ಅಡಿಕೆಗೆ ಭವಿಷ್ಯವಿಲ್ಲ ಗೃಹ ಸಚಿವರ ಹೇಳಿಕೆಗೆ ಖಂಡನೆ : ಮಾಜಿ ಶಾಸಕ ವಸಂತ ಬಂಗೇರಾ ವಾಗ್ದಾಳಿ

ಅಡಿಕೆಯ ಬಗ್ಗೆ ಹಗುರವಾಗಿ ಮಾತನಾಡಿದ ಗೃಹ ಸಚಿವರ ವಿರುದ್ಧ ಗರಂ ಆದ ಬೆಳ್ತಂಗಡಿಯ ಮಾಜಿ ಶಾಸಕ ವಸಂತ ಬಂಗೇರ ಅವರು ಅವರ ಮಾತು ಖಂಡನಾರ್ಹ ಎಂದು ಹೇಳಿದರು. ಅವರು ಬೆಳ್ತಂಗಡಿಯಲ್ಲಿ ಮಾಧ್ಯಮದ ಜೊತೆ ಮಾತನಾಡಿ ಗೃಹ ಸಚಿವರು ಆ ರೀತಿ ಹೇಳಬಾರದಿತ್ತು ಅಡಿಕೆ ಬೆಳೆಗಾರರ ಬಗ್ಗೆ ಕೀಳಾಗಿ ಮಾತನಾಡಬಾರದು ಅಡಿಕೆ ಬೆಳೆಗಾರರು ಹೆದರುವಂಥ ಅವಶ್ಯಕತೆ ಇಲ್ಲ ಅಡಿಕೆಗೆ ಬೆಲೆ ಯಾವತ್ತೂ ಕಡಿಮೆಯಾಗುವುದಿಲ್ಲ ಎಂದು ಅಡಿಕೆ ಬೆಳೆಗಾರರಿಗೆ ಧೈರ್ಯ ಹೇಳಿದರು ಈ ಸಂದರ್ಭದಲ್ಲಿ ಮಾಜಿ ಸಚಿವ ಗಂಗಾಧರ ಗೌಡ ರಂಜನ್ ಜಿ ಗೌಡ ಶೈಲೇಶ್ ಕುಮಾರ್ ಅಶ್ರಫ್ ನೆರಿಯ ಹಾಗೂ ಇತರರು ಉಪಸ್ಥಿತರಿದ್ದರು
