Home Blog Full WidthPage 193

ಕಾಲೇಜಿನ ಶೌಚಾಲಯದಲ್ಲಿ ವೀಡಿಯೋ ಚಿತ್ರೀಕರಣ ಪ್ರಕರಣ : ದ.ಕ. ಜಿಲ್ಲಾ ಬಿಜೆಪಿಯಿಂದ ಘಟನೆ ಖಂಡಿಸಿ ಪ್ರತಿಭಟನೆ

ಉಡುಪಿಯ ಕಾಲೇಜಿನ ಶೌಚಾಲಯದಲ್ಲಿ ವಿದ್ಯಾರ್ಥಿನಿಯರ ವೀಡಿಯೋ ಚಿತ್ರೀಕರಣ ನಡೆಸಿದ ಘಟನೆ ಖಂಡಿಸಿ ದಕ್ಷಿಣ ಕನ್ನಡ ಜಿಲ್ಲಾ ಬಿಜೆಪಿ ವತಿಯಿಂದ ಮಂಗಳೂರು ಪುರಭವನದ ಎದುರು ಬೃಹತ್ ಪ್ರತಿಭಟನೆ ನಡೆಯಿತು. ಪ್ರತಿಭಟನೆಯನ್ನು ಉದ್ದೇಶಿಸಿ ಮಾತನಾಡಿದ ಸಂಸದ ನಳಿನ್ ಕುಮಾರ್ ಕಟೀಲ್ ಅವರು, ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರಕಾರ ಹಿಂದೂ ವಿರೋಧಿಯಾಗಿ, ರಾಷ್ಟ್ರ

ಮಂಗಳೂರು ವಿವಿ ಮಾಜಿ ಉಪಕುಲಪತಿ ಪ್ರೊ.ಕೆ. ಭೈರಪ್ಪ ನಿಧನ

ಮಂಗಳೂರು ವಿಶ್ವವಿದ್ಯಾನಿಲಯದ ಮಾಜಿ ಉಪಕುಲಪತಿ ಪ್ರೊ..ಕೆ.ಭೈರಪ್ಪ ಅವರು ತೀವ್ರ ಹೃದಯಾಘಾತದಿಂದ ನಿಧನ ಹೊಂದಿದರು. ಅವರಿಗೆ 69 ವರ್ಷ ವಯಸ್ಸಾಗಿತ್ತು. 2014 ಜೂನ್ ನಿಂದ 2019 ಜೂನ್ ವರೆಗೆ ಮಂಗಳೂರು ವಿಶ್ವ ವಿದ್ಯಾಲಯದಲ್ಲಿ ಕುಲಪತಿಗಳಾಗಿ ಕಾರ್ಯನಿರ್ವಹಿಸಿ ಬಳಿಕ ನಿವೃತ್ತಿ ಹೊಂದಿದ್ದರು ಆ ಬಳಿಕ ಆದಿ ಚುಂಚನಗಿರಿಯಲ್ಲಿ ಸಹ ಕುಲಪತಿಗಳಾಗಿ ಕಾರ್ಯನಿರ್ವ ಹಿಸುತಿದ್ದರು. ಅವರು ಮೆಟೀರಿಯಲ್ಸ್ ಸೈನ್ಸ್, ನ್ಯಾನೊಟೆಕ್ನಾಲಜಿ, ಸಾಲಿಡ್ ಸ್ಟೇಟ್ ಸೈನ್ಸ್, ಕ್ರಿಸ್ಟಲ್

ಕಾರ್ಕಳ: ಬಸ್ ತಂಗುದಾಣದಲ್ಲಿ ಸತ್ತ ನಾಯಿಯ ದಫನ: ಸಾರ್ವಜನಿಕ ವಲಯದಲ್ಲಿ ವ್ಯಾಪಕ ಟೀಕೆ

ಕಾರ್ಕಳ : ಸಾರ್ವಜನಿಕ ಸ್ಥಳದಲ್ಲಿ ಇರುವ ಬಸ್ ತಂಗುದಾಣದಲ್ಲಿ ಬೀದಿನಾಯೊಂದು ಸತ್ತು ಬಿದ್ದಿದ್ದು ಅದನ್ನು ತೆರವುಗೊಳಿಸಲು ಮುಂದಾಗದ ನಂದಳಿಕೆ ಗ್ರಾಮ ಪಂಚಾಯತ್ ಒಂದು ಲೋಡ್ ಮಣ್ಣು ತಂದು ಅದರ ಮೇಲೆ‌ ಸುರಿದು ಘನಕಾರ್ಯ ನಡೆಸಿರುವ ಕುರಿತು ವ್ಯಾಪಕ ಟೀಕೆ ವ್ಯಕ್ತವಾಗಿದೆ. ಸತ್ತ ನಾಯಿಯ ದಫನ ಕ್ರಿಯೆ‌ಮಾಡುವ ಮೂಲಕ ಸಾಂಕ್ರಾಮಿಕ ರೋಗ ಹರಡದಂತೆ ಮುನ್ನೆಚ್ಚರಿಕೆ ವಹಿಸಿಕೊಳ್ಳಲು ಸ್ಥಳೀಯಾಡಳಿ ಮುಂದಾಗಬೇಕಿತ್ತು. ಆದರೆ ನಂದಳಿಕೆ ಗ್ರಾಮ ಪಂಚಾಯತ್ ಆಡಳಿತ ವರ್ಗವು

ದ.ಕ ಜಿಲ್ಲಾ ಕಾಂಗ್ರೆಸ್ ಸಮಿತಿಯಿಂದ ಮಣಿಪುರದ ಮಹಿಳೆಯರ ಮೇಲಿನ ದೌರ್ಜನ್ಯ ಖಂಡಿಸಿ ಪ್ರತಿಭಟನೆ

ಮಣಿಪುರದ ಮಹಿಳೆಯರ ಮೇಲಿನ ದೌರ್ಜನ್ಯ, ಬಿಜೆಪಿ ಸರ್ಕಾರದ ದುರಾಡಳಿತದ ವಿರುದ್ದ ಹಾಗೂ ಜನರಿಗೆ ರಕ್ಷಣೆ ನೀಡಲು ಆಗ್ರಹಿಸಿ ದ.ಕ ಜಿಲ್ಲಾ ಕಾಂಗ್ರೆಸ್ ಸಮಿತಿಯಿಂದ ಮಂಗಳೂರಿನಲ್ಲಿ ಪ್ರತಿಭಟನೆ ನಡೆಸಿದರು. ನಗರದ ಮಹಾನಗರ ಪಾಲಿಕೆಯ ಎದುರಿನ ಲಾಲ್‍ಬಾಗ್ ಮಹಾತ್ಮಾ ಗಾಂಧಿ ಪ್ರತಿಮೆಯ ಎದುರು ಪ್ರತಿಭಟನೆ ನಡೆಸಿದರು. ಪ್ರತಿಭಟನೆಯನ್ನು ಉದ್ದೇಶಿಸಿ ಮಾತನಾಡಿದ ಕಾಂಗ್ರೆಸ್ ಮುಖಂಡ ಮಿಥುನ್ ರೈ ಮಾತನಾಡಿ, ಮಣಿಪುರದಲ್ಲಿ ಗಲಭೆ ಆರಂಭವಾಗಿ 3 ತಿಂಗಳಾದರೂ ಬಿಜೆಪಿಯ

ಮಣಿಪುರದ ಹಿಂಸಾಚಾರ ಖಂಡಿಸಿ ಪುತ್ತೂರು ಬ್ಲಾಕ್ ಕಾಂಗ್ರೆಸ್‍ನಿಂದ ಪ್ರತಿಭಟನೆ

ಪುತ್ತೂರು: ಮಣಿಪುರ ರಾಜ್ಯದಲ್ಲಿ ಎರಡು ಜನಾಂಗಗಳ ಮಧ್ಯೆ ನಡೆಯುತ್ತಿರುವ ಹಿಂಸಾಚಾರದ ವಿರುದ್ಧ ಪುತ್ತೂರು ಬ್ಲಾಕ್ ಕಾಂಗ್ರೆಸ್‍ನಿಂದ ಪುತ್ತೂರು ಬಸ್ ನಿಲ್ದಾಣದ ಬಳಿಯ ಗಾಂಧೀಕಟ್ಟೆಯ ಬಳಿ ಮೊಂಬತ್ತಿ ಉರಿಸಿ, ಪ್ರತಿಭಟನೆ ನಡೆಸಿದರು. ಪ್ರತಿಭಟನೆಯನ್ನು ಉದ್ದೇಶಿಸಿ ಜಿಲ್ಲಾ ಕಾಂಗ್ರೆಸ್ ವಕ್ತಾರ ಮಹಮ್ಮದ್ ಬಡಗನ್ನೂರು ಮಾತನಾಡಿ, ಮಣಿಪುರದ ಘಟನೆ ಅಂತಾರಾಷ್ಟ್ರೀಯ ಮಟ್ಟದಲ್ಲಿ ದೇಶದ ಮೆರುಗಿಗೆ ಕುಂದುಂಟಾಗಿದೆ. ಹಿರಿಯರ ದೂರದರ್ಶಿತದ ಚಿಂತನೆಗಳ ಮಣ್ಣು

ಶ್ರೀ ಮಹಾಲಕ್ಷ್ಮಿ ದೇವಸ್ಥಾನ : ಉಚ್ಚಿಲ ದಸರಾ-2023 ಅದ್ಧೂರಿಯಾಗಿ ನಡೆಸಲು ತೀರ್ಮಾನ

ಶ್ರೀ ಕ್ಷೇತ್ರ ಉಚ್ಚಿಲ ಶ್ರೀ ಮಹಾಲಕ್ಷ್ಮೀ ದೇವಸ್ಥಾನದಲ್ಲಿ ಉಚ್ಚಿಲ ದಸರಾ 2023 ಪೂರ್ವಭಾವಿ ಸಭೆಯು ಉಚ್ಚಿಲ ಮೊಗವೀರ ಭವನದಲ್ಲಿ ನಡೆಯಿತು. ಅಕ್ಟೋಬರ್ 15ರಿಂದ ಅ. 24ರ ವರೆಗೆ ವೈಭವದ ಉಚ್ಚಿಲ ದಸರಾ ನಡೆಯಲಿದೆ. ದಕ್ಷಿಣ ಕನ್ನಡ ಮೊಗವೀರ ಮಹಾಜನ ಸಂಘ ಉಚ್ಚಿಲ ಇದರ ನೇತೃತ್ವದಲ್ಲಿ ಮತ್ತು ಉಚ್ಚಿಲ ಶ್ರೀ ಮಹಾಲಕ್ಷ್ಮಿ ದೇವಸ್ಥಾನದ ವತಿಯಿಂದ ಹಾಗೂ ಸಹೃದಯಿ ಭಕ್ತಾಭಿಮಾನಿಗಳ ಸಹಕಾರದೊಂದಿಗೆ ಕಳೆದ ಬಾರಿ ಪ್ರಪ್ರಥಮ ಬಾರಿಗೆ ಉಚ್ಚಿಲ ಶ್ರೀ ಮಹಾಲಕ್ಷ್ಮಿ ದೇವಸ್ಥಾನದಲ್ಲಿ

ವಾರದ ಬಳಿಕ ಶರತ್ ಕುಮಾರ್ ಮೃತದೇಹ ಪತ್ತೆ

ಬೈಂದೂರು: ವಾರದ ಹಿಂದೆ ಕೊಲ್ಲೂರು ಸಮೀಪದ ಅರಶಿನಗುಂಡಿ ಜಲಪಾತ ವೀಕ್ಷಣೆ ವೇಳೆ ಆಕಸ್ಮಿಕವಾಗಿ ಬಿದ್ದು ನದಿ ನೀರಿನಲ್ಲಿ ಕೊಚ್ಚಿ ಹೋಗಿದ್ದ ಶರತ್ ಕುಮಾರ್ ಮೃತದೇಹ ಪತ್ತೆಯಾಗಿದೆ. ಶಿವಮೊಗ್ಗ ಜಿಲ್ಲೆ ಭದ್ರಾವತಿ ತಾಲೂಕಿನ ಕೆ.ಎಚ್ ನಗರ ಸುಣ್ಣದ ಹಳ್ಳಿ ನಿವಾಸಿ ಶರತ್ ಕುಮಾರ್ (23) ಮೃತಪಟ್ಟವರು.ಕಳೆದೆರಡು ದಿನಗಳಿಂದ ಪರಿಸರದಲ್ಲಿ ಮಳೆ ಇಳಿಮುಖವಾಗಿದ್ದು ನೀರಿನ ಹರಿವು ಕಡಿಮೆಯಾಗಿದೆ. ಇದರಿಂದಾಗಿ ಫಾಲ್ಸ್ ನಲ್ಲಿ ಶರತ್ ಬಿದ್ದ ಸಮೀಪದ ಕಲ್ಲು ಪೊಟರೆಯೊಳಗೆ ಕೊಳೆತ

ಮಾಣಿ ಪೆರಾಜೆಯ ವಿದ್ಯಾನಗರಪಾಳ್ಯ ಬಾಲವಿಕಾಸ ಆಂಗ್ಲ ಮಾಧ್ಯಮ ಶಾಲೆ : ಆಟಿಡೊಂಜಿ ಕೂಟ ಕಾರ್ಯಕ್ರಮ

ವಿಟ್ಲ : ಆಟಿಯ ವೈವಿಧ್ಯಮಯ ತಿನಿಸುಗಳನ್ನು ಒಂದೇ ಬಾರಿ ತಿನ್ನುವ ಕ್ರಮ ಆಟಿಯ ಆಚರಣೆ ಅಲ್ಲ. ಆಟಿ ಒಂದು ದಿನದ ಆಚರಣೆಯೂ ಅಲ್ಲ ಅದು ಒಂದು ತಿಂಗಳ ಆಚರಣೆ. ತುಳುನಾಡಿನ ಔಷಧಿಗಳ ಮಹತ್ವವನ್ನು ತಿಳಿಯೋಣ ಎಂದು‌ ಜನಪದ ಚಿಂತಕರು ಹಾಗೂ ಉದ್ಯಾವರ ಎಸ್ ಡಿ ಎಮ್ ಆಯುರ್ವೇದ ವೈದ್ಯಕೀಯ ಕಾಲೇಜಿನ ವಿಶ್ರಾಂತ ಪ್ರಾಧ್ಯಾಪಕರಾದ ಡಾ|| ವೈ.ಯನ್.ಶೆಟ್ಟಿಯವರು ಹೇಳಿದರು. ಅವರು ಮಾಣಿ ಪೆರಾಜೆಯ ವಿದ್ಯಾನಗರಪಾಳ್ಯ ಬಾಲವಿಕಾಸ ಆಂಗ್ಲ ಮಾಧ್ಯಮ ಶಾಲೆಯಲ್ಲಿ ಜು.30ರಂದು ನಡೆದ ಆಟಿಡೊಂಜಿ

ಪರಿಸರ ಉಳಿವಿಗಾಗಿ ಬಂಡವಾಳ ಶಾಹಿ ಪದ್ಧತಿ ನಾಶವಾಗುವುದು ತುರ್ತಿನ ಅವಶ್ಯಕತೆ : ಡಾ.ರಾಜೇಂದ್ರ ಉಡುಪ

ಜಾಗತಿಕ ಮಟ್ಟದಲ್ಲಿ ಪರಿಸರ ಸಮಸ್ಯೆ ತೀರಾ ಉಲ್ಬಣಗೊಂಡಿದೆ.ಪರಿಸರ ನಾಶಕ್ಕೆ ಬಂಡವಾಳಶಾಹಿ ವ್ಯವಸ್ಥೆ ದೊಡ್ಡ ಕೊಡುಗೆ ನೀಡಿದೆ.ಜಗತ್ತಿಗೆ ದೊಡ್ಡಣ್ಣನೆಂದು ಕರೆಸಿಕೊಳ್ಳುವ ಅಮೆರಿಕ ಯುದ್ದ ಇಲ್ಲದೆ ಒಂದು ಕ್ಷಣವೂ ಬದುಕುವುದಿಲ್ಲ. ಅಮೆರಿಕದ ಮಿಲಿಟರಿ ವರ್ಷಕ್ಕೆ 2.5 ಬಿಲಿಯನ್ ಟನ್ ತೈಲ ಉಪಯೋಗಿಸುತ್ತಿದೆ.ಒಂದು ಯುದ್ದ ನೌಕೆ ಗಂಟೆಗೆ ಒಂದೂವರೆ ಲಕ್ಷ ಲೀಟರ್ ತೈಲ ಉಪಯೋಗಿಸಿದರೆ, ಯುದ್ದ ವಿಮಾನ ಗಂಟೆಗೆ ಅರ್ಧ ಲಕ್ಷ ಲೀಟರ್ ತೈಲ ಉಪಯೋಗಿಸುತ್ತದೆ. ಇವೆಲ್ಲಾವೂ ಅಸಂಖ್ಯಾತ

ಮೇಘರಾಜ್ ರವರ ಚಿಕಿತ್ಸೆಗೆ ಬಿಜೆಪಿ ಯುವಮೋರ್ಚ ಮಂಗಳೂರು ಉತ್ತರ ಮಂಡಲದಿಂದ ಸಹಾಯಹಸ್ತ

ಬಜರಂಗದಳ ಸುರತ್ಕಲ್ ಪ್ರಖಂಡದ ಕಾರ್ಯಕರ್ತ ಕಳವಾರು ನಿವಾಸಿ ಮೇಘರಾಜ್ ಅವರು ಅಪಘಾತದಿಂದ ತ್ರೀವ ಗಾಯಗೊಂಡು ಎ.ಜೆ ಅಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಾ ಇದ್ದಾರೆ. ಮೇಘರಾಜ್ ರವರ ಚಿಕಿತ್ಸೆಗೆ ಬಿಜೆಪಿ ಯುವಮೋರ್ಚ ಮಂಗಳೂರು ಉತ್ತರ ಮಂಡಲದಿಂದ ಕಾರ್ಯರ್ತರು ಹಾಗೂ ದಾನಿಗಳಿಂದ ಸಂಗ್ರಹಿಸಿದ 1,60,000 ರೂಪಾಯಿಗಳ ಚೆಕ್ ಅನ್ನು ಮಾನ್ಯ ಶಾಸಕರಾದ ಡಾ ಭರತ್ ಶೆಟ್ಟಿಯವರು, ಜಿಲ್ಲಾ ಬಿಜೆಪಿ ಅಧ್ಯಕ್ಷರಾದ ಸುದರ್ಶನ್ ಮೂಡಬಿದ್ರೆ, ಮಂಡಲ ಅಧ್ಯಕ್ಷರಾದ ತಿಲಕ್ ರಾಜ್