“ಡ್ರೈಫ್ ಡ್ರೈಫ್ ಆಟೋ“ ಸೇವೆ: ಅನ್ಯ ಕ್ಯಾಬ್ ಗಳಂತೆ ಚಾಲಕರಿಂದ ಕಮೀಷನ್ ಪಡೆಯುವುದಿಲ್ಲ, – ಸಂಸ್ಥೆ ಸ್ಪಷ್ಟನೆ

ಬೆಂಗಳೂರು, ಡಿ, 8; ಕ್ಯಾಬ್ ಸಾಗಾಣೆ ವ್ಯವಸ್ಥೆಯಲ್ಲಿ ಕ್ರಾಂತಿಕಾರ ಹೆಜ್ಜೆ ಇಟ್ಟಿರುವ “ಡ್ರೈಫ್ ಡ್ರೈಫ್ ಆಟೋ “ ಸೇವೆ ಚಾಲಕರಿಗೆ ವರದಾನವಾಗಿ ಪರಿಣಮಿಸಿದ್ದು, ಅವರಿಂದ ಯಾವುದೇ ರೀತಿಯ ಕಮಿಷನ್ ಪಡೆಯುವುದಿಲ್ಲ ಎಂದು ಪ್ರಕಟಿಸಿದೆ. ಬೇರೆ ಕ್ಯಾಬ್ ಸೇವೆಗಳಿಂದ ಬಸವಳಿದಿರುವ ಚಾಲಕರು ಈ ತೀರ್ಮಾನದಿಂದ ನೆಮ್ಮದಿಯ ನಿಟ್ಟುಸಿರು ಬಿಡುವಂತಾಗಿದೆ.

ಬ್ಲಾಕ್ ಚೈನ್ ತಂತ್ರಜ್ಞಾನ ಆಧಾರಿತ ಆಫ್ ಅನ್ನು ಇದು ಒಳಗೊಂಡಿದ್ದು, ಚಾಲಕರಿಂದ ಚಂದಾ ಹಣವನ್ನು ಮಾತ್ರ ಪಡೆಯುತ್ತೇವೆ. ಚಾಲಕ ಸ್ನೇಹಿಯಾಗಿ“ಡ್ರೈಫ್ ಡ್ರೈಫ್ ಆಟೋ “ ಕಾರ್ಯನಿರ್ವಹಿಸಲಿದೆ ಎಂದು ಸಂಸ್ಥೆ ತಿಳಿಸಿದೆ.

ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿದ “ಡ್ರೈಫ್ ಡ್ರೈಫ್ ಆಟೋ “ ನ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಹಾಗೂ ಸಹ ಸಂಸ್ಥಾಪಕ ಫಿರ್ದೋಷ್ ಶೇಖ್, ಚಾಲಕರಿಂದ ನಾವು ಯಾವುದೇ ರೀತಿಯ ಹೆಚ್ಚುವರಿ ಶುಲ್ಕ ಪಡೆಯುತ್ತಿಲ್ಲ. ಆರ್.ಟಿ.ಒ ನಿಗದಿಪಡಿಸಿರುವ ಶುಲ್ಕವನ್ನು ಮಾತ್ರ ಪಡೆಯುತ್ತೇವೆ. ನಮ್ಮ ಸಂಪೂರ್ಣ ಕಾರ್ಯಾಚರಣೆಯಲ್ಲಿ ಪಾರದರ್ಶಕತೆಗೆ ಒತ್ತು ನೀಡುತ್ತೇವೆ ಎಂದರು.

ಪ್ರಯಾಣಿಕರಿಗೂ ಸಹ “ಡ್ರೈಫ್ ಡ್ರೈಫ್ ಆಟೋ “ ನಿಂದ ಉತ್ತಮ ಸೇವೆ ದೊರೆಯಲಿದೆ. ಚಾಲಕರು ಡ್ರೈಫ್ ಮೂಲಕ ಶೇ 100 ರಷ್ಟು ರೈಡ್ ಶುಲ್ಕ ಪಡೆಯಲು ಅವಕಾಶ ಮಾಡಿಕೊಟ್ಟಿದ್ದೇವೆ. ಇದರಿಂದ ಸಾರಥಿಗಳು ಉತ್ತಮ ಜೀವನ ನಡೆಸಲು ಸಾಧ್ಯವಾಗಲಿದೆ ಎಂದು ಹೇಳಿದರು.

ಆಟೋ ರಿಕ್ಷಾ ದರ ಕುರಿತು ಸಾರಿಗೆ ಇಲಾಖೆ ಮತ್ತು ಕ್ಯಾಬ್ ವಲಯದ ಜಟಾಪಟಿ ವಿಶೇಷವಾಗಿ ಬೆಂಗಳೂರಿನ ಪ್ರಯಾಣಿಕರನ್ನು ಕಂಗಾಲಾಗಿಸಿದೆ. ನಿಗದಿತ ದರಕ್ಕಿಂತ ಹೆಚ್ಚು ವಸೂಲಿ ಮಾಡುತ್ತಿರುವುದೇ ಇದಕ್ಕೆ ಕಾರಣವಾಗಿದೆ. ಅತಿ ಬೇಡಿಕೆ ಸಮಯದಲ್ಲಿ ದರ ಇನ್ನಷ್ಟು ಹೆಚ್ಚಾಗುತ್ತಿದೆ. “ಡ್ರೈಫ್ ಡ್ರೈಫ್ ಆಟೋ “ ಸೇವೆಯಲ್ಲಿ ಚಾಲಕರಿಗೆ ನಷ್ಟ, ಪ್ರಯಾಣಿಕರಿಗೆ ಹೊರೆ ಮಾಡುವುದಿಲ್ಲ ಎಂದು ಮುಖ್ಯ ಕಾರ್ಯನಿರ್ವಹಣಾಧಿಕಾರಿ ಫಿರ್ದೋಷ್ ಶೇಖ್ ಸ್ಪಷ್ಟಪಡಿಸಿದರು. ಸುದ್ದಿಗೋಷ್ಠಿಯಲ್ಲಿ ಮುಖ್ಯ ಕಾರ್ಯಾಚರಣೆ ಅಧಿಕಾರಿ ಸೂರ್ಯ ರಂಜಿತ್, ಮುಖ್ಯ ತಾಂತ್ರಿಕ ಅಧಿಕಾರಿ ಮುದಿತ್ ಮುದ್ರಾ ಉಪಸ್ಥಿತರಿದ್ದರು

Related Posts

Leave a Reply

Your email address will not be published.