ಕೇಂದ್ರದಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ ದೇಶಕ್ಕೆ ಗ್ಯಾರಂಟಿ ಯೋಜನೆ ವಿಸ್ತರಣೆ : ಪದ್ಮಪ್ರಸಾದ್ ಜೈನ್

ಮೂಡುಬಿದಿರೆ: 2004 ರ ಲೋಕಸಭಾ ಚುನಾವಣೆಯಲ್ಲಿ ಯಾವ ಫಲಿತಾಂಶ ಕಾಂಗ್ರೆಸ್ ಗೆ ಸಿಕ್ಕಿತ್ತೋ ಅದೇ ರೀತಿಯ ಫಲಿತಾಂಶ ಈಬಾರಿ ಕಾಂಗ್ರೆಸ್ ನೇತೃತ್ವದ ಐ.ಎನ್.ಡಿ.ಐ.ಎ ಗೆ ಸಿಗಲಿದ್ದು ಸ್ಪಷ್ಟ ಬಹುಮತದೊಂದಿಗೆ ಕೇಂದ್ರದಲ್ಲಿ ಅಧಿಕಾರಕ್ಕೆ ಬಂದರೆ ರಾಜ್ಯದಲ್ಲಿ ಅನುಷ್ಠಾನ ಮಾಡಿರುವ ಎಲ್ಲ ಗ್ಯಾರಂಟಿಗಳನ್ನು ದೇಶದಲ್ಲಿ ಅನುಷ್ಠಾನ ಮಾಡಲಾಗುವುದು ಎಂದು ತರಲಾಗುವುದೆಂದು ಕೆಪಿಸಿಸಿ ರಾಜ್ಯ ವಕ್ತಾರ ಪದ್ಮಪ್ರಸಾದ್ ಜೈನ್ ಅಭಿಪ್ರಾಯ ವ್ಯಕ್ತಪಡಿಸಿದರು.

ಅವರು ಮಂಗಳವಾರ ಮೂಡುಬಿದಿರೆ ಪ್ರೆಸ್ ಕ್ಲಬ್ ನಲ್ಲಿ ಪತ್ರಿಕಾಗೋಷ್ಠಿ ನಡೆಸಿ ಮಾಹಿತಿ ನೀಡಿದರು.
ಎಲ್ಲಾ ವಿಷಯಗಳಲ್ಲಿ ಪರಿಣತಿ ಹೊಂದಿ ಜಿಲ್ಲೆಯನ್ನು ಸಮಗ್ರ ಅಭಿವೃದ್ಧಿಯತ್ತ ಕೊಂಡೊಯ್ಯಬಲ್ಲ ಸಮರ್ಥ ನಾಯಕ ಪದ್ಮರಾಜ್ ಅವರು ಈ ಬಾರಿ ಜಯಗಳಿಸುವುದರಲ್ಲಿ ಯಾವುದೇ ಸಂದೇಹವಿಲ್ಲ.
ಕೇಂದ್ರದ ಬಿಜೆಪಿ ನೇತೃತ್ವದ ಸರಕಾರವು ಕರ್ನಾಟಕ ರಾಜ್ಯಕ್ಕೆ ಯಾವುದೇ ಬರ, ನೆರೆ ಪರಿಹಾರ ಕೊಡದೆ ತಾರತಮ್ಯ ಮಾಡಿದೆ, ಹಲವು ಭರವಸೆಗಳನ್ನು ನೀಡಿದ್ದರೂ ಕೊನೆಗೆ ರಾಜ್ಯಕ್ಕೆ ಸಿಕ್ಕಿರುವುದು “ಚೊಂಬು” ಮಾತ್ರ ಈ ಜಿಲ್ಲೆಗೂ ನಂಬರ್ ಒನ್ ಸಂಸದ ಎಂದು ಕರೆಸಿಕೊಂಡ ನಳಿನ್ ಕುಮಾರ್ ಕಟೀಲ್ ಅವರಿಂದ ಸಿಕ್ಕಿರುವುದೂ ಖಾಲಿ ಚೊಂಬು ಎಂದು ಚೊಂಬು ತೋರಿಸಿದರು.

ಕಾಂಗ್ರೆಸ್ ಡೇಂಜರ್ ಎಂದು ಬಿಜೆಪಿಯವರು ಪ್ರಚಾರ ಮಾಡುತ್ತಿದ್ದಾರೆ, ಕಾಂಗ್ರೆಸ್ ಯಾವತ್ತೂ ಈ ದೇಶದ ಜನತೆಗೆ ಡೇಂಜರ್ ಅಂತ ಅನಿಸಿದ್ದೂ ಇಲ್ಲ, ಅನಿಸುವುದೂ ಇಲ್ಲ, ಸಂವಿಧಾನಕ್ಕೆ ಧಕ್ಕೆ ತರುವವರು, ಮಹಿಳೆಯರಿಗೆ ರಕ್ಷಣೆ ನೀಡಲಾಗದವರೇ ನಿಜವಾದ ಡೇಂಜರ್ ಎಂದರು.
ಜಿಲ್ಲೆಯ ಇತಿಹಾಸ ಗಮನಿಸಿದರೆ ಕಾಂಗ್ರೆಸ್ ನ ಸಂಸದರಿರುವಾಗಲೇ ಹೆಚ್ಚು ಅಭಿವೃದ್ಧಿ ಕೆಲಸಗಳಾಗಿದ್ದು, ಉದ್ಯಮಗಳು, ಕೈಗಾರಿಕೆಗಳು, ದೊಡ್ಡ ಯೋಜನೆಗಳೆಲ್ಲಾ ಕಾಂಗ್ರೆಸ್ ಅವಧಿಯಲ್ಲೇ ಆಗಿದ್ದು,ಈ ಭಾಗದವರಿಗೆ ಉದ್ಯೋಗ ಸಿಕ್ಕಿರುವುದೂ ಕಾಂಗ್ರೆಸ್ ಅವಧಿಯಲ್ಲೇ, ಕಳೆದ ಮೂವತ್ತ ಮೂರು ವರ್ಷಗಳಲ್ಲಿ ಬಿಜೆಪಿ ಸಂಸದರ ಕೊಡುಗೆ ಏನಿದೆ? ಸಂಸದರಾಗಿ ಆಯ್ಕೆಯಾದವರೆಲ್ಲಾ ಯಾವ ಕೊಡುಗೆ ನೀಡಿದ್ದಾರೆ ಎಂದು ಪ್ರಶ್ನಿಸಿದ ಅವರು, ನಂಬರ್ ಒನ್ ಸಂಸದ ಎಂದು ಕರೆಸಿಕೊಂಡಿದ್ದ ನಳಿನ್ ಗೆ ಯಾಕೆ ಈಬಾರಿ ಟಿಕೆಟ್ ನಿರಾಕರಿಸಲಾಯಿತು? ಅವರು ನಂಬರ್ ಒನ್ ಅಲ್ಲ ಶೂನ್ಯ ಸಾಧನೆಯ ಸಂಸದ ಎಂದರು.

ಕೆಪಿಸಿಸಿ ಸಂಯೋಜಕ ಆಲ್ವೀನ್ ಡಿಸೋಜ ಪತ್ರಿಕಾಗೋಷ್ಠಿಯಲ್ಲಿ ಉಪಸ್ಥಿತರಿದ್ದರು.


Related Posts

Leave a Reply

Your email address will not be published.