Home ಕರಾವಳಿ Archive by category ಉಡುಪಿ (Page 3)

ಎರ್ಮಾಳ್: ಸೂಚನಾ ಫಲಕಕ್ಕೆ ಬುಲೆಟ್  ಬೈಕ್  ಡಿಕ್ಕಿ : ಸವಾರರಿಬ್ಬರಿಗೆ ಗಂಭೀರ ಗಾಯ

 ಅತೀ ವೇಗವಾಗಿ ಬಂದ ಬುಲೆಟ್ ಎರ್ಮಾಳು ಸಿಎ ಬ್ಯಾಂಕ್ ಮುಂಭಾಗ ರಸ್ತೆಯಂಚಿನ ಉಕ್ಕಿನ ಸೂಚನಾ ಫಲಕಕ್ಕೆ ಡಿಕ್ಕಿಯಾಗಿ ಬೈಕ್ ಸವಾರರು ರಸ್ತೆಗೆ ಎಸೆಯಲ್ಪಟ್ಟು ಗಂಭೀರ ಗಾಯಗೊಂಡಿದ್ದಾರೆ. ಗಾಯಗೊಂಡವರು ಮಂಡ್ಯ ಪಾಂಡವಪುರ ನಿವಾಸಿಗಳಾಗದ ನೂತನ್ (24) ಹಾಗೂ ಸಹ ಸವಾರ ಸೃಜನ್(23) ಎಂದು ತಿಳಿದು ಬಂದಿದೆ. ಇವರು ಬೆಂಗಳೂರಿನ ಬಿಡದಿಯ ಕಂಪನಿಯೊಂದರಲ್ಲಿ ಕೆಲಸ

ಶಿರೂರು : ಟೂರಿಸ್ಟ್ ಕಾರಿನಲ್ಲಿ ಮೃತದೇಹ ರವಾನೆ

ಟೂರಿಸ್ಟ್ ಕಾರಿನಲ್ಲಿ ಮೃತದೇಹ ಕೊಂಡೊಯ್ಯುತ್ತಿದ್ದುದ್ದನ್ನು ಶಿರೂರ್ ಟೋಲ್ ಗೇಟ್ ಬಳಿ ಆಂಬ್ಯುಲೆನ್ಸ್ ಚಾಲಕ ತಡೆದು ನಿಲ್ಲಿಸಿದ ಘಟನೆ ನಡೆದಿದೆ.ಸ್ವಿಫ್ಟ್ ಡಿಜೈರ್ ಕಾರಿನ ಢಿಕ್ಕಿಯಲ್ಲಿ ಮೃತದೇಹವನ್ನು ಇರಿಸಿ ರವಾನೆ ಮಾಡುತ್ತಿದ್ದ. ಕಾರಿನಲ್ಲಿ ಮೃತದೇಹ ಕೊಂಡೊಯ್ಯುತ್ತಿದ್ದ ಚಾಲಕನಿಗೆ ಹಿಗ್ಗಾಮುಗ್ಗಾ ತರಾಟೆಗೆ ತೆಗೆದುಕೊಂಡ ಘಟನೆ ನಡೆಯಿತು.ಆಂಬ್ಯುಲೆನ್ಸ್‌ನಲ್ಲಿ ಜಾಸ್ತಿ ಹಣ ಕೇಳಿದ್ದಕ್ಕಾಗಿ ಕಾರಿನಲ್ಲಿ ಸಾಗಾಟ ಮಾಡಲಾಗುತ್ತಿದೆ ಎಂದು ವಾರೀಸುದಾರರು

ಪಡುಬಿದ್ರಿ: ನಾಪತ್ತೆಯಾದ ವ್ಯಕ್ತಿ ಶವವಾಗಿ ಪತ್ತೆ

ಪಡುಬಿದ್ರಿ: ಕಳೆದ ಎರಡು ದಿನದ ಹಿಂದೆ ನಾಪತ್ತೆಯಾದ ಪಲಿಮಾರು ಗುಂಡಿ ನಿವಾಸಿ ವ್ಯಕ್ತಿಯ ಶವ ಪಕ್ಕದ ಕೆಸರು ತುಂಬಿದ ಹಳ್ಳವೊಂದರಲ್ಲಿ ಪತ್ತೆಯಾಗಿದೆ.ಮೃತರು ಪಲಿಮಾರು ಗುಂಡಿ ನಿವಾಸಿ, ಮುಂಬೈ ಮಹಾ ನಗರದಲ್ಲಿ ವಾಸವಿದ್ದ ಆನಂದ ಪೂಜಾರಿ(51), ಊರಿನ ಮನೆಯಲ್ಲಿ ಕುಟುಂಬದ ದೈವದ ಧಾರ್ಮಿಕ ಕಾರ್ಯಕ್ರಮವಿದ್ದು ಅದರಲ್ಲಿ ಪಾಲ್ಗೊಂಡಿದ್ದ ಇವರು ರಾತ್ರಿ ಸುಮಾರು ಹನ್ನೆರಡರ ಸುಮಾರಿಗೆ ಪಕ್ಕದ ಮನೆಯ ಅಂಗಳದಲ್ಲಿ ನಡೆದು ಹೋಗುವುದನ್ನು ಆ ಮನೆ ಮಂದಿ ನೋಡಿದ್ದರು. ಅಲ್ಲಿಂದ

ಬ್ರಹ್ಮಾವರ: ವಿದ್ಯಾಲಕ್ಷ್ಮೀ ಸಮೂಹ ಶಿಕ್ಷಣ ಸಂಸ್ಥೆಯಲ್ಲಿ “ಮೇಕಪ್ ಅಂಡ್ ಹೇರ್ ಸ್ಟೈಲ್” ಕಾರ್ಯಾಗಾರ

ಫ್ಯಾಶನ್ ಉದ್ಯಮವು ಜನಪ್ರಿಯತೆಯನ್ನು ಗಳಿಸಿದೆ. ಫ್ಯಾಶನ್ ವಿನ್ಯಾಸದಲ್ಲಿ ವೃತ್ತಿ ಜೀವನದಲ್ಲಿ ಉತ್ತಮವಾದಂತಹ ಆಯ್ಕೆಯಾಗಿರುತ್ತದೆ ಇಂತಹ ಉತ್ತಮ ದೃಷ್ಟಿಕೋನ ಹೊಂದಿರುವ ವಿದ್ಯಾಲಕ್ಷ್ಮೀ ಸಮೂಹ ಶಿಕ್ಷಣ ಸಂಸ್ಥೆ ಇಲ್ಲಿನ ಫ್ಯಾಶನ್ ಡಿಸೈನ್ ವಿಭಾಗದ ವತಿಯಿಂದ” ಮೇಕಪ್ ಅಂಡ್ ಹೇರ್ ಸ್ಟೈಲ್” ಕಾರ್ಯಾಗಾರ ಹಮ್ಮಿಕೊಳ್ಳಲಾಗಿತ್ತು. ಈ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಕುಮಾರಿ ಆಶಿಕಾ ಫೌಂಡರ್ ಶಿಯಾ ಮೇಕ್ ಓವರ್ ಬೆಂಗಳೂರು ಇವರು ಆಗಮಿಸಿ

2023-24ನೇ ಸಾಲಿನ SSLC ಪರೀಕ್ಷಾ ಫಲಿತಾಂಶ ಪ್ರಕಟ – ಉಡುಪಿ ಪ್ರಥಮ, ದ.ಕ. ದ್ವಿತೀಯ

2023-24ನೇ ಸಾಲಿನ ಎಸ್‌ಎಸ್‌ಎಲ್‌ಸಿ ಪರೀಕ್ಷೆಯ ಫಲಿತಾಂಶ ಇದೀಗ ಪ್ರಕಟವಾಗಿದ್ದು, ಶೇ. 73.4 ಮಂದಿ ತೇರ್ಗಡೆಯಾಗಿದ್ದಾರೆ. ಕರ್ನಾಟಕ ಶಾಲಾ ಪರೀಕ್ಷೆ ಮತ್ತು ಮೌಲ್ಯ ನಿರ್ಣಯ ಮಂಡಳಿಯು ಬೆಂಗಳೂರಿನ ಮಲ್ಲೇಶ್ವರಂನ ಕಚೇರಿಯಲ್ಲಿ ಸುದ್ದಿಗೋಷ್ಠಿ ನಡೆಸಿ ಫಲಿತಾಂಶ ಪ್ರಕಟಿಸಿತು. ಕರ್ನಾಟಕ ಶಾಲಾ ಪರೀಕ್ಷೆ ಮತ್ತು ಮೌಲ್ಯ ನಿರ್ಣಯ ಮಂಡಳಿ ಅಧ್ಯಕ್ಷೆ ಮಂಜುಶ್ರೀ ಹಾಗೂ ನಿರ್ದೇಶಕ ಗೋಪಾಲಕೃಷ್ಣ ಸುದ್ದಿಗೋಷ್ಠಿ ನಡೆಸಿ ಫಲಿತಾಂಶದ ಮಾಹಿತಿ ನೀಡಿದರು. ಈ ಬಾರಿಯ ಫಲಿತಾಂಶ

ಮೇ 9ರಂದು ಎಸೆಸೆಲ್ಸಿ ವಾರ್ಷಿಕ ಪರೀಕ್ಷೆ ಫಲಿತಾಂಶ ಪ್ರಕಟ

2023-24ನೇ ಪ್ರಸಕ್ತ ಸಾಲಿನ ಎಸೆಸೆಲ್ಸಿ ವಾರ್ಷಿಕ ಪರೀಕ್ಷೆಯ ಫಲಿತಾಂಶವು ಮೇ 9ರಂದು ಪ್ರಕಟಗೊಳ್ಳಲಿದೆ. ಮಾರ್ಚ್ 25 ರಿಂದ ಎಪ್ರಿಲ್ 06ರವರೆಗೆ ಎಸೆಸೆಲ್ಸಿ ಪರೀಕ್ಷೆಯನ್ನು ನಡೆಸಲಾಗಿತ್ತು. ಈಗ ಎಲ್ಲ ವಿಷಯಗಳ ಉತ್ತರ ಪತ್ರಿಕೆಗಳ ಮೌಲ್ಯಮಾಪನ ಕಾರ್ಯವು ಮುಕ್ತಾಯಗೊಂಡಿದೆ. ಈ ಹಿನ್ನೆಲೆಯಲ್ಲಿ ಗುರುವಾರ ಫಲಿತಾಂಶವನ್ನು ಪ್ರಕಟಿಸಲಾಗುತ್ತಿದೆ ಎಂದು ಕರ್ನಾಟಕ ಶಾಲಾ ಪರೀಕ್ಷೆ ಮತ್ತು ಮೌಲ್ಯನಿರ್ಣಯ ಮಂಡಳಿಯು ತಿಳಿಸಿದೆ.

ಕಾರ್ಕಳ: ಸುಡುಮದ್ದು ತಯಾರಿಕಾ ಘಟಕದಲ್ಲಿ ಸ್ಫೋಟ – ಇಬ್ಬರು ಮಹಿಳೆಯರಿಗೆ ಗಾಯ

ಸುಡುಮದ್ದು ತಯಾರಿಕಾ ಘಟಕ ಸಿಡಿದು ಇಬ್ಬರು ಮಹಿಳೆಯರಿಗೆ ಗಾಯಗಳಾದ ಘಟನೆ ಕಾರ್ಕಳ ಕಸಬಾ ಗ್ರಾಮದ ಹಿಮ್ಮುಂಜೆ ಬಳಿಯ ಕಜೆ ಎಂಬಲ್ಲಿ ನಡೆದಿದೆ. ಕಾರ್ಕಳ ಕಸಬಾ ಗ್ರಾಮದ ಹಿಮ್ಮುಂಜೆ ಬಳಿಯ ಕಜೆ ಎಂಬಲ್ಲಿ ಕೆಲವಾರು ವರ್ಷಗಳಿಂದ ಸುಡುಮದ್ದು ತಯಾರಿಕಾ ಘಟಕ ಕಾರ್ಯಾಚರಿಸುತ್ತಿದ್ದು, ಎಂದಿನಂತೆ ಇಂದೂ ಬೆಳಗ್ಗೆ ಸುಡುಮದ್ದು ತಯಾರಿಕೆ ಸಂದರ್ಭ ಅನಿರೀಕ್ಷಿತವಾಗಿ ಸ್ಫೋಟಗೊಂಡು ಕೆಲಸ ನಿರ್ವಹಿಸುತ್ತಿದ್ದ ಮಹಿಳೆಯರಿಬ್ಬರು ಗಾಯಗೊಂಡು ಆಸ್ಪತ್ರೆಗೆ ಸಾಗಿಸಲಾಗಿದೆ. ಸುಡುಮದ್ದು

ಬ್ರಹ್ಮಾವರ : ವಿದ್ಯಾಲಕ್ಷ್ಮೀ ಸಮೂಹ ಶಿಕ್ಷಣ ಸಂಸ್ಥೆ ಬ್ರಹ್ಮಾವರ ಇಲ್ಲಿ “ನೋಶ್ ಅನ್ವೇಶನ್” ಕಾರ್ಯಕ್ರಮ

ವಿದ್ಯಾಲಕ್ಷ್ಮೀ ಸಮೂಹ ಶಿಕ್ಷಣ ಸಂಸ್ಥೆ ಬ್ರಹ್ಮಾವರ ಇಲ್ಲಿನ ಆಹಾರ ತಂತ್ರಜ್ಞಾನ ವಿಭಾಗದಿಂದ ” ನೋಶ್ ಅನ್ವೇಶನ್” ಎನ್ನುವ ಕಾರ್ಯಕ್ರಮ ನಡೆಯಿತು “ನೋಶ್” ಎಂದರೆ ಆಹಾರ . ನವೀನವಾದ ಮಾದರಿಯ ಹೊಸ ಉತ್ಪನ್ನಗಳನ್ನು ತಯಾರಿಸುವ ಕುರಿತಾಗಿ ಮಾಹಿತಿ ನೀಡಲಾಯಿತು. ವಿದ್ಯಾರ್ಥಿಗಳಿಗೆ ಹೊಸ ಆಹಾರ ಉತ್ಪನ್ನಗಳನ್ನು ತಯಾರಿಸುವ ಸ್ಪರ್ಧೆಯನ್ನು ಏರ್ಪಡಿಸಿ ಬಹುಮಾನ ವಿತರಣೆಯನ್ನು ನಡೆಸಲಾಯಿತು. ಈ ಕಾರ್ಯಕ್ರಮಕ್ಕೆ ಅತಿಥಿಯಾಗಿಯಾಗಿ ಶ್ರೀ ವೆರ್ಲಿನ್

ಶ್ರೀ ಶಾರದ ಸದ್ವಿದ್ಯಾ ಶಿಬಿರ ಸಮಾರೋಪ ಸಮಾರಂಭ ಕಾರ್ಯಕ್ರಮ

ಬೈಂದೂರು ತಾಲೂಕಿನ ನಾವುಂದ ಬಡಾಕೆರೆ ಧಾರ್ಮಿಕ ಮಂದಿರದಲ್ಲಿ ಕಳೆದ 21 ದಿನಗಳ ಕಾಲ ನಡೆದ ಶ್ರೀ ಶಾರದ ಸದ್ವಿದ್ಯಾ ಶಿಬಿರದ ಸಮಾರೋಪ ಸಮಾರಂಭ ಕಾರ್ಯಕ್ರಮ ನಡೆಯಿತು.ವಿದ್ಯಾರ್ಥಿಗಳು ಶಿಬಿರದ ಅನುಭವನ್ನು ಹಂಚಿಕೊಂಡರು.ವೇದಾಂತ ಪ್ರಾಧ್ಯಾಪಕರು ಕೇಂದ್ರಿಯ ಸಂಸ್ಕøತ ವಿಶ್ವವಿದ್ಯಾನಿಲಯ ರಾಜೀವ್ ಗಾಂಧಿ ಪರಿಸರ ಶೃಂಗೇರಿ ಡಾ.ಗಣೇಶ್ ಈಶ್ವರ ಭಟ್ ಅವರು ಮಾತನಾಡಿ,ಆರ್ಯುವೇದ ಮತ್ತು ವೇದ ಶಾಸ್ತ್ರ ಸೇರಿದಂತೆ ಸನಾತನ ಪರಂಪರೆನ್ನು ಹೊಂದಿರುವ ಭಾರತೀಯ ವಿದ್ಯೆಗೆ ಆಧುನಿಕ

ಬೈಂದೂರು ಸುರ್ಕುಂದ ವಾರ್ಡ್‍ನಲ್ಲಿ ಬಿರುಸಿನ ಪ್ರಚಾರ

ಬೈಂದೂರು:ರಾಷ್ಟ್ರಭಕ್ತರ ಬಳಗದ ವತಿಯಿಂದ ಬೈಂದೂರು ವಿಧಾನಸಭಾ ಕ್ಷೇತ್ರದ ಸುರ್ಕುಂದ ವಾರ್ಡ್ ಬೂತ್ ನಂ.34 ರಲ್ಲಿ ನಿತ್ಯ ಮೊಗವೀರ ಅವರ ಸಾರಥ್ಯದಲ್ಲಿ ವೆಂಕಟೇಶ ಕಲ್ಮಕ್ಕಿ,ಪ್ರಶಾಂತ್ ಮೊಗವೀರ ಹಾಗೂ ಸ್ಥಳೀಯರ ಸಹಕಾರದಲ್ಲಿ ಮಾಜಿ ಮುಖ್ಯ ಮಂತ್ರಿ ಶಿವಮೊಗ್ಗ ಲೋಕಸಭಾ ಕ್ಷೇತ್ರದ ಪಕ್ಷೇತರ ಅಭ್ಯರ್ಥಿ ಕೆ.ಎಸ್ ಈಶ್ವರಪ್ಪ ಪರವಾಗಿ ಮನೆ ಭೇಟಿ ಮಾಡಿ ಬಿರುಸಿನ ರೀತಿಯಲ್ಲಿ ಮತ ಪ್ರಚಾರವನ್ನು ಮಾಡಲಾಯಿತು.ಕಾರ್ಯಕರ್ತರು ಬಿರು ಬಿಸಿಲನ್ನು ಲೆಕ್ಕಿಸದೆ ಪ್ರಚಾರದ ಕಾರ್ಯದಲ್ಲಿ