ಫೆ. 17 : ಸಾಮೂಹಿಕ ರಕ್ತದಾನ ಶಿಬಿರ

ಬಹರೈನ್; ರಕ್ತ ದಾನ ಜಗತ್ತಿನಲ್ಲಿಯೇ ಶ್ರೇಷ್ಠ ದಾನ . ನಾವು ನೀಡುವ ಪ್ರತಿ ಹನಿ ರಕ್ತ ಕೂಡ ಅದೆಷ್ಟೋ ಜೀವಗಳ ಮರುಹುಟ್ಟಿಗೆ ಕಾರಣವಾಗಬಲ್ಲುದು ಈ ರಕ್ತದಾನದ ಮಹತ್ವವನ್ನು ಅರಿತಿರುವ ಪಟ್ಲಾ ಪೌಂಡೇಶನ್ ನ ಬಹರೈನ್ ಸೌದಿ ಘಟಕವು ಇದೆ ಫೆಬ್ರವರಿ 17ರಂದು ಸಲ್ಮಾನಿಯ ಆಸ್ಪತ್ರೆಯ ರಕ್ತ ಕೇಂದ್ರದಲ್ಲಿ ಸಾಮೂಹಿಕ ರಕ್ತ ದಾನ ಶಿಬಿರವನ್ನು ಆಯೋಜಿಸಿದೆ .

ಖ್ಯಾತ ಭಾಗವತರಾದ ಯಕ್ಷ ಧ್ರುವ ಪಟ್ಲಾ ಸತೀಶ್ ರವರ ಸಾರಥ್ಯದಲ್ಲಿ ಅಶಕ್ತ ಕಲಾವಿದರ ನೆರವಿಗಾಗಿ ಅಸ್ತಿತ್ವಕ್ಕೆ ಬಂದಿರುವ ಪಟ್ಲಾ ಪೌಂಡೇಶನ್ ದೇಶ ವಿದೇಶಗಳಲ್ಲಿ ಸುಮಾರು 40ಕ್ಕೂ ಹೆಚ್ಚು ಶಾಖೆಗಳನ್ನು ಹೊಂದಿದ್ದು ಕಲಾವಿದರ ಕಲ್ಯಾಣಕ್ಕಾಗಿ ಅನೇಕ ಯೋಜನೆಗಳನ್ನು ಯಶಸ್ವಿಯಾಗಿ ಅನುಷ್ಠಾನಕ್ಕೆ ತಂದು ತನ್ನ ಮೂಲಕ ಸಾವಿರಾರು ಕಲಾವಿದರಿಗೆ ದಾರಿ ದೀಪವಾಗಿದೆ . ಇದೀಗ ಪಟ್ಲಾ ಪೌಂಡೇಶನ್ ನ ಬಹರೈನ್ ಸೌದಿ ಘಟಕವು ಸಾಮೂಹಿಕ ರಕ್ತ ದಾನ ಶಿಬಿರವನ್ನು ಆಯೋಜಿಸುವ ಮೂಲಕ ದ್ವೀಪದಲ್ಲಿ ಹೊಸತೊಂದು ಸಮಾಜಮುಖಿ ಕಾರ್ಯಕ್ರಮಕ್ಕೆ ಮುನ್ನುಡಿ ಬರೆಯಲು ಮುಂದಾಗಿದೆ . ಈ ರಕ್ತದಾನ ಶಿಬಿರದಲ್ಲಿ ಪಾಲ್ಗೊಂಡು ರಕ್ತ ದಾನ ಮಾಡಲು ಇದಾಗಲೇ ನೂರಾರು ದಾನಿಗಳು ತಮ್ಮ ಹೆಸರುಗಳನ್ನು ನೋಂದಾಯಿಸಿದ್ದಾರೆ . ಬೆಳಗ್ಗೆ ಏಳೂವರೆ ಘಂಟೆಯಿಂದ ಅಪರಾಹ್ನ ಹನ್ನೆರಡು ಘಂಟೆಯವರೆಗೆ ರಕ್ತ ದಾನ ಮಾಡಲು ಅವಕಾಶವಿದ್ದು ರಕ್ತ ದಾನ ಶಿಬಿರಿದ ಬಗೆಗಿನ ಹೆಚ್ಚಿನ ಮಾಹಿತಿಗಾಗಿ ಪಟ್ಲ ಪೌಂಡೇಶನ್ ನ ಬಹರೈನ್ ಸೌದಿ ಘಟಕದ ಅಧ್ಯಕ್ಷರಾದ ರಾಜೇಶ್ ಶೆಟ್ಟಿ ಅವರ ದೂರವಾಣಿ ಸಂಖ್ಯೆ 38902807 ಮೂಲಕ ಸಂಪರ್ಕಿಸಬಹುದು

Related Posts

Leave a Reply

Your email address will not be published.