾಂಗ್ರೆಸ್ ನಿಂದ ಹುಟ್ಟಿದ ತಳಿ. ಬಿಟ್ಟಿ ಭಾಗ್ಯದಿಂದ ಗರೀಭೀ ಹಠಾವೂ ಆಗಿಲ್ಲ ಗರೀಭಿ ಬಚಾವೋ ಆಗಿದೆ ಎಂದರು.
ಬಿಜೆಪಿ ಮಂಡಲ ಅಧ್ಯಕ್ಷ ಚೆನ್ನಪ್ಪ ಕೋಟ್ಯಾನ್, ಮಾಜಿ ಶಾಸಕ ಕೆ.ಪದ್ಮನಾಭ ಕೊಟ್ಟಾರಿ ಪಕ್ಷ ಪ್ರಮುಖರಾದ ಸುಲೋಚನಾ ಭಟ್, ಪೂಜಾ ಪೈ, ರಾಮದಾಸ ಬಂಟ್ವಾಳ, ದೇವಪ್ಪ ಪೂಜಾರಿ, ದೇವದಾಸ ಶೆಟ್ಟಿ, ಮಾಧವ ಮಾವೆ, ವಿಕಾಸ್ ಪುತ್ತೂರು, ಪ್ರೇಮನಂದ ಶೆಟ್ಟಿ, ರವೀಶ್ ಶೆಟ್ಟಿ, ಡೊಂಬಯ ಅರಳ, ಗೋವಿಂದ ಪ್ರಭು, , ಪುರುಷೋತ್ತಮ ಶೆಟ್ಟಿ, ಪ್ರಕಾಶ್ ಅಂಚನ್, ಲಖಿತಾ ಶೆಟ್ಟಿ ಮತ್ತಿತರರು ಭಾಗವಹಿಸಿದ್ದರು.