ಬೈಂದೂರು : ಅಜ್ಜಿಗೆ ಆಸರೆಯಾದ ಯುವಕರ ತಂಡ
ಬೈಂದೂರು ತಾಲೂಕಿನ ನಾಡ ಗ್ರಾ.ಪಂ ವ್ಯಾಪ್ತಿಯ ತೆಂಕಬೈಲು ಗೋಳಿಹಕ್ಲು 5 ಸೆಂಟ್ಸ್ ಕಾಲೊನಿಯಲ್ಲಿ ಶಿಥಿಲಾವಸ್ಥೆಯಲ್ಲಿರುವ ಗುಡಿಸಲಿನಲ್ಲಿ ಒಂಟಿಯಾಗಿ ವಾಸಿಸುತ್ತಿದ್ದ ಚಂದು ಪೂಜಾರ್ತಿ ಎಂಬವರಿಗೆ ಸಮಾನ ಮನಸ್ಥಿತಿ ಯವಕರ ವಾಟ್ಸಾಪ್ ಗ್ರೂಪ್ ಹಾಗೂ ಲಯನ್ಸ್ ಕ್ಲಬ್ ನಾವುಂದ, ಗ್ರಾಮ ಪಂಚಾಯತ್ ನಾಡ, ಮತ್ತು ಪತ್ರಕರ್ತ ಮಿತ್ರರು ಸುಸಜ್ಜಿತವಾದ ಮನೆಯನ್ನು ನಿರ್ಮಿಸಿ ಕೊಟ್ಟರು.
ಬಂಧುಗಳಿಲ್ಲದೆ ತಟ್ಟಿಯಲ್ಲಿ ಬದುಕನ್ನು ಸಾಗಿಸುತ್ತಿದ್ದ ಚೆಂದು ಅಜ್ಜಿಯ ಸಂಕಷ್ಟದ ಬದುಕಿನ ಬಗ್ಗೆ 2022ರ ಸೆ.10ರಂದು ವಿ4 ನ್ಯೂಸ್ ವಿಶೇಷ ವರದಿ ಮೂಲಕ ಇಂದು ಅಜ್ಜಿ ಬದುಕಿಗೆ ಬೆಳಕು ಚೆಲ್ಲಿತ್ತು.
ಚೆಂದು ಅಜ್ಜಿಗೆ ಮಕ್ಕಳಿಲ್ಲ, ಪತಿ ನಿಧನರಾಗಿ 30ಕ್ಕೂ ಹೆಚ್ಚು ವರ್ಷ ಕಳೆದಿದೆ. ಬಂಧುಗಳು ಅಜ್ಜಿಯನ್ನು ತೊರೆದಿದ್ದರಿಂದ ಒಂಟಿಯಾಗಿ ಗುಡಿಸಲಿನಲ್ಲಿ ಮಣ್ಣಿನ ಮನೆಯಲ್ಲಿ ವಾಸ ಮಾಡುತ್ತಿದ್ದರು. ಆದರೆ ಆ ಮಣ್ಣಿನ ಮನೆ ಮಳೆ ಗಾಲದಲ್ಲಿ ಕುಸಿಯುವ ಪರಿಸ್ಥಿಯಲ್ಲಿತ್ತು. ಅಜ್ಜಿಯ ಮನೆಯ ದುಃಸ್ಥಿತಿ ಅರಿತ ಸ್ಥಳೀಯ ಸಮಾನ ಮನಸ್ಕ ಯುವಕರು ‘ಅಜ್ಜಿ ಮನೆ ಕನಸು ನನಸು ಮಾಡೋಣ’ ಎನ್ನುವ ವಾಟ್ಸಾಪ್ ಗ್ರೂಪ್ ರಚಿಸಿ ದಾನಿಗಳು, ಸ್ನೇಹಿತರು, ಲಯನ್ಸ್ ಕಬ್ ನಾವುಂದ ಸದಸ್ಯರನ್ನು ಸೇರಿಸಿ ಮನೆ ನಿರ್ಮಿಸಲು ನೆರವನು ಯಾಚಿಸಿದರು.
ಕೆಲವೇ ತಿಂಗಳ ನಂತರ ಸುಂದರವಾರ ಹೆಂಚಿನ ಮನೆ ತಲೆ ಎತ್ತಿ ನಿಂತಿದ್ದು, ಅಜ್ಜಿಯ ಮೊಗದಲ್ಲಿ ಮಂದಹಾಸ ಮೂಡಿದೆ. ಇಳಿ ವಯಸ್ಸಿನಲ್ಲಿ ಅಜ್ಜಿ ನೆಮ್ಮದಿಯ ಬದುಕನ್ನು ಕಾಣುವಂತಾಗಲಿ ಎಂದು ಯವಕರ ತಂಡ ಮನೆ ನಿರ್ಮಾಣಕ್ಕೆ ಕೈ ಹಾಕಿ ಯಶಸ್ಸು ಸಾಧಿಸಿದ್ದಾರೆ. ಯುವಕರ ಪ್ರಯತ್ನಕ್ಕೆ ಲಯನ್ಸ್ ಕ್ಲಬ್ ನಾವುಂದ ಸ್ಥಳೀಯ ಗ್ರಾ.ಪಂ ಅನುದಾನ ಬಿಡುಗಡೆ ಮಾಡಿ ಸಹಕರಿಸಿದೆ.ಈ ಮನೆಯ ಇದೆ ತಿಂಗಳು 13 ಮತ್ತು 14ಕ್ಕೆ ಅಜ್ಜಿ ಮನೆ ಗ್ರಹಪ್ರವೇಶ ಹಾಗೂ ಮನೆ ಹಸ್ತಾಂತರ ಕಾರ್ಯಕ್ರಮ ನಡೆಯಲಿದೆ ಹೆಚ್ಚಿನ ಸಂಖ್ಯೆಯಲಿ ಆಗಮಿಸಬೇಕಾಗಿ ಈ ಮೂಲಕ ವಿನಂತಿಸಿಕೊಳ್ಳುತ್ತೇವೆ.