ಡಾ.ಎಸ್ ರಾಧಾಕೃಷ್ಣನ್ ಅವರ ನೆನಪಿಗಾಗಿ ಶಿಕ್ಷಕ್ ಸಮ್ಮಾನ್-2022
ಸ್ವತಂತ್ರ ಮಾನ್ಯತೆ ಪಡೆದ ಶಾಲಾ ಶಿಕ್ಷಕರ ಒಕ್ಕೂಟ ಪಸ್ಟ್ ಕರ್ನಾಟಕ ಸಂಸ್ಥೆಯು ಡಾ.ಎಸ್ ರಾಧಾಕೃಷ್ಣನ್ ಅವರ ನೆನಪಿಗಾಗಿ ಶಿಕ್ಷಕ್ ಸಮ್ಮಾನ್-2022 ಅನ್ನು ಆಯೋಜಿಸಲಾಗಿತ್ತು. “ಶಿಕ್ಷಣದ ಚೇತರಿಕೆಯ ಹೃದಯದಲ್ಲಿ ಶಿಕ್ಷಕರು” ಎಂಬ ವಿಷಯದೊಂದಿಗೆ ಅಂತರರಾಷ್ಟ್ರೀಯ ಶಿಕ್ಷಕರ ದಿನವನ್ನು ಆಚರಿಸಿದರು. ಈ ಸಂದರ್ಭದಲ್ಲಿ ಬಿಝಡ್ ಸಂಸ್ಥೆಯ ಅಧ್ಯಕ್ಷರಾದ ಡಾ ಅಫ್ಶಾದ್ ಅಹ್ಮದ್ ಮತ್ತು ಪ್ರಧಾನ ಕಾರ್ಯದರ್ಶಿ ಬೀಬಿ ಆಯಿಷಾ ಶೇಖ್ ಮತ್ತು ಇಸಿ ಮತ್ತು ಸದಸ್ಯರು ಪ್ರಶಸ್ತಿ ಪುರಸ್ಕೃತರನ್ನು ಅಭಿನಂದಿಸಿದರು.
ಈ ಸಂದರ್ಭದಲ್ಲಿ ವಿಧಾಪರಿಷ್ ಸದಸ್ಯರಾದ ಪುಟ್ಟಣ್ಣ, ಮಾಜಿ ಸಂಸದ ಎಲ್. ಆರ್. ಶಿವರಾಮೇಗೌಡ, ಪೆÇಲೀಸ್ ಡಿವೈಎಸ್ಪಿ ಅಂಜುಮಾಲಾ ನಾಯಕ್, ಅನಗನಾ ರಾಯ್, ಯುನೈಟೆಡ್ ಗ್ರೂಪ್ ಆಫ್ ಹಾಸ್ಪಿಟಲ್ಸ್ ಎಂ.ಡಿ ಮತ್ತು ಅಧ್ಯಕ್ಷರಾದ ಡಾ.ವಿಕ್ರಮ್ ಸಿದ್ದಾರೆಡ್ಡಿ, ಐಸಾಕ್ ನ್ಯೂಟನ್ ಇಂಗ್ಲಿಷ್ ಶಾಲೆಯ ಸ್ಥಾಪಕ ಕಾರ್ಯದರ್ಶಿ ಪಿ.ಪಳನಿ, ಭಾರತೀಯ ನಟಿ ಶ್ರೀಮತಿ ಅಂಗನಾ ರಾಯ್ ,ನಜ್ಮುಲ್ ಇಸ್ಲಾಂ ಅಹೆಮರ್ ಎಡಿಫೈ ಇಂಟರ್ನ್ಯಾಷನಲ್ ಸ್ಕೂಲ್ ಸ್ಥಾಪಕರು ಮಾಧ್ಯಮ ಭಾರತ್ ಸಾರಥಿ ಸಂಸ್ಥಾಪಕ ಶ್ರೀ ಸದಾನಂದ ಸ್ವಾಮಿ ಉಪಸ್ಥಿತರಿದ್ದರು.
ಈವೆಂಟ್ ಕರ್ನಾಟಕದಲ್ಲಿ ಮೊದಲ ಬಾರಿಗೆ ಕೋಡಿಂಗ್ ಪೋನಿಕ್ಸ್ ಕನ್ನಡದ ಪೂರ್ವ ಬಿಡುಗಡೆಯನ್ನು ಮಾಡಲಾಯಿತು. ಲೀಡ್ ಜೆನ್ ಅಕಾಡೆಮಿ ಸಿಇಒ ಡಾ.ರಜನಿ ರಾವ್ ಅವರು ಫಸ್ಟ್ ಕರ್ನಾಟಕ ಸಹಯೋಗದೊಂದಿಗೆ ಕಾರ್ಯಕ್ರಮ ನಡೆಸಿದರು.