ಕುಂದಾಪುರ: ಬರ್ಮಿಂಗ್ಹ್ಯಾಮ್ನಲ್ಲಿ ನಡೆದ ಕಾಮನ್ವೆಲ್ತ್ ಕ್ರೀಡಾಕೂಟದಲ್ಲಿ ವೇಯ್ಟ್ ಲಿಫ್ಟಿಂಗ್ 61 ಕೆಜಿ ವಿಭಾಗದಲ್ಲಿ ಕಂಚಿನ ಪದಕ ಗೆದ್ದು ಭಾನುವಾರ ಹುಟ್ಟೂರಿಗೆ ಆಗಮಿಸಿದ ತಾಲೂಕಿನ ಗುರುರಾಜ್ ಪೂಜಾರಿ ಅವರನ್ನು ಕುಂದಾಪುರದ ಶಾಸ್ತ್ರೀವೃತ್ತದಲ್ಲಿ ಚಂಡೆ ವಾದನಗಳ ಸಹಿತ ಅದ್ದೂರಿಯಾಗಿ ಸ್ವಾಗತಿಸಲಾಯಿತು. ಉಡುಪಿಯಲ್ಲಿ ಜಿಲ್ಲಾಡಳಿತ
ಕನ್ನಡ ಸಾಹಿತ್ಯ ಪರಿಷತ್ತು ಉಡುಪಿ ತಾಲೂಕು ಘಟಕ , ಮಲಬಾರ್ ಗೋಲ್ಡ್ ಆಂಡ್ ಡೈಮಂಡ್ಸ್ ಉಡುಪಿ, ಹಾಗೂ ರಂಗಸಂಗಾತಿ ಮಂಗಳೂರು ಆಶ್ರಯದಲ್ಲಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಮಾಜಿ ನಿರ್ದೇಶಕ ಹಾಗೂ ಕನ್ನಡ ಸುಗಮ ಸಂಗೀತ ಪರಿಷತ್ತಿನ ಅಧ್ಯಕ್ಷ ವೈ ಕೆ ಮುದ್ದುಕೃಷ್ಣ ಅವರ ಆತ್ಮಕಥನ ‘ಹಾಡು ಹಿಡಿದ ಜಾಡು ‘ ಕೃತಿ ಅನಾವರಣವು ಶನಿವಾರ ಉಡುಪಿಯ ಮಲಬಾರ್ ಗೋಲ್ಡ್ ಅಂಡ್ ಡೈಮಂಡ್ಸ್ ಶಾಖೆಯಲ್ಲಿ ಲೋಕಾರ್ಪಣೆಗೊಂಡಿತು. ಕೃತಿಯನ್ನು ಚಲನಚಿತ್ರ ನಿರ್ದೇಶಕ ಹಾಗೂ
ಉಡುಪಿ ಆ.7, ಉಡುಪಿ ನಗರದ ಪುತ್ತೂರಿನಲ್ಲಿ ಕಳೆದ ಎರಡು ದಿನಗಳಿಂದ ಸಾರ್ವಜನಿಕರ ಮನೆಗಳಿಗೆ ರಾತ್ರಿ ಹೊತ್ತು ಪ್ರವೇಶ ಮಾಡಲು ಪ್ರಯತ್ನಿಸುವ ಹಾಗೂ ಭಯದ ವಾತಾವರಣ ಸೃಷ್ಟಿಸಿದ ಮಾನಸಿಕ ಯುವಕನನ್ನು ವಿಶು ಶೆಟ್ಟಿ ವಶಕ್ಕೆ ಪಡೆದು ಬಾಳಿಗಾ ಆಸ್ಪತ್ರೆಗೆ ದಾಖಲಿಸಿದ ಘಟನೆ ಆ.7ರ ರಾತ್ರಿ ನಡೆದಿದೆ. ರಕ್ಷಣಾ ಕಾರ್ಯದಲ್ಲಿ ಪುತ್ತೂರಿನ ತೌಫಿಕ್ ಸಹಕರಿಸಿದ್ದಾರೆ. ಯುವಕನು ತನ್ನ ಹೆಸರು ಬಸವನ್ ತಂದೆ ನಂಜುಂಡ ತಾಯಿ ರುದ್ರಮ್ಮ ಹಾಗೂ ಮನೆ ಬೆಂಗಳೂರಿನ ಮಹಾಲಕ್ಷ್ಮಿ ಲೇಔಟ್
ಇದೇ ಬರುವ ಸೆಪ್ಟೆಂಬರ್ 26 ರಿಂದ ಅಕ್ಟೊಬರ್ 5 ರವರೆಗೆ ನವರಾತ್ರಿಯ ಪ್ರಯುಕ್ತ ಉಚ್ಚಿಲ ಶ್ರೀ ಮಹಾಲಕ್ಷ್ಮೀ ದೇವಸ್ಥಾನದಲ್ಲಿ ನಡೆಯುವ “ಉಚ್ಚಿಲ ದಸರಾ ಉತ್ಸವ-2022″ದ ರೂಪುರೇಷೆಗಳ ನಾಡೋಜ ಡಾ. ಜಿ. ಶಂಕರ್ ಅವರ ನೇತೃತ್ವದಲ್ಲಿ ಹಾಗೂ ದ. ಕ ಮೊಗವೀರ ಮಹಾಜನ ಸಂಘದ ಅಧ್ಯಕ್ಷರಾದ ಶ್ರೀ ಜಯ. ಸಿ. ಕೋಟ್ಯಾನ್ ಉಪಸ್ಥಿತಿಯಲ್ಲಿ ದಸರಾ ಸಮಿತಿಯ ಸದಸ್ಯರ ಸಭೆ ನಡೆಸಲಾಯಿತು. ಶ್ರೀ ಕ್ಷೇತ್ರ ಉಚ್ಚಿಲದಲ್ಲಿ ಈ ಬಾರಿ ನವರಾತ್ರಿ ಉತ್ಸವವನ್ನು ದಸರಾ ರೀತಿಯಲ್ಲಿ
ಪಡುಬಿದ್ರಿಯ ಪುರಾಣ ಪ್ರಸಿದ್ದ ಶ್ರೀ ಮಹಾಲಿಂಗೇಶ್ವರ ಮಹಾಗಣಪತಿ ದೇವಳದಲ್ಲಿ ವಿಶೇಷ ಕಟ್ಟದಪ್ಪ ಸೇವೆ ಜರಗಿತು.ಅವಿಭಜಿತ ಜಿಲ್ಲೆಯಲ್ಲದೆ ದೇಶ ವಿದೇಶಗಳ ಭಕ್ತರು ಇಲ್ಲಿ ನಡೆಯುವ ವಿಶೇಷ ಕಟ್ಟದಪ್ಪ ಸೇವೆಯಲ್ಲಿ ಪಾಲ್ಗೊಳ್ಳುವುದು ಇಲ್ಲಿನ ವಿಶೇಷತೆ. ಶ್ರೀಕ್ಷೇತ್ರದಲ್ಲಿ ನಿರಂತರ ನಡೆಯುವ ಬೆಲ್ಲದಪ್ಪ ಮತ್ತು ಪೆÇಟ್ಟಪ್ಪ ಸೇವೆಗಳು ಇಲ್ಲಿನ ವಿಶೇಷ ಸೇವೆ. ಈ ದಿನ ನಡೆಯುವುದು ಸಾರ್ವಜನಿಕ ಕಟ್ಟದಪ್ಪ(ಕಟಾಹಪೂಪ)ಸೇವೆ. ಪಡುಬಿದ್ರಿ ಗ್ರಾಮದ ಕಲ್ಲಟ್ಟೆ ಎಂಬ ಪ್ರದೇಶದಲ್ಲಿ
ಶ್ರಮ್ ಚಾರಿಟೇಬಲ್ ಟ್ರಸ್ಟ್ ರಿ ಉಪ್ಪುಂದ ಮತ್ತು ಉಡುಪಿ ಜಿಲ್ಲಾ ಭಾರತೀಯ ಕಟ್ಟಡ ಮತ್ತು ಇತರೆ ನಿರ್ಮಾಣ ಕಾರ್ಮಿಕರ ಸಂಘ ಇವರ ವತಿಯಿಂದ ವರಮಹಾಲಕ್ಷ್ಮಿ ಪೂಜೆ ಕಾರ್ಯಕ್ರಮ ಹಮ್ಮಿಕೊಳ್ಳಲಾಯಿತು.ಶ್ರೀ ದೇವರಿಗೆ ವಿಶೇಷ ಬಾಳೆದಿಂಡಿನ ಗೋಪುರ ನಿರ್ಮಿಸಿ ವಿವಿಧ ಜಾತಿಯ ಹೂಗಳಿಂದ ಜಾತಿಯ ಅಲಂಕರಿಸಲಾಗಿತ್ತು.ಮಣೆಯ ಮೇಲೆ ಹೊಸ ಬಟ್ಟೆಯನ್ನು ಹಾಕಿ ಅದರ ಮೇಲೆ ಅಕ್ಕಿ ಹರಡಿ ಕಳಶ ಇಟ್ಟು ಅದಕ್ಕೆ ಕುಂಕುಮ, ಅರಿಸಿಣ ಹಚ್ಚಲಾಗಿತ್ತು, ಕಳಸದ ಮೇಲೆ ತೆಂಗಿನಕಾಯಿ ಇಟ್ಟು
75ನೇ ಸ್ವಾತಂತ್ರೋತ್ಸವದ ಅಂಗವಾಗಿ ಉಡುಪಿ ಜಿಲ್ಲಾ ಕಾಂಗ್ರೆಸ್ ವತಿಯಿಂದ ನಡೆದ ಕಾಲ್ನಡಿಗೆ ಜಾಥವನ್ನು ಎಐಸಿಸಿ ಕಾರ್ಯದರ್ಶಿ ಮಯೂರ್ ಜಯಕುಮಾರ್ ದೀಪ ಬೆಳಗಿಸುವ ಮೂಲಕ ಚಾಲನೆ ನೀಡಿದ್ದಾರೆ. ಬಳಿಕ ಮಾತನಾಡಿದ ಅವರು ಕಾಂಗ್ರೆಸ್ ಪಕ್ಷವು… ದೇಶ ಸ್ವಾತಂತ್ರ್ಯ ಪಡೆಯಲು ಬಹಳಷ್ಟು ತ್ಯಾಗ ಬಲಿದಾನಗಳನ್ನು ನಡೆಸಿದೆ. ಇದೀಗ ದೇಶ ಕಾಯುವೆ ಎಂಬವರು ನಾನಾ ಹೆಸರಲ್ಲಿ ಗುರುತಿಸಿಕೊಂಡು ಬ್ರಿಟಿಷರೊಂದಿಗೆ ಸೇರಿಕೊಂಡು ದೇಶಕ್ಕೆ ಮೋಸ ಮಾಡಿದವರಾಗಿದ್ದಾರೆ ಎಂದರು. ಮಾಜಿ ಸಚಿವ
ಕಾಪುವಿನ ಉದ್ಯಾವರದಲ್ಲಿ ತೆರೆದ ಬಾವಿಗೆ ಬಿದ್ದ ದನವನ್ನು ಉಡುಪಿಯ ಅಗ್ನಿಶಾಮಕ ದಳದ ಸಿಬ್ಬಂದಿ ರಕ್ಷಣೆ ಮಾಡಿದ್ದಾರೆ.ಉದ್ಯಾವರದ ಕೆಮ್ ತೂರು ಶಾರದಾ ಭಜನಾ ಮಂಡಳಿಯ ಸಮೀಪ ತೆರೆದ ಬಾವಿಗೆ ಈ ದನ ಬಿದ್ದಿತ್ತು.ತಕ್ಷಣ ಅಗ್ನಿಶಾಮಕ ದಳಕ್ಕೆ ಮಾಹಿತಿ ನೀಡಲಾಯಿತು.ಸ್ಥಳಕ್ಕೆ ಧಾವಿಸಿ ಬಂದ ಉಡುಪಿ ಜಿಲ್ಲಾ ಅಗ್ನಿಶಾಮಕ ದಳದ ಸಿಬ್ಬಂದಿ,ಬಾವಿಗೆ ಹಗ್ಗ ಇಳಿಸಿ ಉಪಾಯದಿಂದ ದನವನ್ನು ಮೇಲೆ ಹಾಕುವ ಮೂಲಕ ರಕ್ಷಣೆ ಮಾಡಿದ್ದಾರೆ. ಸದ್ಯ ದನ ಆರೋಗ್ಯವಾಗಿದ್ದು ಆರೈಕೆ
ಮದುವೆಯಾಗಿ ಐದು ದಶಕಗಳ ಕಾಲ ಜೊತೆಯಾಗಿ ಬಾಳಿ ಸಿಹಿ ಕಹಿ, ನೋವು ನಲಿವು ಸವಾಲುಗಳನ್ನು ಎದುರಿಸಿದ ದಂಪತಿ ಸಾವಿನಲ್ಲೂ ಒಂದಾದ ಅಪರೂಪದ ಘಟನೆ ಕಾಪುವಿನ ಬೆಳಪುವಿನಲ್ಲಿ ನಡೆದಿದೆ. ಬೆಳಪು ಗ್ರಾಮದ ಧೂಮಪ್ಪ ಶೆಟ್ಟಿ ಮನೆ ಕೃಷ್ಣ ಯಾನೆ ಕುಟ್ಟಿ ಶೆಟ್ಟಿ (80) ಮತ್ತು ಅವರ ಪತ್ನಿ ಮುಂಡ್ಕೂರು ಅಂಗಡಿಗುತ್ತು ರೇವತಿ ಕೆ. ಶೆಟ್ಟಿ (75) ಸಾವಿನಲ್ಲೂ ಒಂದಾದ ದಂಪತಿ.ಕೃಷ್ಣ ಯಾನೆ ಕುಟ್ಟಿ ಶೆಟ್ಟಿ ಅವರು ವಯೋ ಸಹಜ ಕಾರಣಗಳಿಂದಾಗಿ ಮಂಗಳವಾರ ಮುಂಜಾನೆ ಮೃತಪಟ್ಟಿದ್ದು ಮಕ್ಕಳು
ಕಾರ್ಕಳ: ಪಶ್ಚಿಮ ಘಟ್ಟ ಪ್ರದೇಶ ಕುದುರೆ ಮುಖ ಅಭಯಾರಣ್ಯ ವ್ಯಾಪ್ತಿಯ ನಾರಾವಿ ಭಾಗದಲ್ಲಿ ನಿನ್ನೆ ಸಂಜೆ ವೇಳೆಗೆ ಭಾರಿ ಸ್ಪೋಟದ ಸದ್ದು ಕೇಳಿ ಬಂದಿದ್ದು, ಸತತವಾಗಿ ಮಳೆ ಸುರಿದಿದೆ. ಇದರ ಜೊತೆ ಸುವರ್ಣ ನದಿಯಲ್ಲಿ ಭಾರಿ ಕೆಸರು ಮಿಶ್ರಿತ ನೀರು ಹರಿಯುತಿತ್ತು ಎನ್ನಲಾಗಿದೆ.ಸ್ಥಳೀಯರು ಹೇಳುವಂತೆ ಜಲಸ್ಪೋಟ ವಾಗಿರಬಹುದು ಎಂದು ಶಂಕೆ ವ್ಯಕ್ತಪಡಿಸಿದ್ದಾರೆ. ಕುದುರೆಮುಖ ಅಭಯಾರಣ್ಯ ವ್ಯಾಪ್ತಿ ಯಲ್ಲಿ ನದಿಯಲ್ಲಿ ಏಕಾಏಕಿ ಭಾರಿ ಕೆಸರು ನೀರಿನಿಂದ ನೀರಿನ ಹರಿವು ಉಂಟಾದ