HomeFresh Newsತಲಪಾಡಿಯಲ್ಲಿ ಸರಣಿ ಕಳ್ಳತನ : ಪೊಲೀಸರ ವಿರುದ್ಧ ಸಾರ್ವಜನಿಕರು ಗರಂ

ತಲಪಾಡಿಯಲ್ಲಿ ಸರಣಿ ಕಳ್ಳತನ : ಪೊಲೀಸರ ವಿರುದ್ಧ ಸಾರ್ವಜನಿಕರು ಗರಂ

ರಾಷ್ಟ್ರೀಯ ಹೆದ್ದಾರಿ ಬಳಿಯ ಆರು ಅಂಗಡಿಗಳಿಗೆ ನುಗ್ಗಿದ ಕಳ್ಳರು ಸರಣಿ ಕಳವು ನಡೆಸಿ ಸಾವಿರಾರು ರೂ. ಬೆಲೆಬಾಳುವ ಸೊತ್ತುಗಳನ್ನು ಕಳವು ನಡೆಸಿರುವ ಘಟನೆ ಗಡಿಭಾಗ ತಲಪಾಡಿಯಲ್ಲಿ ಇಂದು ಬೆಳಿಗ್ಗೆ ಬೆಳಕಿಗೆ ಬಂದಿದೆ. ಅಶ್ರಫ್, ಕುಲದೀಪ್, ಶ್ರೀಧರ್ ಹಾಗೂ ಮಹಮ್ಮದ್ , ಶಂಕರ್ ಎಂಬವರಿಗೆ ಸೇರಿದ ಅಂಗಡಿಗಳಿಂದ ಸಾವಿರಾರು ರೂ. ಬೆಲೆಬಾಳುವ ವಸ್ತುಗಳು ಹಾಗೂ ಕ್ಯಾಷ್ ಡ್ರಾವರಿನಲ್ಲಿದ್ದ ನಗದು ಹಾಗೂ ಇನ್ನೋರ್ವ ಅಶ್ರಫ್ ಎಂಬವರಿಗೆ ಸೇರಿದ ಝೆರಾಕ್ಸ್ ಅಂಗಡಿಯಿಂದ ನಗದು, ಕಳವು ನಡೆಸಲಾಗಿದೆ.

ರಾತ್ರಿ ವೇಳೆ ಎಲ್ಲಾ ಅಂಗಡಿಗಳ ಬೀಗ ಮುರಿದು ಕಳ್ಳರು ಕೈಚಳಕ ತೋರಿಸಿದ್ದಾರೆ. ಮಂಜೇಶ್ವರ ಹಾಗೂ ಕುಂಜತ್ತೂರು ಭಾಗದಲ್ಲಿಯೂ ಇದೇ ರೀತಿಯ ಕಳವು ಕೃತ್ಯ ನಡೆದಿದ್ದು, ಇದೀಗ ತಲಪಾಡಿಗೂ ವ್ಯಾಪಿಸಿದೆ. ಗಡಿಭಾಗ ತಲಪಾಡಿ ಗಾಂಜಾ ವ್ಯಸನಿಗಳ ಅಟ್ಟಹಾಸವೂ ಮಿತಿಮೀರಿದ್ದು , ಕಳವು ಕೃತ್ಯದಲ್ಲಿ ಭಾಗಿಯಾಗಿರುವ ಶಂಕೆಯಿದೆ.ತಡರಾತ್ರಿ ವೇಳೆ ಅನುಮಾನಸ್ಪದ ರೀತಿಯಲ್ಲಿ 800 ಕಾರು ತಿರುಗಾಡುತ್ತಿತ್ತು. ತಂಡ ಇದೇ ಕಾರಿನಲ್ಲಿ ಬಂದು ಕೃತ್ಯವೆಸಗಿರುವ ಸಾಧ್ಯತೆಗಳನ್ನು ಸ್ಥಳೀಯರು ವ್ಯಕ್ತಪಡಿಸಿದ್ದಾರೆ.

RELATED ARTICLES

LEAVE A REPLY

Please enter your comment!
Please enter your name here

Most Popular

Recent Comments