ಮುಂಡ್ಕೂರು: ನೇಪಥ್ಯಕ್ಕೆ ಸರಿದ ಸಂಕಲಕರಿಯ ಹಿರಿಯ ಪ್ರಾಥಮಿಕ ಶಾಲೆ

ಸುಮಾರು ನೂರು ವರ್ಷಗಳ ಕಾಲ ಪ್ರಾಥಮಿಕ ಶಿಕ್ಷಣ ಕ್ಷೇತ್ರದಲ್ಲಿ ಸಹಸ್ರಾರು ವಿದ್ಯಾರ್ಥಿಗಳ ಭವಿಷ್ಯ ಬರೆದಿದ್ದು, ಶಿಕ್ಷಕರು ಹಾಗೂ ವಿದ್ಯಾರ್ಥಿಗಳ ಕೊರತೆಯಿಂದ ಕಾರ್ಕಳ ತಾಲೂಕಿನ ಮುಂಡ್ಕೂರು ಗ್ರಾಮದ ಸಂಕಲಕರಿಯ ಪ್ರಾಥಮಿಕ ಶಾಲೆ ಮುಚ್ಚಿ ಹೋಗಿದೆ.
ಆಂಗ್ಲ ಮಾಧ್ಯಮ ಶಾಲೆಗಳ ವೈಭವೀಕರಣ ಹಾಗೂ ಪೋಷಕರಿಂದ ಆಂಗ್ಲ ಮಾಧ್ಯಮ ಶಾಲೆಗಳ ವ್ಯಾಮೊಹಗಳ ಕಾರಣದಿಂದ ವಿದ್ಯಾರ್ಥಿಗಳ ಕೊರತೆಯಿಂದಾಗಿ ಅನುಪಾತದ ಪರಿಣಾಮವಾಗಿ ಶಿಕ್ಷಕರ ಕೊರತೆಯಿಂದ ಶತಮಾನ ಕಂಡ ಶಾಲೆ, ಮುಚ್ಚಿ ಹೋಗಿದ್ದು ಹಳೆ ವಿದ್ಯಾರ್ಥಿಗಳು ದಾನಿಗಳು ಹಾಗೂ ಆಡಳಿತ ಮಂಡಳಿ ಶಾಲೆಯನ್ನು ಉಳಿಸಲು ಹರಸಾಹಸ ಪಟ್ಟರೂ
ಪ್ರಯತ್ನ ವ್ಯರ್ಥ ವಾಗಿತ್ತು. ಇಲ್ಲಿ ಕಲಿತ ವಿದ್ಯಾರ್ಥಿಗಳು ದೇಶವಿದೇಶಗಳಲ್ಲಿ ವೈದ್ಯರಾಗಿ, ಇಂಜಿನಿಯರಾಗಿ ಶಿಕ್ಷಕರಾಗಿ ವಿವಿಧ ಹುದ್ದೆಗಳನ್ನು ಅಲಂಕರಿಸಿ ಸಮಾಜದಲ್ಲಿ ಅತ್ಯುನ್ನತ ಸ್ಥಾನಮಾನದೊಂದಿಗೆ ಈ ಶಾಲೆಗೆ ಕೀರ್ತಿ ತಂದಿದ್ದಾರೆ .

ಈ ಶಾಲೆಯಲ್ಲಿ ಭಾರಿ ಮೇಧಾವಿ ಶಿಕ್ಷಕರು ಪಾಠ ಹೇಳುತ್ತಿದ್ದಾರೆಂದು ಇಲ್ಲ ವಿದ್ಯಾರ್ಥಿಗಳು ಹೇಳುತ್ತಾರೆ. ಹಿಂದೆ ಶಾಲೆಯ ಆಡಳಿತ ಮಂಡಳಿ ಅಧ್ಯಕ್ಷರೂ ಆಗಿದ್ದ ಮುಂಡ್ಕೂರು ದೊಡ್ಡ ಮನೆ ದಿ.ವೆಂಕಣ್ಣಶೆಟ್ಟ ದಿ. ಗೋಪಾಲ್ ಶೆಟ್ಟಿ ,ದಿ. ಸುರೇಂದ್ರ ಶೆಟ್ಟಿ, ಮುಂಡ್ಕೂರು ಸಾಂತ್ರಾಲ ಗುತ್ತು ದಿ.ಮಹಾಬಲ ಶೆಟ್ಟಿ ,ನಿವೃತ್ತ ಶಿಕ್ಷಕರಾದ ಯತೀಶ್ ಬಂಡಾರಿ ದಿ. ಲಿಲ್ಲಿ ಟೀಚರ್, ಪ್ರಸಿಲ್ಲಾ ಟೀಚರ್, ಬಾಬು ಶೆಟ್ಟಿ ಈ ಶಾಲೆಯ ಸ್ಮರಣಾರ್ಹ ಅಧ್ಯಾಪಕರು. ಇವರ ಸೇವೆ ಇಂದಿಗೂ ಹಳೆ ವಿದ್ಯಾರ್ಥಿಗಳಿಂದ ಸ್ಮರಿಸಲ್ಪಡುತ್ತದೆ.
ಮುಂಡ್ಕೂರು ಗ್ರಾಮ ಪಂಚಾಯತ್, ವಾರ್ಡ್ ನಂಬರ್ ೧ರಮತದಾರರು ಈ ಶಾಲೆಯಲ್ಲಿ ತಮ್ಮ ಮತದಾನದ ಹಕ್ಕು ಚಲಾಯಿಸಲಿರುದರಿಂದ ಈ ಕಾರಣಕ್ಕಾಗಿ ಮುಚ್ಚಿರುವ ಈ ಶಾಲೆ ಚುನಾವಣಾ ಸಂದರ್ಭದಲ್ಲಿ ತೆರೆಯುವ ಭಾಗ್ಯ ಬಂದಿರುತ್ತದೆ.
