Home ಕರಾವಳಿ Archive by category ಬಂಟ್ವಾಳ (Page 6)

ತುಂಬೆ ಡ್ಯಾಂ ನೀರು ಹರಿದು ಕೊಚ್ಚಿ ಹೋದ ಕೃಷಿ ಭೂಮಿ ; ಡ್ಯಾಂ ಗೆ ರೈತರ ಮುತ್ತಿಗೆ

ಬಂಟ್ವಾಳ: ತುಂಬೆ ವೆಂಟೆಡ್ ಡ್ಯಾಂ ನಿಂದ ನೀರು ಹರಿದು ಬರುವ ರಭಸಕ್ಕೆ ಕೆಳಭಾಗದ ಬಲ ಪಾರ್ಶ್ವ ದಲ್ಲಿರುವ ಕೃಷಿ ಭೂಮಿ ಕೊಚ್ಚಿ ಹೋಗಿ ರೈತರು ನಷ್ಟ ಅನುಭವಿಸಿದ್ದು ಸೂಕ್ತ ಪರಿಹಾರ ಹಾಗೂ ಪರ್ಯಾಯ ವ್ಯವಸ್ಥೆ ಒದಗಿಸಿಕೊಡಿ ಎಂದು ಆಗ್ರಹಿಸಿ ರೈತ ಸಂಘ ಹಸಿರು ಸೇನೆಯ ನೇತೃತ್ವದಲ್ಲಿ ರೈತರು ತುಂಬೆ ವೆಂಟೆಡ್ ಡ್ಯಾಂಗೆ ಮುತ್ತಿಗೆ ಹಾಕಿದರು. ಡ್ಯಾಂನ ಪ್ರವೇಶ ಗೇಟ್ ಗೆ ಬೀಗ

ಬಂಟ್ವಾಳ: ಫಲ್ಗುಣಿ ನದಿಗೆ ಹಾರಿ ಮಹಿಳೆ ಆತ್ಮಹತ್ಯೆ

ಬಂಟ್ವಾಳ: ಮಹಿಳೆಯೊಬ್ಬರು ಸಂಗಬೆಟ್ಟು ಸಮೀಪದ ಪುಚ್ಚಮೊಗರು ಎಂಬಲ್ಲಿ ಫಲ್ಗುಣಿ ನದಿಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಅವರು ಹಣ ದ್ವಿಗುಣಗೊಳಿಸುವ ಆಪ್ ನಲ್ಲಿ ರೂ. 21 ಲಕ್ಷ ಹೂಡಿಕೆ ಮಾಡಿ, ಹಣ ಕಳೆದುಕೊಂಡಿದ್ದರು. ಈ ಬಗ್ಗೆ ಪೊಲೀಸ್ ಠಾಣೆಗೂ ದೂರು ನೀಡಿದ್ದರು. ಕುಕ್ಕಿಪಾಡಿ ಗ್ರಾಮದ ಏರೋಡಿಯ ಜಾನ್ ಸಂತೋಷ್ ಡಿಸೋಜ ಅವರ ಪತ್ನಿ ವೀಟಾ ಮರಿನಾ ಡಿಸೋಜ (32) ಮೃತ ಮಹಿಳೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ. ಮಕ್ಕಳು ಇಲ್ಲ ಎಂಬ ಕೊರಗು ಜೊತೆಗೆ ಆರ್ಥಿಕ

ಬಂಟ್ವಾಳ: ಡಿ.26ರಂದು ರೈತ ಸಂಘದಿಂದ ತುಂಬೆ ಡ್ಯಾಂ ಬಳಿ ಆಹೋರಾತ್ರಿ ಪ್ರತಿಭಟನೆ

ಬಂಟ್ವಾಳ: ತುಂಬೆ ವೆಂಟೆಡ್ ಡ್ಯಾಂನ ಕೆಳಭಾಗದ ಬಲಪಾರ್ಶ್ವದಲ್ಲಿ ಡ್ಯಾಂನಿಂದ ಹರಿದು ಹೋಗುವ  ನೀರಿನ ರಭಸಕ್ಕೆ  ಸುಮಾರು 10 ಎಕರೆ ಯಷ್ಟು ವಿಸ್ತೀರ್ಣದ ಅಡಿಕೆ ತೋಟ, ತೆಂಗಿನ ತೋಟ, ಗದ್ದೆಗಳು ಕೊಚ್ಚಿಕೊಂಡು ಹೋಗಿ ಸ್ಥಳೀಯ ರೈತರಿಗೆ ನಷ್ಟ ಉಂಟಾದರೂ, ಜಿಲ್ಲಾಡಳಿತವಾಗಲಿ, ಮಹಾನಗರ ಪಾಲಿಕೆಯಾಗಲಿ, ಸ್ಥಳೀಯ ಜನಪ್ರತಿನಿಧಿಗಳಾಗಲಿ ಈ ಸಮಸ್ಯೆಗೆ ಯಾವುದೇ ಪರಿಹಾರ ಕಂಡುಕೊಳ್ಳದೆ ಭೂಮಿ ನದಿ ಪಾಲಾಗಲು ಸಹಕರಿಸುತ್ತಿದ್ದಾರೆ. ಈ ಹಿನ್ನೆಲೆಯಲ್ಲಿ ಜಿಲ್ಲಾ ಸಮಿತಿಯ

ವಿಟ್ಲ:ಬಸ್ ಮತ್ತು ಬೈಕ್ ನಡುವೆ ಅಪಘಾತ: ಬೈಕ್ ಸವಾರ ಮೃತ್ಯು

ವಿಟ್ಲ: ಬಸ್ ಮತ್ತು ಬೈಕ್ ನಡುವೆ ಅಪಘಾತ ಸಂಭವಿಸಿದ ಘಟನೆ ಕಬಕ  ಸಮೀಪದ ಮಿತ್ತೂರು ಎಂಬಲ್ಲಿ ನಡೆದಿದೆ. ಘಟನೆಯಲ್ಲಿ ಬೈಕ್ ಸವಾರ ಸ್ಥಳದಲ್ಲಿಯೇ ಮೃತಪಟ್ಟಿದ್ದಾರೆ‌ ಮೃತರನ್ನು ಬಿ.ಸಿ.ರೋಡ್ ಕೈಕಂಬ ನಿವಾಸಿ  ಆಶಿಮ್ ಎಂದು ಗುರುತಿಸಲಾಗಿದೆ. ಬೈಕ್ ಬಸ್ಸಿನಡಿಗೆ ಎಸೆಯಟ್ಟಿದ್ದು, ಸಂಪೂರ್ಣ ಜಖಂಗೊಂಡಿದೆ.  ಕಬಕ ಕಡೆಯಿಂದ ಬಿ.ಸಿ ರೋಡ್ ಗೆ ತೆರಳುತ್ತಿದ್ದಾಗ ಎದುರಿನಿದ ಬಂದ ಬಸ್ ಡಿಕ್ಕಿ ಹೊಡೆದಿದೆ. ಅಪಘಾತದ ತೀವ್ರತೆಗೆ ಬಸ್ ರಸ್ತೆ ಬಿಟ್ಟು ಬದಿಯ ಕಣಿವೆಗೆ ಜಾರಿ

ವಿಟ್ಲ: ಪಾಳು ಬಾವಿಗೆ ಬಿದ್ದ ನರಿಯ ರಕ್ಷಣೆ

ವಿಟ್ಲ: ಪುಣಚ ಸಮೀಪದ ತೋರಣಕಟ್ಟೆಯಲ್ಲಿ ಪಾಳು ಬಾವಿಯೊಂದಕ್ಕೆ ನರಿ ಬಿದ್ದಿದ್ದು, ಅರಣ್ಯ ಇಲಾಖೆಯ ಅಧಿಕಾರಿಗಳು ಸ್ಥಳೀಯರ ನೆರವಿನೊಂದಿಗೆ ರಕ್ಷಣೆ ಮಾಡುವಲ್ಲಿ ಯಶಸ್ವಿಯಾಗಿದ್ದಾರೆ. ನಿರುಪಯುಕ್ತವಾದ ಬಾವಿಯ ಒಳಗೆ ಆಹಾರ ಅರಸಿಕೊಂಡು ಬಂದ ನರಿ ಬಿದ್ದಿದ್ದು, ಅದರ ಕೂಗು ಕೇಳಿ ಸ್ಥಳೀಯರು ಅರಣ್ಯ ಇಲಾಖೆಗೆ ಮಾಹಿತಿಯನ್ನು ನೀಡಿದ್ದಾರೆ. ಸಹಾಯಕ ವಲಯ ಅರಣ್ಯಾಧಿಕಾರಿ ಸೀತಾರಾಮ ನೇತೃತ್ವದಲ್ಲಿ ಸ್ಥಳೀಯ ನಿವಾಸಿ ವಾಮನ್ ನಾಯಕ್ ಎಂಬರು ಬಾವಿಗೆ ಇಳಿದು ನರಿಯನ್ನು ಗೋಣಿಗೆ

ಬಂಟ್ವಾಳ: ಸಾಮಾಜಿಕ ಕಾರ್ಯಕರ್ತ ಪದ್ಮನಾಭ ಸಾಮಂತ ಹತ್ಯೆಗೆ ಸಂಚು.!

ಬಂಟ್ವಾಳ ವಿಧಾನಸಭಾ ಕ್ಷೇತ್ರದ ಅಕ್ರಮ-ಸಕ್ರಮ ಸಮಿತಿಯಲ್ಲಾದ ಭ್ರಷ್ಟಾಚಾರವನ್ನು ಬಯಲು ಮಾಡಿದ ದ್ವೇಷದಲ್ಲಿ ಸಾಮಾಜಿಕ ಕಾರ್ಯಕರ್ತ ಪದ್ಮನಾಭ ಸಾಮಂತ್ ವಾಮದಪದವು ಅವರ ಹತ್ಯೆಗೆ ಸಂಚು ನಡೆಸಿರುವುದು ಬೆಳಕಿಗೆ ಬಂದಿದೆ. ಈ ಬಗ್ಗೆ ಪದ್ಮನಾಭ ಸಾಮಂತ್ ಅವರು ಪುಂಜಾಲಕಟ್ಟೆ ಠಾಣೆಗೆ ದೂರು ನೀಡಿದ್ದು ಇಬ್ಬರ ವಿರುದ್ಧ ಪ್ರಕರಣ ದಾಖಲಾಗಿದೆ. 2018-2023 ನೇ ಸಾಲಿನಲ್ಲಿ ನಡೆದ ಬಂಟ್ವಾಳ ತಾಲೂಕಿನ ಅಕ್ರಮ-ಸಕ್ರಮದ ಭೂ ಮಂಜೂರಾತಿಗಳ ಭ್ರಷ್ಟಾಚಾರವನ್ನು ಪದ್ಮನಾಭ ಸಾಮಂತ ಬಯಲು

ಅಕ್ಷಯ ಪಾತ್ರೆ ಪ್ರತಿಷ್ಠಾನದಿಂದ ಅತ್ಯಾಧುನಿಕ ಅಡುಗೆ ಮನೆಗೆ ಚಾಲನೆ

ಬಂಟ್ವಾಳ: ಅಕ್ಷಯಪಾತ್ರೆ ಫೌಂಡೇಶನ್‍ನ ವತಿಯಿಂದ ಕೃಷ್ಣನ ಪ್ರಸಾದವನ್ನು ಮಕ್ಕಳಿಗೆ ವಿತರಿಸುವ ಸತ್ಕಾರ್ಯ ಹಲವು ವರ್ಷಗಳಿಂದ ನಡೆಯುತ್ತಿದೆ. ಇಸ್ಕಾನ್ ಫೌಂಡೇಶನ್ ಮೂಲಕ ಇಡೀ ದೇಶದಲ್ಲಿ 23 ಲಕ್ಷ ಮಂದಿಗೆ ಮಧ್ಯಾಹ್ನದ ಊಟ ತಲುಪುತ್ತಿದ್ದು, ಇದು ಅತ್ಯಂತ ಶ್ಲಾಘನೀಯ ಕೆಲಸವಾಗಿದೆ ಎಂದು ಉಡುಪಿಯ ಪುತ್ತಿಗೆ ಮಠದ ಜಗದ್ಗುರು ಶ್ರೀ ಮಧ್ವಾಚಾರ್ಯ ಮೂಲ ಮಹಾ ಸಂಸ್ಥಾನದ ಶ್ರೀ ಸುಗುಣೇಂದ್ರ ತೀರ್ಥ ಸ್ವಾಮೀಜಿಯವರು ಹೇಳಿದರು. ಅಕ್ಷಯ ಪಾತ್ರೆ ಫೌಂಡೇಶನ್ ಬಂಟ್ವಾಳ

ಬಂಟ್ವಾಳ: 2ನೇ ವರ್ಷದ ಚಿಣ್ಣರೋತ್ಸವಕ್ಕೆ ಸಿದ್ಧಗೊಂಡಿದೆ ದಡ್ಡಲಕಾಡು ಸರಕಾರಿ ಆಂಗ್ಲಮಾಧ್ಯಮ ಪ್ರೌಢಶಾಲೆ

ಬಂಟ್ವಾಳ: ಶಾಲಾ ವಿದ್ಯಾರ್ಥಿಗಳ ಸಾಂಸ್ಕೃತಿಕ, ಹಾಗೂ ಕ್ರೀಡಾ ಪ್ರತಿಭಾ ಪ್ರದರ್ಶನಕ್ಕೆ ವೇದಿಕೆಯೊದಗಿಸುವ ನಿಟ್ಟಿನಲ್ಲಿ ಎರಡನೇ ವರ್ಷದ ದಡ್ಡಲಕಾಡು ಚಿಣ್ಣರೋತ್ಸವಕ್ಕೆ ಬಂಟ್ವಾಳ ತಾಲೂಕಿನ ದಡ್ಡಲಕಾಡು ಸರಕಾರಿ ಆಂಗ್ಲ ಮಾಧ್ಯಮ ಪ್ರೌಢಶಾಲೆ ಸಿದ್ದಗೊಳ್ಳುತ್ತಿದೆ. ಕಳೆದ ವರ್ಷದ ಅತ್ಯದ್ಭುತ ಯಶಸ್ಸಿನಿಂದ ಪ್ರೇರಣೆ ಪಡೆದು ಈ ವರ್ಷವೂ ಹಲವಾರು ವಿಶಿಷ್ಠ, ವಿನೂತನ ಕಾರ್ಯಕ್ರಮ ನೀಡಲು ಶಾಲೆಯ ಸಾವಿರಾರು ವಿದ್ಯಾರ್ಥಿಗಳು ತಯಾರಾಗಿದ್ದು ಸರ್ಕಾರಿ ಶಾಲೆಯಲ್ಲಿ ಇಂತಹ

ಬಂಟ್ವಾಳ:ಪಣೋಲಿಬೈಲಿನಲ್ಲಿ ವರ್ಷಾವಧಿ ಕೋಲ ಸಂಪನ್ನ

ಬಂಟ್ವಾಳ: ತುಳುನಾಡಿನ ಕಾರಣಿಕ ಪ್ರಸಿದ್ದ ದೈವಕ್ಷೇತ್ರ ಪಣೋಲಿಬೈಲು ಶ್ರೀ ಕಲ್ಲುರ್ಟಿ ದೈವಸ್ಥಾನದಲ್ಲಿ ಶುಕ್ರವಾರ ರಾತ್ರಿ ವರ್ಷಾವಧಿ ಕೋಲ ನಡೆಯಿತು. ಬೆಳಿಗ್ಗೆ ಸಜೀಪ ಮಾಗಣೆಯ ತಂತ್ರಿ ಎಂ. ಸುಬ್ರಹ್ಮಣ್ಯ ಭಟ್ ಅವರ ಪೌರೋಹಿತ್ಯದಲ್ಲಿ ಪುಣ್ಯಾಹ, ಪಂಚಗವ್ಯ ದ್ವಾದಶ ನಾಳಿಕೇರ ಗಣಯಾಗ, ನಾಗತಂಬಿಲ, ಫಲಪಂಚಾಮೃತ ಅಭಿಷೇಕ, ಆಶ್ಲೇಷ ಬಲಿ ಪೂಜೆ, ಪಲ್ಲಪೂಜೆ ನಡೆಯಿತು. ಶಾಸಕ ರಾಜೇಶ್ ನಾಯ್ಕ್, ಮಾಜಿ ಸಚಿವ ಬಿ. ರಮನಾಥ ರೈ, ಜಿಲ್ಲಾ ಪಂಚಾಯತಿ ಮಾಜಿ ಸದಸ್ಯ ಚಂದ್ರಪ್ರಕಾಶ್

ಲೋಕಸಭಾ ಅಭ್ಯರ್ಥಿ ಯಾರೇ ಆದರೂ ನನ್ನ ಬೆಂಬಲವಿದೆ : ಸಂಸದ ನಳಿನ್ ಕುಮಾರ್ ಕಟೀಲ್

ಬಂಟ್ವಾಳ: ಬಿಜೆಪಿ ಬಂಟ್ವಾಳ ವಿಧಾನಸಭಾ ಕ್ಷೇತ್ರದ ವತಿಯಿಂದ ರಾಜ್ಯ ಬಿಜೆಪಿ ನಿಕಟಪೂರ್ವ ಅಧ್ಯಕ್ಷ, ಸಂಸದ ನಳಿನ್ ಕುಮಾರ್ ಕಟೀಲು ಅವರಿಗೆ ಅಭಿನಂದನೆ ಸಮಾರಂಭ ಬಿ.ಸಿ.ರೋಡಿನ ಸ್ಪರ್ಶಾ ಕಲಾಮಂದಿರದಲ್ಲಿ ನಡೆಯಿತು. ಅಭಿನಂದನೆ ಸ್ವೀಕರಿಸಿ ನಳಿನ್ ಕುಮಾರ್ ಕಟೀಲು ಮಾತನಾಡಿ ನಾನು ಸಾಧನೆ ಮಾಡಿದೆನೆಂದು ಹೇಳುವುದಿಲ್ಲ. ರಾಜಕೀಯಕ್ಕೆ ಇಚ್ಚೆಯಿಂದ ಬಂದವನಲ್ಲ. ಸಂಘದ ಹಿರಿಯ ಸೂಚನೆಯಂತೆ ಸಂಸದನಾಗಿ ಜನಸೇವೆ ಮಾಡಿದ್ದೇನೆ. ಸಂಘದ ವಿಚಾರಧಾರೆಯನ್ನು ಒಪ್ಪಿಕೊಂಡು ರಾಷ್ಟ್ರದ