ಬ್ರಹ್ಮಮೊಗೇರ್ ಯಕ್ಷಗಾನ ಬಯಲಾಟ, ಧಾರ್ಮಿಕ ಸಭಾ ಕಾರ್ಯಕ್ರಮ

ಪುತ್ತೂರು: ಪುತ್ತೂರಿನ ಶ್ರೀ ಮಹಾಲಿಂಗೇಶ್ವರ ಬ್ರಹ್ಮಮೊಗೇರ ಆರಾಧನಾ ಟ್ರಸ್ಟ್‍ನ ವತಿಯಿಂದ ಬ್ರಹ್ಮಮೊಗೇರೆರ್ ಯಕ್ಷಗಾನ ಬಯಲಾಟ, ಧಾರ್ಮಿಕ ಸಭಾ ಕಾರ್ಯಕ್ರಮ ಹಾಗೂ ಮೊಗೇರ ದೈವಗಳ ದರ್ಶನ ಪಾತ್ರಿಗಳ ಸನ್ಮಾನ ಕಾರ್ಯಕ್ರಮ ಪುತ್ತೂರು ಶ್ರೀ ಮಹಾಲಿಂಗೇಶ್ವರ ದೇವರ ಜಾತ್ರಾ ಗದ್ದೆಯಲ್ಲಿ ನಡೆಯಿತು. ಸಭಾ ಕಾರ್ಯಕ್ರಮದಲ್ಲಿ ಆಶೀರ್ವಚನ ನೀಡಿದ ಒಡಿಯೂರು ಶ್ರೀ ಗುರುದೇವದತ್ತ ಸಂಸ್ಥಾನಮ್‍ನ ಶ್ರೀ ಗುರುದೇವಾನಂದ ಸ್ವಾಮೀಜಿ ಅವರು ತುಳು ನಾಡು ಎಂಬುದು ಒಂದು ಧರ್ಮಚಾವಡಿಯಾಗಿದೆ. ನಮ್ಮ ಸಂಸೃತಿಯ ಬೇರು ಜನಪದದೊಳಗೆ ಅಡಗಿದೆ ಎಂದರು.ಈ ಸಂದರ್ಭದಲ್ಲಿ ಸ್ವಾಮೀಜಿ ಅವರು ಶ್ರೀ ಆದಿನಾಗಬ್ರಹ್ಮ ಮೊಗೇರ್ಕಳ ಚರಿತ್ರೆ ಮತ್ತು ಕಾಸರಗೋಡು ಜಿಲ್ಲಾ ಮೊಗೇರ ದೈವಸ್ಥಾನಗಳು ಎಂಬ ಪುಸ್ತಕವನ್ನು ಬಿಡುಗಡೆಗೊಳಿಸಿದರು.

ರಾಜ್ಯ ಬಂದರು ಮತ್ತು ಮೀನುಗಾರಿಕೆ ಸಚಿವ ಎಸ್. ಅಂಗಾರ ಅವರು 25 ದೈವ ದರ್ಶನ ಪಾತ್ರಿಗಳಿಗೆ ಸನ್ಮಾನ ನೆರವೇರಿಸಿದರು. ಬಳಿಕ ಮಾತನಾಡಿ ದೈವ ದೇವರ ಕಾರಣಿಕವು ಯಾವು ಕಾಲಕ್ಕೂ ಕಡಿಮೆ ಆಗಲಾರದು. ಅದರ ಮಹತ್ವವನ್ನು ಕಾಲ ನಿರ್ಧರಿಸುತ್ತದೆ ಎಂದರು. ಸಭಾ ಕಾರ್ಯಕ್ರಮದ ಬಳಿಕ ತುಳುನಾಡಿನ ಐತಿಹಾಸಿಕ ದೈವಸಂಭೂತರ ಜೀವನ ಕಥಾ ಆಧಾರಿತ ಯಕ್ಷಗಾನ ಬಯಲಾಟ ಪ್ರದರ್ಶನ `ಬ್ರಹ್ಮಮೋಗೇರೆರ್’ ನಡೆಯಿತು. ವೇದಿಕೆಯಲ್ಲಿ ಅಧ್ಯಕ್ಷತೆ ವಹಿಸಿದ್ದ ಶ್ರೀ ಮಹಾಲಿಂಗೇಶ್ವೆರ ಬ್ರಹ್ಮಮೊಗೇರ ಆರಾಧನಾ ಟ್ರಸ್ಟ್‍ನ ಅಧ್ಯಕ್ಷ ಗಣೇಶ್ ಸಂಪ್ಯ, ಪುತ್ತೂರು ಶ್ರೀ ಮಹಾಲಿಂಗೇಶ್ವರ ದೇವಳದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಕೇಶವ ಪ್ರಸಾದ್ ಮುಳಿಯ, ಸಂಚಾಲಕ ದಿನೇಶ್ ಬಪ್ಪಳಿಗೆ,ಪುತ್ತೂರು ಶ್ರೀ ಮಹಾಲಿಂಗೇಶ್ವರ ದೇವಳದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಕೇಶವ ಪ್ರಸಾದ್ ಮುಳಿಯ, ಬಜರಂಗದಳದ ಸಂಚಾಲಕ ಮುರಳೀಕೃಷ್ಣ ಹಸಂತಡ್ಕ. ಅರುಣ್ ಪುತ್ತಿಲ, ಸಹಜ್ ರೈ, ಡಾ. ರಘು ಬೆಳ್ಳಿಪ್ಪಾಡಿ, ಪ್ರದೀಪ್ ಕುಮಾರ್ ಹೊಸಮನೆ, ನಂದರಾಜ್ ಸಂಕೇಶ್, ಪ್ರಶಾಂತ್ ತ್ಯಾಗರಾಜನಗರ, ಲೋಕೇಶ್ ಎಚ್.ಎಂ., ಪ್ರಸನ್ನ ಉರ್ಲಾಂಡಿ. ಮೊಗೇರ ಸಂಘದ ಎಲ್ಲಾ ಜಿಲ್ಲಾಧ್ಯಕ್ಷರುಗಳು,ಸಮಿತಿಯ ಸದಸ್ಯರು,ಮತ್ತಿರರು ಉಪಸ್ಥಿತರಿದ್ದರು.
