ಕಾರ್ಕಳ: ಬಸ್ ತಂಗುದಾಣದಲ್ಲಿ ಸತ್ತ ನಾಯಿಯ ದಫನ: ಸಾರ್ವಜನಿಕ ವಲಯದಲ್ಲಿ ವ್ಯಾಪಕ ಟೀಕೆ

ಕಾರ್ಕಳ : ಸಾರ್ವಜನಿಕ ಸ್ಥಳದಲ್ಲಿ ಇರುವ ಬಸ್ ತಂಗುದಾಣದಲ್ಲಿ ಬೀದಿನಾಯೊಂದು ಸತ್ತು ಬಿದ್ದಿದ್ದು ಅದನ್ನು ತೆರವುಗೊಳಿಸಲು ಮುಂದಾಗದ ನಂದಳಿಕೆ ಗ್ರಾಮ ಪಂಚಾಯತ್ ಒಂದು ಲೋಡ್ ಮಣ್ಣು ತಂದು ಅದರ ಮೇಲೆ‌ ಸುರಿದು ಘನಕಾರ್ಯ ನಡೆಸಿರುವ ಕುರಿತು ವ್ಯಾಪಕ ಟೀಕೆ ವ್ಯಕ್ತವಾಗಿದೆ.

ಸತ್ತ ನಾಯಿಯ ದಫನ ಕ್ರಿಯೆ‌ಮಾಡುವ ಮೂಲಕ ಸಾಂಕ್ರಾಮಿಕ ರೋಗ ಹರಡದಂತೆ ಮುನ್ನೆಚ್ಚರಿಕೆ ವಹಿಸಿಕೊಳ್ಳಲು ಸ್ಥಳೀಯಾಡಳಿ ಮುಂದಾಗಬೇಕಿತ್ತು. ಆದರೆ ನಂದಳಿಕೆ ಗ್ರಾಮ ಪಂಚಾಯತ್ ಆಡಳಿತ ವರ್ಗವು ತಂಗುದಾಣದಲ್ಲಿ ಸತ್ತು ಬಿದ್ದ ನಾಯಿಯ ಮೇಲೆ ಒಂದು ಲೋಡ್ ಮಣ್ಣು ತಂದು ಹಾಕಿರುವ ಮೂಲಕ ವಿಶಿಷ್ಠ‌ ರೀತಿಯಲ್ಲಿ ದಫನ‌ಕ್ರಿಯೆ ನಡೆಸಿರುವುದು ಕಂಡು ಬಂದಿದೆ.

ನಂದಳಿಕೆ ಗ್ರಾಮ ಪಂಚಾಯತ್ ಬೇಜಾವಾಬ್ದಾರಿಯೂ ಉಡುಪಿ‌ ಜಿಲ್ಲಾಡಳಿತ ಹಾಗೂ ಪ್ರಾಣಿ ದಯಾ‌ಸಂಘದ ಕೆಂಗಣ್ಣಿಗೆ ಗುರಿಯಾಗಲಿದೆಯೇ ಎಂದು ಕಾದುನೋಡಬೇಕಷ್ಟೇ!ಮಣ್ಣು ತಂದು ಹಾಕಿರುವ ಕುರಿತು ಗ್ರಾಮಪಂಚಾಯತ್ ಭರಿಸಿದ ವೆಚ್ಚವನ್ನು ಯಾವುದರಲ್ಲಿ ದಾಖಲಿಸಲಾಗುತ್ತದೆ ಎಂಬುವುದೇ ಯಕ್ಚ ಪ್ರಶ್ನೆಯಾಗಿ ಉಳಿದಿದೆ.

Related Posts

Leave a Reply

Your email address will not be published.