HomeFresh Newsಬ್ರಹ್ಮಾವರ : ವಿದ್ಯಾಲಕ್ಷ್ಮೀ ಸಮೂಹ ಶಿಕ್ಷಣ ಸಂಸ್ಥೆ ಬ್ರಹ್ಮಾವರ ಕ್ರೀಡಾ ವಾರ್ಷಿಕೋತ್ಸವ 2023-24

ಬ್ರಹ್ಮಾವರ : ವಿದ್ಯಾಲಕ್ಷ್ಮೀ ಸಮೂಹ ಶಿಕ್ಷಣ ಸಂಸ್ಥೆ ಬ್ರಹ್ಮಾವರ ಕ್ರೀಡಾ ವಾರ್ಷಿಕೋತ್ಸವ 2023-24

ಬ್ರಹ್ಮಾವರ : “ಕ್ರೀಡೆಗಳಿಂದ ಕೇವಲ ಮನೋರಂಜನೆ ಮಾತ್ರ ದೊರೆಯಲಾರದು ಅವುಗಳಿಂದ ದೈಹಿಕ ಶಕ್ತಿ, ಮಾನಸಿಕ ಶಾಂತಿ ,ವೃದ್ಧಿಯಾಗುವುದು” ಎಂಬ ಉದ್ದೇಶ ಹೊಂದಿರುವ ವಿದ್ಯಾಲಕ್ಷ್ಮೀ ಸಮೂಹ ಶಿಕ್ಷಣ ಸಂಸ್ಥೆ ಬ್ರಹ್ಮಾವರ ಇಲ್ಲಿನ ವಾರ್ಷಿಕ ಕ್ರೀಡೋತ್ಸವ ಮಹಾತ್ಮ ಗಾಂಧಿ ಮೈದಾನ ಅಜ್ಜರಕಾಡು ಇಲ್ಲಿ ಜರುಗಿತು.
ಕ್ರೀಡೋತ್ಸವಕ್ಕೆ ಅತಿಥಿಗಳಾಗಿ ಶ್ರೀ ಸಂತೋಷ್ ಪ್ರಾಂಶುಪಾಲರು ಜ್ಞಾನಸುಧಾ ಪದವಿಪೂರ್ವ ಕಾಲೇಜು ಉಡುಪಿ ಇವರು ವಿದ್ಯಾರ್ಥಿಗಳಿಗೆ ” ವಿದ್ಯೆ ಎಂಬುವುದು ಅಮೂಲ್ಯವಾದ ಸಂಪತ್ತು ಸರಿಯಾದ ಸಮಯಕ್ಕೆ, ಸರಿಯಾದ ಮಾದರಿಯಲ್ಲಿ ಪಡೆದುಕೊಂಡು ಉತ್ತಮವಾದ ಜ್ಞಾನವನ್ನು ಪಡೆದುಕೊಳ್ಳಬೇಕೆಂದು ತಿಳಿಸಿದರು. ವಿದ್ಯಾಲಕ್ಷ್ಮೀ ಸಮೂಹ ಶಿಕ್ಷಣ ಸಂಸ್ಥೆ ಬ್ರಹ್ಮಾವರ ಇಲ್ಲಿನ ಸಂಸ್ಥಾಪಕರಾದ ಶ್ರೀ ಸುಬ್ರಹ್ಮಣ್ಯ ಹಾಗೂ ನಿರ್ದೇಶಕಿಯಾದ ಶೀಮತಿ ಮಮತಾ ವಿದ್ಯಾರ್ಥಿಗಳಿಗೆ ಹಿತನುಡಿಗಳನ್ನು ನೀಡಿದರು.ಉಪಪ್ರಾಂಶುಪಾಲೆ ಶ್ರೀಮತಿ ಸುಜಾತ ಹಾಗೂ ಕ್ರೀಡಾ ಸಂಯೋಜಕರಾದ ಶ್ರೀ ನಿತಿನ್ ಶೆಣೈ ಮತ್ತು ಶ್ರೀ ಮನೋಜ್ ಕುಮಾರ್ , ಉಪನ್ಯಾಸಕರು ಹಾಗೂ ಉಪನ್ಯಾಸಕೇತರರು ಮತ್ತು ವಿದ್ಯಾರ್ಥಿ ವೃಂದದವರು ಉಪಸ್ಥಿತರಿದ್ದರು. ಕನ್ನಡ ವಿಭಾಗದ ಉಪನ್ಯಾಸಕಿ ಶ್ರೀಮತಿ ಅನುಪಮ ಭಟ್ ವಂದಿಸಿದರು, ವಾಣಿಜ್ಯ ವಿಭಾಗದ ಉಪನ್ಯಾಸಕಿ ಕುಮಾರಿ ಸ್ವಾತಿ ಕಾರ್ಯಕ್ರಮವನ್ನು ನಿರೂಪಿಸಿದರು.

RELATED ARTICLES

LEAVE A REPLY

Please enter your comment!
Please enter your name here

Most Popular

Recent Comments