HomeFresh Newsಬ್ರಹ್ಮಾವರ : ಗ್ಯಾರೇಜ್ ಮಾಲಕರ ಸಂಘದ ವಾರ್ಷಿಕ ಸಭೆ

ಬ್ರಹ್ಮಾವರ : ಗ್ಯಾರೇಜ್ ಮಾಲಕರ ಸಂಘದ ವಾರ್ಷಿಕ ಸಭೆ

ಬ್ರಹ್ಮಾವರ ಗ್ಯಾರೇಜ್ ಮಾಲಕರ ಸಂಘದ ವಾರ್ಷಿಕ ಸಭೆ ಧರ್ಮಾವರ ಆಡಿಟೊರಿಯಂನಲ್ಲಿ ಜರುಗಿತು. ಕಾರ್ಯಕ್ರಮದಲ್ಲಿ ಭಾಗವಹಿಸಿದ ಉಡುಪಿ ಜಿಲ್ಲಾ ಕಾರ್ಮಿಕ ಅಧಿಕಾರಿ ಕುಮಾರ್ ಬಿ ಆರ್ ಮಾತನಾಡಿ ದೇಶದಲ್ಲಿ ಕೋರೋನ ಬಂದ ಬಳಿಕ ಗ್ಯಾರೇಜ ಮಾಲಕರ ಸಂಘದಂತೆ ಅನೇಕ ಕಾರ್ಮಿಕ ಸಂಘಟನೆಗಳು ಸರಕಾರದ ಕೆಲವು ಸವಲತ್ತು ಪಡೆಯುವಂತೆ ಆಗಿದೆ . ಮುಂದೆಯೂ ಕೂಡಾ ಇಲಾಖೆಯ ಸವಲತ್ತುಗಳನ್ನು ಸಂಘಟನೆಯ ಮೂಲಕ ಪಡೆದುಕೊಳ್ಳಿ ಎಂದರು.

ಬ್ರಹ್ಮಾವರ ಪೊಲೀಸ್ ಠಾಣಾಧಿಕಾರಿ ಮಹಾಂತೇಶ್ ಬ್ರಹ್ಮಾವರ ವ್ಯವಸಾಯ ಸೇವಾ ಸಹಕಾರಿ ಸಂಘದ ನಿರ್ದೇಶಕ ಬಿರ್ತಿ ರಾಜೇಶ್ ಶೆಟ್ಟಿ , ಸಂಘದ ಅಧ್ಯಕ್ಷ ನಾರಾಯಣ ಪೂಜಾರಿ , ಕಾರ್ಯದರ್ಶಿ ಪ್ರವೀಣ್ ಚಂದ್ರ ನಾಯಕ್ , ಬ್ರಹ್ಮಾವರ ಕಾರ್ಮಿಕ ನಿರೀಕ್ಷಕ ವಿಜೇಂದ್ರ , ಉಡುಪಿ, ಕುಂದಾಪುರ , ಬೈಂದೂರು ಸಂಘದ ಅಧ್ಯಕ್ಷರು, ಬ್ರಹ್ಮಾವರ ಸಂಘದ ಮಾಜಿ ಅಧ್ಯಕ್ಷರುಗಳು ಉಪಸ್ಥಿತರಿದ್ದರು. ಇದೇ ಸಂದರ್ಬದಲ್ಲಿ ಹಿರೀಯ ಮ್ಯಾಕೆನಿಕ್‍ಗಳನ್ನು ಮತ್ತು ಸಂಘದ ಸದಸ್ಯರ ಪ್ರತಿಭಾವಂತ ವಿದ್ಯಾರ್ಥಿಗಳನ್ನು ಗೌರವಿಸಲಾಯಿತು.

RELATED ARTICLES

LEAVE A REPLY

Please enter your comment!
Please enter your name here

Most Popular

Recent Comments