ಬ್ರಹ್ಮಾವರ :ವಿದ್ಯಾಲಕ್ಷ್ಮೀ ಪ್ರೀಮಿಯರ್ ಲೀಗ್ ಕ್ರಿಕೆಟ್ ಮ್ಯಾಚ್

ಬ್ರಹ್ಮಾವರ : ವಿದ್ಯಾಲಕ್ಷ್ಮೀ ಸಮೂಹ ಶಿಕ್ಷಣ ಸಂಸ್ಥೆ ಬ್ರಹ್ಮಾವರ ಇಲ್ಲಿ VPL ಕ್ರಿಕೆಟ್ ಮ್ಯಾಚ್ ಗಾಂಧಿ ಮೈದಾನ ಬ್ರಹ್ಮಾವರ ಇಲ್ಲಿ ಜರುಗಿತು.
ವಿದ್ಯಾರ್ಥಿಗಳಿಗೆ ಶಿಕ್ಷಣದೊಂದಿಗೆ ಮಾನಸಿಕ, ದೈಹಿಕ ಆರೋಗ್ಯ ಉತ್ತಮವಾದ ಮನಸ್ಥಿತಿ ಹೊಂದಿರುವಲ್ಲಿ ಕ್ರೀಡೆಯು ಮುಖ್ಯವಾಗಿದೆ ಎನ್ನುವ ದೃಷ್ಟಿಕೋನವನ್ನು ಹೊಂದಿರುವ ವಿದ್ಯಾಲಕ್ಷ್ಮಿ ಸಮೂಹ ಶಿಕ್ಷಣ ಸಂಸ್ಥೆ ಬ್ರಹ್ಮಾವರ ಇಲ್ಲಿನ ವಿದ್ಯಾರ್ಥಿಗಳು ಆರು ತಂಡವನ್ನು ರಚಿಸಿ ವಿದ್ಯಾಲಕ್ಷ್ಮಿ ಪ್ರೀಮಿಯರ್ ಲೀಗ್ ಕ್ರಿಕೆಟ್ ಮ್ಯಾಚ್ ನ್ನು ನಡೆಸಲಾಯಿತು. ವಿದ್ಯಾರ್ಥಿಗಳು ಉತ್ತಮವಾದ ಆಟವನ್ನು ಪ್ರದರ್ಶಿಸಿದರು .

ಆ್ಯಟಾಕರ್ಸ್ ತಂಡ ನಾಯಕ ಗೌಸ್ ವಿನ್ನರ್ ಆಗಿ ಪ್ರಶಸ್ತಿ ಪಡೆದುಕೊಂಡರೆ, ರನ್ನರ್ ರಾಗಿ ಬ್ಲಾಕ್ ಬುಲ್ಸ್ ತಂಡ ನಾಯಕ ಭರತ್ ಪಾಟೇಲ್ ಪ್ರಶಸ್ತಿಯನ್ನು ಪಡೆದರು. ಇಲ್ಲಿನ ಸಂಸ್ಥಾಪಕರಾದ ಶ್ರೀ ಸುಬ್ರಹ್ಮಣ್ಯ ಹಾಗೂ ನಿರ್ದೇಶಕಿಯಾದ ಶೀಮತಿ ಮಮತಾ ,ಉಪಪ್ರಾಂಶುಪಾಲೆ ಶ್ರೀಮತಿ ಸುಜಾತ ಹಾಗೂ ಕ್ರೀಡಾ ಸಂಯೋಜಕರಾದ ಶ್ರೀ ನಿತಿನ್ ಶೆಣೈ ಮತ್ತು ಶ್ರೀ ಮನೋಜ್ ಕುಮಾರ್ , ಉಪನ್ಯಾಸಕರು ಹಾಗೂ ಉಪನ್ಯಾಸಕೇತರರು ಮತ್ತು ವಿದ್ಯಾರ್ಥಿ ವೃಂದದವರು ಉಪಸ್ಥಿತರಿದ್ದರು.
