ಬಾರಕೂರು ಬಂಡಿಮಠ: ಕುಲಾಲ ಸಮಾಜದ ದೈವಸ್ಥಾನಕ್ಕೆ ಬೇಕು ಕಾಯಕಲ್ಪ..!

ಬಾರಕೂರು ಬಳಿಯ ಬಂಡೀಮಠದಲ್ಲಿರುವ ಕುಂಬಾರ ಸಮಾಜದವರ ದೈವಸ್ಥಾನ ತೀರಾ ಜೀರ್ಣಾವಸ್ಥೆಯಲ್ಲಿದ್ದು, ಕಾಯಕಲ್ಪಕ್ಕಾಗಿ ಕಾಯುತ್ತಿದೆ.

ಕುಂಬಾರಿಕೆ ಮಾಡುವ ಕುಲಾಲ ಸಮುದಾಯದವರಿಗೆ ಮೂಲ ಸ್ಥಾನ ಎನ್ನುವುದಕ್ಕೆ ಸಾಕ್ಷಿಯಾಗಿ ತಲತಲಾಂತರದಿಂದ ಇಲ್ಲಿ ಅರ್ಚನೆ, ಪೂಜೆ ಮತ್ತು ದರ್ಶನ ಕುಲಾಲ ಸಮುದಾಯದವರಿಂದ ನಡೆಯುತ್ತಾ ಬರುತ್ತಿದೆ. ಇಲ್ಲಿ ಪ್ರಧಾನ ದೈವ ಹಾೈಗುಳಿ ಜೊತೆ ಹಲವಾರು ಪರಿವಾರ ಶಕ್ತಿಗಳ ಸಾನಿಧ್ಯವಿದೆ.

ಸುತ್ತ ಕಾನನದ ನಡುವೆ ಮುಳಿ ಹುಲ್ಲಿನ ಚಿಕ್ಕ ಗುಡಿಯೊಂದು ಇದ್ದು ಇಲ್ಲಿಗೆ ಕುಂಬಾರಾಡಿ ಎಂದು ಕರೆಯುವುದು ಇಂದಿಗೂ ಚಾಲ್ತಿಯಲ್ಲಿದೆ. ಬಂಡೀಮಠದ ಕುಲಾಲ ಕುಟುಂಬದÀ ಬಾಬು ಕುಲಾಲ ಇಲ್ಲಿನ ಅರ್ಚಕರು ಮತ್ತು ದರ್ಶನ ಪಾತ್ರಿಯಾಗಿದ್ದಾರೆ.
ನಾಡಿನ ಅಲ್ಲಲ್ಲಿ ಚದುರಿದ ಕುಲಾಲ ಜನಾಂಗದ ಕೆಲವರು ಪ್ರಶ್ನಾ ಚಿಂತನೆಯಲ್ಲಿ ಕಂಡುಬಂದ ಹಿನ್ನೆಲೆಯಲ್ಲಿ ಒಟ್ಟಾಗಿ ಗುಡಿಯೊಂದನ್ನು ನವೀಕರಿಸಿ ವರ್ಷಕ್ಕೊಮ್ಮೆ ಪೂಜೆ ಮಾಡುತ್ತಿದ್ದಾರೆ.

ಸಾನಿದ್ಯದ ಜಾಗದಲ್ಲಿ ಹುತ್ತ ಬೆಳೆದಿದೆ. ನಾಗ ಸ್ಥಾನ ನವೀಕರಣಗೊಳ್ಳ ಬೇಕಾಗಿದೆ. ಬಾವಿ, ವಿದ್ಯುತ್ ಸೌಲಭ್ಯವಿಲ್ಲದೆ ಕೇವಲ ಅವಶೇಷಗಳು ಮಾತ್ರ ಇರುವ ಈ ಸಾನಿಧ್ಯವನ್ನು ನಾಡಿನ ಕುಲಾಲ ಸಮುದಾಯದವರು ಒಂದಾಗಿ ಜೀರ್ಣೋದ್ಧಾರಗೊಳಿಸಬೇಕಾಗಿದೆ.
