Home Blog Full WidthPage 189

ಸುರತ್ಕಲ್‍ : ಎಟಿಎಂ ಮೆಷಿನ್ ಕಳವು ಯತ್ನ ಪ್ರಕರಣ – ನಾಲ್ವರ ಬಂಧನ

ಸುರತ್ಕಲ್ ಬಳಿಯ ಇಡ್ಯಾ ಎಂಬಲ್ಲಿ ಜೆಸಿಬಿ ಮೂಲಕ ಎಟಿಎಂ ಒಡೆದು ಹಣ ದೋಚುವ ಯತ್ನ ನಡೆದಿತ್ತು. ಪ್ರಕರಣದ ಬೆನ್ನತ್ತಿದ ಸುರತ್ಕಲ್ ಪೊಲೀಸರು ಶಿವಮೊಗ್ಗ ಮೂಲದ ನಾಲ್ವರನ್ನು ಬಂಧಿಸಿದ್ದಾರೆ. ಶಿವಮೊಗ್ಗ ಜಿಲ್ಲೆಯ ಶಿಕಾರಿಪುರ ತಾಲೂಕಿನ ಬೇಗೂರು ಗ್ರಾಮದ ದೇವರಾಜ್ (24), ಭರತ್ (20), ನಾಗರಾಜ ನಾಯ್ಕ (21), ಕೃತ್ಯಕ್ಕೆ ಧನಸಹಾಯ ಮಾಡಿದ್ದ ಧನರಾಜ್ ನಾಯ್ಕ (26)

ಮಂಗಳೂರು: ಕ್ಯಾನ್ಸರ್ ಪೀಡಿತ ರೋಗಿಗಳಿಗೆ ಕೇಶದಾನ ಮಾಡಿ ಮೆಚ್ಚುಗೆಗೆ ಪಾತ್ರರಾದ ಚಿನ್ನು ಕೊಟ್ಟಾರಿ

ತುಳುನಾಡ ಭಾರ್ಗವ ಎಂದು ಬಿರುದು ಪಡೆದ ಚಿನ್ನು ಕೊಟ್ಟಾರಿಯವರು ತುಳು ಚಿತ್ರರಂಗ ಹಾಗೂ ಡ್ಯಾನ್ಸ್ ಕೊರಿಯೋಗ್ರಾಫರ್ ಆಗಿ ಹೆಸರುವಾಸಿಯಾಗಿದ್ದು, ತನ್ನದೇ ಆದ ವಿಶಿಷ್ಟ ಕೇಶವಿನ್ಯಾಸದಿಂದ ಗುರುತಿಸಲ್ಪಟ್ಟಿದ್ದ ಚಿನ್ನು ಕೊಟ್ಟಾರಿ ಅವರು, 2018 ಮಿಸ್ಟರ್ ಬಿಯಾರ್ಡ್ ಟೈಟಲ್‍ನ್ನು ಮುಡಿಗೇರಿಸಿಕೊಂಡಿದ್ದರು. ಸರಿಸುಮಾರು 10 ವರ್ಷಗಳಿಂದ ತಾನು ಬಿಟ್ಟ ಕೇಶವನ್ನು ಕ್ಯಾನ್ಸರ್ ಪೀಡಿತ ರೋಗಿಗಳಿಗೆ ವಿಶ್ವಹಿಂದೂ ಪರಿಷತ್ ಮುಖಾಂತರ ಕೇಶದಾನ ಮಾಡಿ ಮೆಚ್ಚುಗೆಗೆ

ಪಾದೆಬೆಟ್ಟು ಸುಬ್ರಹ್ಮಣ್ಯ ದೇವಳದಲ್ಲಿ ನಾಗರ ಪಂಚಮಿ

ಪಡುಬಿದ್ರಿಯ ಪುರಾತನ ದೇವಳಗಳಲ್ಲಿ ಒಂದಾದ ಪಾದೆಬೆಟ್ಟು ಶ್ರೀ ಸುಬ್ರಹ್ಮಣ್ಯ ದೇವಸ್ಥಾನದಲ್ಲಿ ನಾಗರ ಪಂಚಮಿ ಆಚರಣೆ ಬಹಳ ವಿಜೃಂಭಣೆಯಿಂದ ನಡೆಯಿತು. ಸಹಸ್ರಾರು ಭಕ್ತಾದಿಗಳು ಶ್ರೀ ನಾಗದೇವರಿಗೆ ತನು ತಂಬಿಲ ಸೇವೆ ನೀಡಿದರು.

ಉಗ್ಗೆಲ್ ಬೆಟ್ಟು ಗರಡಿ ಬಳಿ “ಕೆಸರ್ಡ್ ಕುಸಲ್” ಕಾರ್ಯಕ್ರಮ

ಬ್ರಹ್ಮಾವರ : ಕಮಾಂಡರ್ ಸ್ಪೋರ್ಡ್ಸ್ ಮತ್ತು ಆರ್ಟ್ ಕ್ಲಬ್ ಉಗ್ಗೇಲ್ ಬೆಟ್ಟು ಮತ್ತು ಸಹೋದರ ಸಂಘಟನೆಗಳ ವತಿಯಿಂದ ಕೆಸರ್ಡ್ ಕುಸಲ್ ಎಂಬ ಕಾರ್ಯಕ್ರಮವವು ಉಗ್ಗೆಲ್ ಬೆಟ್ಟು ಗರಡಿಬಳಿಯ ಗದ್ದೆಯಲ್ಲಿ ಜರುಗಿತು. ಉಡುಪಿ ಜಿಲ್ಲಾ ಪಂಚಾಯತಿ ಮಾಜಿ ಸದಸ್ಯೆ ಗೀತಾಂಜಲಿ ಸುವರ್ಣ ಸಾಂಪ್ರದಾಯಕವಾಗಿ ಕಳಸೆಗೆÀ ಭತ್ತವನ್ನು ಸುರಿದು ಹಣತೆ ದೀಪ ಹಚ್ಚಿ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿ, ಮುಂದಿನ ಜನಾಂಗದ ಮಕ್ಕಳಿಗೆ ಮಣ್ಣು, ಕೃಷಿ ಇದನ್ನು ಪರಿಚಯಿಸಲು ಇಂತಹ

ಕಡಬ: ರಿಯಾದ್‌ನಲ್ಲಿ ಹ್ಯಾಕರ್‌ ಗಳ ಕುಕೃತ್ಯದಿಂದ ಜೈಲುಪಾಲಾದ ಕಡಬದ ಚಂದ್ರಶೇಖರ್‌

ಹ್ಯಾಕರ್ ಗಳ ಕೈಗೆ ಸಿಲುಕಿ ವಿದೇಶದ ಜೈಲಿನಲ್ಲಿ ಶಿಕ್ಷೆ ಅನುಭವಿಸುತ್ತಿರೋ ಮಂಗಳೂರಿನ ವ್ಯಕ್ತಿಯನ್ನ ಕೇಂದ್ರ ಮತ್ತು ರಾಜ್ಯ ಸರ್ಕಾರ ಬಿಡುಗಡೆಗೊಳಿಸುವಂತೆ ದ‌.ಕ ಜಿಲ್ಲೆಯ ಸಾಮಾಜಿಕ ಕಾರ್ಯಕರ್ತರು ಒತ್ತಾಯಿಸಿದ್ದಾರೆ. ದ.ಕ ಜಿಲ್ಲೆಯ ಕಡಬ ತಾಲೂಕು ಐತ್ತೂರು ಗ್ರಾಮದ ಮೂಜೂರು ದಿ.ಕೆಂಚಪ್ಪ ಗೌಡ ಮತ್ತು ಹೇಮಾವತಿ ದಂಪತಿ ಪುತ್ರ ಚಂದ್ರಶೇಖರ ಎಮ್.ಕೆ ರಿಯಾದ್ ನಲ್ಲಿರುವ ಅಲ್ಮಾನರ್ ಸೆರಾಮಿಕ್ಸ್ ಎಂಬ ಕಂಪನಿಯಲ್ಲಿ ಉದ್ಯೋಗಿಯಾಗಿದ್ದರು. ಆದರೆ ಯಾವುದೋ ಹ್ಯಾಕರ್ ಗಳ

ಕಾರ್ಕಳ ತಾಲೂಕಿನಾದ್ಯಾಂತ ಸಂಭ್ರಮದ ನಾಗರ ಪಂಚಮಿ

ಕಾರ್ಕಳ ತಾಲೂಕಿನ ವಿವಿಧ ನಾಗ ಸಾನಿಧ್ಯಗಳಲ್ಲಿ ನಾಗರ ಪಂಚಮಿಯನ್ನು ಸಂಭ್ರಮದಿಂದ ಆಚರಿಸಲಾಯಿತು. ಭಕ್ತರು ಶ್ರದ್ಧಾಭಕ್ತಿಯಿಂದ ಪಾಲ್ಗೊಂಡರು. ನಾಗಬನಗಳಲ್ಲಿ ಭಕ್ತಾದಿಗಳು ನಾಗನಿಗೆ ಹಾಲು, ಸೀಯಾಳ ಸಮರ್ಪಿಸುವ ದೃಶ್ಯ ಕಂಡು ಬಂತು. ನಾಗರ ಪಂಚಮಿ ಪ್ರಯುಕ್ತ ದನದ ಶುದ್ಧ ಹಾಲಿಗೆ ತುಂಬಾ ಪ್ರಾಮುಖ್ಯತೆ ಇರುವುದರಿಂದ ಕಾರ್ಕಳದ ಪೆರುವಾಜೆ ಬಳಿ ಇರುವ ಹಾಲು ಮಾರಾಟ ಕೇಂದ್ರದ ಬಳಿ ಬೆಳಿಗ್ಗೆ 6 ಗಂಟೆಯಿಂದಲೇ ಜನರು ಸರತಿ ಸಾಲಿನಲ್ಲಿ ನಿಂತು ಹಾಲು ಖರೀದಿಸಿದರು. ನಾಗರ ಪಂಚಮಿ

ಕಚ್ಚೂರು ಕ್ರೆಡಿಟ್ ಕೋ ಆಪರೇಟಿವ್ ಸೊಸೈಟಿಗೆ SCDCC ಬ್ಯಾಂಕ್ ನ ಸಾಧನ ಪ್ರಶಸ್ತಿ

ಕಚ್ಚೂರು ಕ್ರೆಡಿಟ್ ಕೋ ಆಪರೇಟಿವ್ ಸೊಸೈಟಿ ಗೆ ಸತತ 3 ನೆ ಬಾರಿ SCDCC ಬ್ಯಾಂಕ್ ನ ಸಾಧನ ಪ್ರಶಸ್ತಿ ದಿನಾಂಕ. 19-08-2023 ರಂದು ನಡೆದ SCDCC ಬ್ಯಾಂಕ್ ನ ಮಹಾಸಬೆಯಲ್ಲಿ ಸೊಸೈಟಿಯ ಅಧ್ಯಕ್ಷರಾದ ಶ್ರೀ ಚಂದ್ರಶೇಕರ್. ಕೆ ಹಾಗೂ ಸಿ.ಇ.ಒ ಪದ್ಮನಾಭ್ .ಎಂ ಇವರನ್ನು ಸನ್ಮಾನಿಸಿ scdcc ಬ್ಯಾಂಕ್ ನ ಅಧ್ಯಕ್ಷರಾದ ಶ್ರೀ ರಾಜೇಂದ್ರ ಕುಮಾರ್ ಇವರು ಪ್ರಶಸ್ತಿಯನ್ನು ಪ್ರದಾನ ಮಾಡಿದರು .ಸೊಸೈಟಿಯು ಕಳೆದ 3 ವರ್ಷದಿಂದ ಈ ಪ್ರಶಸ್ತಿಯನ್ನು ಪಡೆಯುತ್ತಿದೆ.

ಬಾರಕೂರು ಬಂಡಿಮಠ: ಕುಲಾಲ ಸಮಾಜದ ದೈವಸ್ಥಾನಕ್ಕೆ ಬೇಕು ಕಾಯಕಲ್ಪ..!

ಬಾರಕೂರು ಬಳಿಯ ಬಂಡೀಮಠದಲ್ಲಿರುವ ಕುಂಬಾರ ಸಮಾಜದವರ ದೈವಸ್ಥಾನ ತೀರಾ ಜೀರ್ಣಾವಸ್ಥೆಯಲ್ಲಿದ್ದು, ಕಾಯಕಲ್ಪಕ್ಕಾಗಿ ಕಾಯುತ್ತಿದೆ. ಕುಂಬಾರಿಕೆ ಮಾಡುವ ಕುಲಾಲ ಸಮುದಾಯದವರಿಗೆ ಮೂಲ ಸ್ಥಾನ ಎನ್ನುವುದಕ್ಕೆ ಸಾಕ್ಷಿಯಾಗಿ ತಲತಲಾಂತರದಿಂದ ಇಲ್ಲಿ ಅರ್ಚನೆ, ಪೂಜೆ ಮತ್ತು ದರ್ಶನ ಕುಲಾಲ ಸಮುದಾಯದವರಿಂದ ನಡೆಯುತ್ತಾ ಬರುತ್ತಿದೆ. ಇಲ್ಲಿ ಪ್ರಧಾನ ದೈವ ಹಾೈಗುಳಿ ಜೊತೆ ಹಲವಾರು ಪರಿವಾರ ಶಕ್ತಿಗಳ ಸಾನಿಧ್ಯವಿದೆ. ಸುತ್ತ ಕಾನನದ ನಡುವೆ ಮುಳಿ ಹುಲ್ಲಿನ ಚಿಕ್ಕ ಗುಡಿಯೊಂದು ಇದ್ದು

ಬಂಟ್ವಾಳ – ಧರ್ಮದೈವ ಕ್ಷೇತ್ರ ಮತ್ತು ಶಾಸಕರ ಬಗ್ಗೆ ಅಪಪ್ರಚಾರ-ಕಕ್ಯಗುತ್ತಿನಲ್ಲಿ ಪ್ರಾರ್ಥನೆ

ಧರ್ಮದೈವಗಳ ಕ್ಷೇತ್ರಕ್ಕೆ ಅಪಚಾರವಾಗುವಂತೆ ಮತ್ತು ಬಂಟ್ವಾಳ ಶಾಸಕರ ಹೆಸರನ್ನು ಕೆಡಿಸುವ ರೀತಿಯಲ್ಲಿ ಸಾಮಾಜಿಕ ಜಾಲತಾಣಗಳಲ್ಲಿ ಸುಳ್ಳು ಸುದ್ದಿಗಳನ್ನು ಹಬ್ಬಿರುವ ಇಬ್ಬರು ವ್ಯಕ್ತಿಗಳಿಗೆ ದೈವದೇವರುಗಳು ಸರಿಯಾದ ಶಿಕ್ಷೆ ನೀಡಬೇಕು ಎಂದು ಕಕ್ಯಗುತ್ತಿನ ಭಂಡಾರದ ಮನೆಯವರು ಹಾಗೂ ಊರಿನ ಪ್ರಮುಖರು ಪ್ರಾರ್ಥನೆ ಸಲ್ಲಿಸಿದ್ದಾರೆ. ನಂತರ ಇಲ್ಲಿನ ದುರ್ಗಾಪರಮೇಶ್ವರಿ ದೇವಸ್ಥಾನದಲ್ಲಿ ಕೂಡ ದೇವರಲ್ಲಿ ಬೇಡಿಕೊಂಡಿದ್ದಾರೆ. ಬಂಟ್ವಾಳ ತಾಲೂಕಿನ ಉಳಿ ಗ್ರಾಮಪಂಚಾಯತ್

ನಿವೃತ್ತ ಮುಖ್ಯ ಶಿಕ್ಷಕ ಸುರೇಶ ಭಂಡಾರಿಗೆ ಬೀಳ್ಕೊಡುಗೆ

ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಕೊಳ್ಳಬೈಲು ಇಲ್ಲಿನ ನಿವೃತ್ತ ಮುಖ್ಯೋಪಾಧ್ಯಾಯ ಹಾಗೂ ಸಂಪನ್ಮೂಲ ವ್ಯಕ್ತಿ ಸುರೇಶ ಭಂಡಾರಿ ಮತ್ತು ಅವರ ಪತ್ನಿ ಶಾಂತಾ ಶೆಟ್ಟಿಯರವರನ್ನು ವೇದಮೂರ್ತಿ ಕೊಡಕಟ್ಟು ಮಂಜುನಾಥ ಉಪಾಧ್ಯಾಯ ಶಾಲಾ ವತಿಯಿಂದ ಹಾಗೂ ಊರವರ ಪರವಾಗಿ ಸನ್ಮಾನಿಸಲಾಯಿತು. ಸನ್ಮಾನಿತರು ಬೈಂದೂರು, ಕಮಲಶಿಲೆ ಮತ್ತಿತರ ಕಡೆಗಳಲ್ಲಿ ಶಿಕ್ಷಕರಾಗಿ, ಬ್ರಹ್ಮಾವರ ಕ್ಷೇತ್ರ ಸಂಪನ್ಮೂಲ ಕೇಂದ್ರದಲ್ಲಿ ತರಬೇತುದಾರರಾಗಿ ಸೇವೆ ಸಲ್ಲಿಸಿದ್ದು ವಿದ್ಯಾರ್ಥಿಗಳ ಮೆಚ್ಚುಗೆಗೆ