ಕಾಪು ಮಾರಿಯಮ್ಮ – ತಾತ್ಕಾಲಿಕ ನೂತನ ಗರ್ಭಗುಡಿಗೆ ಸ್ಥಳಾಂತರ
ಕಾಪುವಿನ ಪ್ರಸಿದ್ಧ ಧಾರ್ಮಿಕ ಕೇಂದ್ರಗಳಲ್ಲಿ ಒಂದಾದ ಮೂರು ಮಾರಿಗುಡಿ ದೇವಸ್ಥಾನಗಳ ಪೈಕಿ ಹೊಸ ಮಾರಿಗುಡಿ ದೇವಸ್ಥಾನ ಇದೀಗ ಜೀರ್ಣೋದ್ಧಾರ ಪ್ರಕೃಯೆ ಬಹಳ ವೇಗವಾಗಿ ನಡೆಯುತ್ತಿದ್ದು, ಹಳೆಯ ಗುಡಿಯಲ್ಲಿ ಪ್ರತಿಷ್ಠೆಗೊಂಡಿರುವ ಮಾರಿಯಮ್ಮನನ್ನು ತಾತ್ಕಾಲಿಕ ನೂತನ ಗುಡಿಗೆ ಸ್ಥಳಾಂತರಿಸಲು ಬೇಕಾದ ಎಲ್ಲಾ ಧಾರ್ಮಿಕ ವಿಧಿ ವಿಧಾನಗಳು ನಡೆಯುತ್ತಿದೆ.
ಈ ಬಗ್ಗೆ ಮಾತನಾಡಿದ ಶ್ರೀ ಕ್ಷೇತ್ರದ ಜೀರ್ಣೋದ್ಧಾರ ಸಮಿತಿಯ ಅಧ್ಯಕ್ಷ ಕೆ. ವಾಸುದೇವ ಶೆಟ್ಟಿ ಕಾಪು ಮಾತನಾಡಿ, ಬಹಳಷ್ಟು ದೇಶವಿದೇಶಗಳಲ್ಲೂ ಭಕ್ತರನ್ನು ಹೊಂದಿರುವ ಪ್ರಸಿದ್ಧ ಪ್ರತಿಷ್ಠಿತ ಕಾರ್ಣೀಕ ಕ್ಷೇತ್ರ ಕಾಪು ಹೊಸ ಮಾರಿಯಮ್ಮ ಸನ್ನಿಧಿ, ಈ ಸನ್ನಿಧಿಯ ಜೀರ್ಣೋದ್ಧಾರವನ್ನು ಸರ್ವ ಭಗತ್ ಭಕ್ತರ ಆಶಯದಂತೆ ಆರಂಭಿಕ ಹಂತದ ಕಾಮಗಾರಿಯು ಸುಮಾರು 30ಕೋಟಿ ವೆಚ್ಚದಲ್ಲಿ ನಡೆಯುತ್ತಿದ್ದು, ಈ ಅಮ್ಮನ ದೇಗುಲ ನಿರ್ಮಾಣಕ್ಕೆ ಭಕ್ತಾಧಿಗಳಿಂದ ಸೇವಾ ರೂಪದಲ್ಲಿ ಹೊಂದಿಕೆಯಾಗುತ್ತಿದ್ದು, ಎಲ್ಲಾ ಭಕ್ತರಿಗೂ ಅಮ್ಮನ ಈ ಪುಣ್ಯ ಕಾರ್ಯದಲ್ಲಿ ಬಾಗಿಯಾಗುವ ಅವಕಾಶಗಳಿದ್ದು, ಶಿಲಾ ಸೇವೆ ನೀಡುವ ಮೂಲಕ. ಅಮ್ಮನ ದೇಗುಲ ಜೀರ್ಣೋದ್ಧಾರ ಪ್ರಕ್ರಿಯೆಗೆ ತಮ್ಮ ಪಾಲಿನ ಸೇವೆ ಸಲ್ಲಿಸಿ ತಮ್ಮ ಇಷ್ಟಾರ್ಥ ಸಿದ್ಧಿಸಿಕೊಳ್ಳುವ ಸುವರ್ಣ ಅವಕಾಶ ನಮ್ಮ ಪಾಲಿಗೆ ಪ್ರಾಪ್ತಿಯಾಗಿದೆ ಎಂದರು. ಈ ದಿನ ದೇವಳದಲ್ಲಿ ನವಗ್ರಹ ಹೋಮ ಹಾಗೂ ಮೃತ್ಯುಂಜಯ ಹೋಮ ನಡೆಯುತ್ತಿದ್ದು, ನಾಳಿನ ದಿನ ಚಂಡಿಕಾಯಾಗ ನಡೆಯಲಿದ್ದು, ಅಮ್ಮ ಭಕ್ತರೆಲ್ಲಾರೂ ಈ ಪುಣ್ಯ ಕಾರ್ಯದಲ್ಲಿ ಪಾಲ್ಗೊಳ್ಳುವಂತೆ ವಿನಂತಿಸಿದ್ದಾರೆ.