Home Blog Full WidthPage 195

ಉಪ್ಪುಂದ ಕರ್ಕಿಕಳಿ ದೋಣಿ ದುರಂತ ಪ್ರಕರಣ : ಘಟನಾ ಸ್ಥಳಕ್ಕೆ ಮೀನುಗಾರಿಕ ಸಚಿವರು, ಶಾಸಕರು ಭೇಟಿ

ಬೈಂದೂರು: ತಾಲೂಕಿನ ಉಪ್ಪುಂದ ಕರ್ಕಿಕಳಿ ಎಂಬಲ್ಲಿ ನಡೆದ ದೋಣಿ ದುರಂತ ಪ್ರದೇಶ ಹಾಗೂ ಮೃತ ಮೀನುಗಾರರ ಮನೆಗಳಿಗೆ ಸಚಿವ ಮಾಂಕಾಳ ವೈದ್ಯ ಮತ್ತು ಬೈಂದೂರು ಶಾಸಕ ಗುರುರಾಜ್ ಗಂಟಿಹೊಳೆ ಭೇಟಿ ನೀಡಿ ಸಾಂತ್ವಾನ ಹೇಳಿದರು. ಸಚಿವ ಮಾಂಕಾಳ ವೈದ್ಯ ಮಾತನಾಡಿ ದೋಣಿ ದುರಂತದ ಬಗ್ಗೆ ನೋವಿದೆ. ಮೀನುಗಾರ ಕುಟುಂಬಕ್ಕೆ 24 ಗಂಟೆಯೊಳಗೆ ಸಂಕಷ್ಟ ಪರಿಹಾರ ನಿಧಿ

ಮೂಡುಬಿದರೆಯಲ್ಲಿ ಬೀಡಿ ಕಾರ್ಮಿಕರಿಂದ ಪ್ರತಿಭಟನೆ

ಮೂಡುಬಿದಿರೆ: ಬೀಡಿ ಕಾರ್ಮಿಕರಿಗೆ 2015ರಿಂದ 2018ರ ತನಕ ಮೂರು ವರ್ಷಗಳ ಬಾಕಿ ಇರುವ ತುಟ್ಟಿ ಭತ್ತೆ ಮೊತ್ತವನ್ನು ನೀಡಲು ಒತ್ತಾಯಿಸಿ ಮತ್ತು 2018ರಿಂದ ಬೀಡಿ ಕಾರ್ಮಿಕರಿಗೆ ನೀಡಬೇಕಾದ ಕನಿಷ್ಟ ಕೂಲಿ ಪಾವತಿಗಾಗಿ ಆಗ್ರಹಿಸಿ ಮೂಡುಬಿದಿರೆ ಪ್ರದೇಶ ಬೀಡಿ ಕೆಲಸಗಾರರ ಸಂಘದ ವತಿಯಿಂದ ಸೌತ್ ಕೆನರಾ ಹೋಂ ಇಂಡಸ್ಟ್ರೀಸ್, ಮೂಡುಬಿದಿರೆ ಡಿಪೆÇೀ ಬಳಿ ಪ್ರತಿಭಟನೆ ನಡೆಸಿದರು. ಬೀಡಿ ಫೆಡರೇಶನ್ ನ ಜಿಲ್ಲಾಧ್ಯಕ್ಷ ವಸಂತ ಆಚಾರಿ ಪ್ತತಿಭಟನೆಯನ್ನುದ್ದೇಶಿಸಿ ಮಾತನಾಡಿ, ಬೀಡಿ

ಉಳ್ಳಾಲ: ನಿವೃತ್ತ ಯೋಧನಿಂದ ಮಹಿಳಾ ಪೇದೆಗೆ ಕಿರುಕುಳ

ಉಳ್ಳಾಲ: ಮಹಿಳಾ ಪೊಲೀಸ್ ಪೇದೆಗೆ ನಿವೃತ್ತ ಯೋಧನೋರ್ವ ಲೈಂಗಿಕ ಕಿರುಕುಳ ನೀಡಿರುವ ಘಟನೆ ಕುಂಪಲದ ಬಗಂಬಿಲ ಎಂಬಲ್ಲಿ ನಡೆದಿದೆ. ಕೊಲ್ಯ ಕನೀರುತೋಟ ನಿವಾಸಿ, ಸದ್ಯ ಕುಂಪಲ ಅಮೃತನಗರದಲ್ಲಿ ಬಾಡಿಗೆ ಮನೆಯಲ್ಲಿ ವಾಸಿಸುವ ಪ್ರಶಾಂತ್ (45) ಕಿರುಕುಳ ನೀಡಿದಾತ. ಠಾಣೆಯೊಂದರ ಮಹಿಳಾ ಪೇದೆ ಸ್ಕೂಟರಿನಲ್ಲಿ ಕರ್ತವ್ಯಕ್ಕೆ ತೆರಳುತ್ತಿದ್ದ ಸಂದರ್ಭ ಅಡ್ಡಗಟ್ಟಿದ ನಿವೃತ್ತ ಯೋಧ ಪ್ರಶಾಂತ್, ಆಕೆ ಮೈಮೇಲೆ ಕೈ ಹಾಕಿ ಲೈಂಗಿಕ ಕಿರುಕುಳ ನೀಡಿದ್ದಾನೆ. ತಕ್ಷಣ ಬೊಬ್ಬಿಟ್ಟಾಗ

ವಿಟ್ಲ: ಅಪ್ರಾಪ್ತ ದಲಿತ ಬಾಲಕಿಯ ಮೇಲೆ ಅತ್ಯಾಚಾರ ನಡೆಸಿದ ಪ್ರಕರಣದಲ್ಲಿ 5ನೇ ಆರೋಪಿಯ ಬಂಧನ

ವಿಟ್ಲ: ಅಪ್ರಾಪ್ತ ದಲಿತ ಬಾಲಕಿಯ ಮೇಲೆ ಅತ್ಯಾಚಾರ ನಡೆಸಿದ ಪ್ರಕರಣದಲ್ಲಿ 5ನೇ ಆರೋಪಿಯನ್ನು ವಿಟ್ಲ ಪೊಲೀಸರು ಮಂಗಳವಾರ ಬಂಧಿಸಿದ್ದಾರೆ. ಕೇರಳದ ಬಾಯಾರು ಬಳ್ಳೂರು ನಿವಾಸಿ ರಾಜ ಯಾನೆ ರಾಜೇಶ್(26) ಬಂಧಿತ ಆರೋಪಿಯಾಗಿದ್ದಾನೆ. ನೊಂದ ಯುವತಿ ಐದು ಮಂದಿಯ ಹೆಸರನ್ನು ಹೇಳಿದ್ದು, ಅಕ್ಷಯ್ ದೇವಾಡಿಗ, ಸುಕುಮಾರ ಬೆಳ್ಚಡ, ಜಯಪ್ರಕಾಶ್, ಮತ್ತು ಕಮಲಾಕ್ಷ ಎಂಬವರನ್ನು ಬಂಧಿಸಲಾಗಿತ್ತು. ತಲೆಮರೆಸಿಕೊಂಡಿದ್ದ ರಾಜನನ್ನು ಮಂಗಳವಾರ ಬಂಧಿಸಿದ್ದು, ಈ ಪ್ರಕರಣದಲ್ಲಿ ಒಟ್ಟು ಐದು

ಬೈಂದೂರು : ದೋಣಿ ಅವಘಡ, ಸತೀಶ್ ಖಾರ್ವಿ ಮೃತದೇಹ ಪತ್ತೆ

ಬೈಂದೂರು ವ್ಯಾಪ್ತಿಯ ಉಪ್ಪುಂದ ಸಮೀಪ ಸಾಂಪ್ರದಾಯಿಕ ಪಟ್ಟಿ ಬಲೆ ಮೀನುಗಾರಿಕಾ ದೋಣಿಯೊಂದು ಮುಳುಗಡೆಯಾಗಿ ನಾಪತ್ತೆಯಾಗಿರುವ ಮೀನುಗಾರರ ಪತ್ತೆಗೆ ಕಾರ್ಯಚರಣೆ ನಡೆದಿದ್ದು ನೀರು ಪಾಲಾಗಿದ್ದ ಇಬ್ಬರಲ್ಲಿ ಒಬ್ಬನ ಮೃತದೇಹ ಈಗಾಗಲೇ ಪತ್ತೆಯಾಗಿದೆ. ಸತೀಶ್ ಖಾರ್ವಿ ಎಂಬುವವರು ನಾಪತ್ತೆಯಾಗಿದ್ದು ನಿನ್ನ ರಾತ್ರಿ ಕೊಡೇರಿ ಬಂದರು ಸಿ ವಾಕ್ ಬಲಬದಿಯಲ್ಲಿ ಸತೀಶ್ ಕಾರ್ವಿ ಶವ ಪತ್ತೆಯಾಗಿದೆ.

ಬುಲ್ಲರ್ ಇಂಡಿಯಾ ಜೊತೆ ಆಳ್ವಾಸ್ ಇಂಜಿನಿಯರಿಂಗ್ ಕಾಲೇಜು ಒಪ್ಪಂದ

ಮೂಡುಬಿದಿರೆ: ಆಳ್ವಾಸ್ ಎಂಜಿನಿಯರಿಂಗ್ ಮತ್ತು ತಂತ್ರಜ್ಞಾನ ಕಾಲೇಜಿನ (ಎಐಇಟಿ) ಕೃಷಿ ಎಂಜಿನಿಯರಿಂಗ್ ವಿಭಾಗವು ಬೆಂಗಳೂರಿನ ಬುಲ್ಲರ್ ಇಂಡಿಯಾ ಕಂಪನಿ ಜೊತೆ ಒಡಂಬಡಿಕೆಗೆ ಸಹಿ ಹಾಕಿತು. ಬುಲ್ಲರ್ ಇಂಡಿಯಾ ಕಂಪೆನಿಯ ವ್ಯವಸ್ಥಾಪಕ ನಿರ್ದೇಶಕರಾದ ಪ್ರಶಾಂತ್ ಗೋಖಲೆ ಹಾಗೂ ಕಂಪೆನಿಯ ವೆಂಕಟೇಶ್ ಮತ್ತು ರವೀಂದ್ರ, ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ವ್ಯವಸ್ಥಾಪಕ ಟ್ರಸ್ಟಿ ವಿವೇಕ್ ಆಳ್ವ, ಕೃಷಿ ಎಂಜಿನಿಯರಿಂಗ್ ವಿಭಾಗದ ಮುಖ್ಯಸ್ಥ ಡಾ. ಶಶಿಕುಮಾರ್, ಮೆಕ್ಯಾನಿಕಲ್

ಉಜಿರೆ ಎಸ್.ಡಿ.ಎಂ. ಕಾಲೇಜಿನ ಉಪ ಪ್ರಾಂಶುಪಾಲ ಪ್ರೊ. ಶಾಂತಿಪ್ರಕಾಶ್ ಸೇವಾನಿವೃತ್ತಿ; ಸಮ್ಮಾನ

ಉಜಿರೆ, ಆ.1: ತಮ್ಮ ಸಮರ್ಪಣಾ ಭಾವದ ಮೂಲಕ ವೃತ್ತಿಯಲ್ಲಿ ವಿವಿಧ ಜವಾಬ್ದಾರಿಗಳನ್ನು ಯಶಸ್ವಿಯಾಗಿ ನಿರ್ವಹಿಸಿರುವ ಪ್ರೊ. ಶಾಂತಿಪ್ರಕಾಶ್ ಅವರು ಸಹೃದಯತೆ ಮೂಲಕ ಸಹೋದ್ಯೋಗಿಗಳ ಪ್ರೀತಿ ಗಳಿಸಿದ್ದಾರೆ. ಶಿಸ್ತು, ಪರಿಪೂರ್ಣತೆ ಮತ್ತು ಸಮರ್ಪಣೆ ಅವರ ಸ್ವಭಾವ ಎಂದು ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಶಿಕ್ಷಣ ಸಂಸ್ಥೆಗಳ ಕಾರ್ಯದರ್ಶಿ ಡಾ. ಸತೀಶ್ಚಂದ್ರ ಎಸ್. ಅಭಿಪ್ರಾಯಪಟ್ಟರು. ಇಲ್ಲಿನ ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಕಾಲೇಜಿನಲ್ಲಿ ಜು.31ರಂದು ಸೇವಾನಿವೃತ್ತಿ

ಉಡುಪಿ ಸೀರೆ ಪುನರುಜ್ಜೀವನಕ್ಕೆ ಅಡಿಕೆಯ ಸ್ಪರ್ಶ

ಕದಿಕೆ ಟ್ರಸ್ಟ್‌ನ ಮಾರ್ಗದರ್ಶನದಲ್ಲಿ ತಯಾರಾದ ಅಡಿಕೆ ಮತ್ತು ಇತರ ನೈರ್ಸಗಿಕ ಬಣ್ಣದ ಉಡುಪಿ ಸೀರೆಗಳನ್ನು ತಾಳಿಪಾಡಿ ನೇಕಾರರ ಸೊಸೈಟಿ ಕಿನ್ನಿಗೋಳಿಯಲ್ಲಿ ಬಿಡುಗಡೆ ಮಾಡಲಾಯಿತು. ೨೦೧೮ರಲ್ಲಿ ಉಡುಪಿ ಸೀರೆ ಪುನರುಜ್ಜೀವನವನ್ನು ಪ್ರಾರಂಭಿಸಿದ ಕದಿಕೆ ಟ್ರಸ್ಟ್, ಎನ್‌ಜಿಒ ಸಾಮಾಜಿಕ ಮಾಧ್ಯಮ ಪ್ರಚಾರ, ನಬಾರ್ಡ್ ಬೆಂಬಲದೊಂದಿಗೆ ತರಬೇತಿ ಮತ್ತು ಇತರ ಕ್ರಮಗಳಂತಹ ಬಹುಮುಖಿ ವಿಧಾನಗಳೊಂದಿಗೆ ಎರಡು ಜಿಲ್ಲೆಗಳಲ್ಲಿ ನೇಯ್ಗೆಯನ್ನು ಅಳಿವಿನಿಂದ ಮರಳಿ ತಂದಿದೆ. ಉಡುಪಿ

ಉಡುಪಿ ಹಾಸ್ಟೆಲ್‍ಗೆ ಸಿಎಂ ದಿಢೀರ್ ಭೇಟಿ

ಉಡುಪಿ ಜಿಲ್ಲೆಯ ಬನ್ನಂಜೆಯಲ್ಲಿರುವ ಸರ್ಕಾರಿ ಹಾಸ್ಟೆಲ್‍ಗೆ ಸಿಎಂ ದಿಢೀರ್ ಭೇಟಿ ನೀಡಿದ್ದು, ವಿದ್ಯಾರ್ಥಿನಿಯರ ಜೊತೆ ಸಿಎಂ ಮಾತುಕತೆ ನಡೆಸಿದ್ದಾರೆ. ಗೃಹಲಕ್ಷ್ಮೀ ಯೋಜನೆ ಬಗ್ಗೆ ವಿದ್ಯಾರ್ಥಿನಿಯರ ಜೊತೆ ಮಾತುಕತೆ ನಡೆಸಿದ ಸಿಎಂ, ‘ಈ ಯೋಜನೆಯಿಂದ ನಿಮಗೆ ಹಣ ಸಿಗುವುದಿಲ್ಲ, ಬದಲಾಗಿ ನಿಮ್ಮ ಅಮ್ಮನಿಗೆ ಹಣ ಸಿಗುತ್ತದೆ ಎಂದಿದ್ದಾರೆ. ಇದೇ ವೇಳೆ ‘ಡಿಗ್ರಿ ಪಾಸಾದ ಮೇಲೆ ನಿಮಗೆ ಕೆಲಸ ಸಿಗುವ ತನಕ ಯುವನಿಧಿ ನೀಡುತ್ತೇವೆ. ನಿಮ್ಮ ಭವಿಷ್ಯಕ್ಕೆ

ಬೈಂದೂರು : ದೋಣಿ ಅವಘಡದಲ್ಲಿ ನಾಪತ್ತೆಯಾದ ಯುವಕ : ಡ್ರೋನ್ ಮೂಲಕ ಶೋಧ ಕಾರ್ಯ

ಬೈಂದೂರು ವ್ಯಾಪ್ತಿಯ ಉಪ್ಪುಂದ ಸಮೀಪ ಸಾಂಪ್ರದಾಯಿಕ ಪಟ್ಟಿ ಬಲೆ ಮೀನುಗಾರಿಕಾ ದೋಣಿಯೊಂದು ಮುಳುಗಡೆಯಾಗಿ ನಾಪತ್ತೆಯಾಗಿರುವ ಮೀನುಗಾರನ ಪತ್ತೆಗೆ ಕಾರ್ಯಚರಣೆ ನಡೆಯುತ್ತಿದೆ. ನೀರು ಪಾಲಾಗಿದ್ದ ಇಬ್ಬರಲ್ಲಿ ಒಬ್ಬನ ಮೃತದೇಹ ಈಗಾಗಲೇ ಪತ್ತೆಯಾಗಿದೆ. ಇನ್ನೋರ್ವನಿಗಾಗಿ ಶೋಧ ಕಾರ್ಯ ನಡೆಯುತ್ತಿದೆ ಸತೀಶ್ ಕಾರ್ವಿ ಮೀನುಗಾರನ ಪತ್ತೆಯ ಬಗ್ಗೆ ಪೊಲೀಸ್ ಅಧೀಕ್ಷಕರು ಕರಾವಳಿ ಕಾವಲು ಪೊಲೀಸ್ ಮಲ್ಪೆ ಅವರ ಮಾರ್ಗದರ್ಶನದಲ್ಲಿ ಗಂಗೊಳ್ಳಿ ಕರಾವಳಿ ಕಾವಲು ಪೊಲೀಸ್ ಠಾಣೆಯ ಪಿ.ಐ